ETV Bharat / international

ಅಮೆರಿಕದ ವಿಕ್ಟರ್ ಆಂಬ್ರೋಸ್, ಗ್ಯಾರಿ ರುವ್ಕುನ್​ರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ - Nobel Prize For Medicine - NOBEL PRIZE FOR MEDICINE

ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024 ರ ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ನೊಬೆಲ್ ಪ್ರಶಸ್ತಿ (ಸಂಗ್ರಹ ಚಿತ್ರ)
ನೊಬೆಲ್ ಪ್ರಶಸ್ತಿ (ಸಂಗ್ರಹ ಚಿತ್ರ) (AP)
author img

By PTI

Published : Oct 7, 2024, 7:55 PM IST

ಸ್ಟಾಕ್​ಹೋಂ: ಮೈಕ್ರೋಆರ್​ಎನ್ಎ ಆವಿಷ್ಕಾರ ಮತ್ತು ಪೋಸ್ಟ್-ಟ್ರಾನ್ ಸ್ಕ್ರಿಪ್ಷನಲ್ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರದ ಬಗ್ಗೆ ಸಂಶೋಧನೆ ಮಾಡಿದ್ದಕ್ಕಾಗಿ ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ಜೀನ್ ಚಟುವಟಿಕೆಯು ಹೇಗೆ ನಿಯಂತ್ರಿತವಾಗುತ್ತದೆ ಎಂಬುದನ್ನು ತೋರಿಸುವ ಮೂಲಭೂತ ತತ್ವವನ್ನು ಕಂಡುಹಿಡಿದ ಇಬ್ಬರು ವಿಜ್ಞಾನಿಗಳಿಗೆ ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಿ ಗೌರವಿಲಾಗುತ್ತಿದೆ. ಜೀನ್ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆರ್​ಎನ್​ಎ ಅಣುಗಳ ಹೊಸ ವರ್ಗವಾದ ಮೈಕ್ರೋ ಆರ್​ಎನ್ಎಯನ್ನು ಅವರು ಕಂಡುಹಿಡಿದಿದ್ದಾರೆ" ಎಂದು ಸ್ವೀಡನ್​ನ ಕರೋಲಿನ್ ಸ್ಕಾ ಇನ್ ಸ್ಟಿಟ್ಯೂಟ್ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರ ಅದ್ಭುತ ಆವಿಷ್ಕಾರವು ಮಾನವರು ಸೇರಿದಂತೆ ಬಹುಕೋಶೀಯ ಜೀವಿಗಳಿಗೆ ಅಗತ್ಯವಾಗಿರುವ ಜೀನ್ ನಿಯಂತ್ರಣದ ಸಂಪೂರ್ಣ ಹೊಸ ತತ್ವವನ್ನು ಬಹಿರಂಗಪಡಿಸಿದೆ ಎಂದು ಅದು ಹೇಳಿದೆ.

ಜೀನ್ ಚಟುವಟಿಕೆಗಳು ಹೇಗೆ ನಿಯಂತ್ರಿತವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಳೆದ ಹಲವಾರು ದಶಕಗಳಿಂದ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಜೀನ್ ನಿಯಂತ್ರಣ ಪ್ರಕ್ರಿಯೆ ಹಾಳಾದರೆ ಅದು ಕ್ಯಾನ್ಸರ್, ಮಧುಮೇಹ ಅಥವಾ ರೋಗ ನಿರೋಧಕ ವೈಫಲ್ಯದಂಥ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ನಮ್ಮ ಕ್ರೋಮೋಸೋಮ್​ಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯು ನಮ್ಮ ದೇಹದ ಎಲ್ಲಾ ಜೀವಕೋಶಗಳ ಸೂಚನಾ ಕೈಪಿಡಿ ಎಂದು ಹೇಳಬಹುದು. ಪ್ರತಿಯೊಂದು ಜೀವಕೋಶವು ಒಂದೇ ರೀತಿಯ ಕ್ರೋಮೋಸೋಮ್​ಗಳನ್ನು ಹೊಂದಿರುತ್ತದೆ. ಹೀಗಾಗಿ ಪ್ರತಿ ಜೀವಕೋಶವು ನಿಖರವಾಗಿ ಒಂದೇ ರೀತಿಯ ಜೀನ್ ಗಳನ್ನು ಮತ್ತು ನಿಖರವಾಗಿ ಒಂದೇ ರೀತಿಯ ಸೂಚನೆಗಳನ್ನು ಹೊಂದಿರುತ್ತದೆ. ಆದರೂ, ಸ್ನಾಯು ಮತ್ತು ನರ ಕೋಶಗಳಂತಹ ವಿಭಿನ್ನ ಕೋಶ ಪ್ರಕಾರಗಳು ಬಹಳ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿವೆ. ಈ ವ್ಯತ್ಯಾಸಗಳು ಹೇಗೆ ಉದ್ಭವಿಸುತ್ತವೆ ಎಂಬುದಕ್ಕೆ ಉತ್ತರವು ಜೀನ್ ನಿಯಂತ್ರಣದಲ್ಲಿದೆ. ಇದು ಪ್ರತಿ ಜೀವಕೋಶಕ್ಕೆ ಸಂಬಂಧಿತ ಸೂಚನೆಗಳನ್ನು ಮಾತ್ರ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಪ್ರತಿ ಜೀವಕೋಶದ ಪ್ರಕಾರದಲ್ಲಿ ಸರಿಯಾದ ಜೀನ್​ಗಳು ಮಾತ್ರ ಸಕ್ರಿಯವಾಗಿರುವಂತೆ ಇದು ನಿಯಂತ್ರಿಸುತ್ತದೆ.

ಇದನ್ನೂ ಓದಿ: ಜೈಲಿನಲ್ಲಿ ಕುಟುಂಬಸ್ಥರು, ವಕೀಲರನ್ನು ಭೇಟಿಯಾಗದಂತೆ ಇಮ್ರಾನ್​ ಖಾನ್​ಗೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.