ETV Bharat / international

ಪನ್ನು ಹತ್ಯೆ ಯತ್ನ: ಭಾರತದ ಅಧಿಕಾರಿಯ ಪಾತ್ರ ಇದೆ ಎಂದ ಅಮೆರಿಕ - PANNUN MURDER ATTEMPT

ಅಮೆರಿಕದ ನೆಲದಲ್ಲಿ ಅಲ್ಲಿನ ಪ್ರಜೆಯ ಕೊಲೆಯತ್ನದ ಆರೋಪವನ್ನು ಭಾರತ ಅಲ್ಲಗಳೆದಿದೆ.

us-authorities-charge-indian-national-in-pannun-murder-for-hire-plot
ಗುರುಪತ್ವಂತ್​ ಸಿಂಗ್​ ಪನ್ನು (IANS)
author img

By PTI

Published : Oct 18, 2024, 6:06 PM IST

ವಾಷಿಂಗ್ಟನ್​: ಖಲಿಸ್ತಾನಿ ಹೋರಾಟಗಾರ ಗುರುಪತ್ವಂತ್​ ಸಿಂಗ್​ ಪನ್ನು ಹತ್ಯೆ ಯತ್ನದಲ್ಲಿ ಭಾರತ ಸರ್ಕಾರದ ಮಾಜಿ ಅಧಿಕಾರಿಯ ಪಾತ್ರವಿದೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.

ನ್ಯೂಯಾರ್ಕ್​ ನ್ಯಾಯಾಲಯದಲ್ಲಿ ಈ ಕುರಿತು ಗುರುವಾರ ದೋಷರೋಪಣಾ ಪಟ್ಟಿ ಸಲ್ಲಿಸಲಾಗಿದೆ.

ಭಾರತದ ಕ್ಯಾಬಿನೆಟ್​ ಸೆಕ್ರೆಟಿರಿಯೇಟ್​ ಉದ್ಯೋಗಿ ವಿಕಾಸ್​ ಯಾದವ್​ (39) ಎಂಬವರು ಭಾರತದ ವಿದೇಶಿ ಗುಪ್ತಚರ ಸಂಸ್ಥೆ 'ರಾ' (RAW) ಸೇವೆಗೆ ನಿಯೋಜನೆಗೊಂಡಿದ್ದರು ಎಂದು ಫೆಡರಲ್​ ಪ್ರಾಸಿಕ್ಯೂಷನ್​ ಆರೋಪಿಸಿದೆ. ಯಾದವ್ ಅವರ​ ಮೇಲೆ ಪನ್ನು ಹತ್ಯೆಗೆ ಯೋಜನೆ ರೂಪಿಸಿ ಹಣ ನೀಡಿ ಹಂತಕರ ನೇಮಿಸಿರುವುದು ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ಪ್ರಕರಣ ದಾಖಲಿಸಲಾಗಿದೆ.

ಈ ಪಿತೂರಿಯಲ್ಲಿ ಯಾದವ್​ ಅವರನ್ನು ಸಿಸಿ-1 (ಸಹ ಪಿತೂರಿ)ಯಾಗಿ ಗುರುತಿಸಲಾಗಿದೆ. ಅಮೆರಿಕದ ಈ ಆರೋಪಕ್ಕೆ ಭಾರತ ವಿದೇಶಾಂಗ ಇಲಾಖೆಯ ವಕ್ತಾರ ರಂದೀರ್​ ಜೈಸ್ವಾಲ್​ ಪ್ರತಿಕ್ರಿಯಿಸಿದ್ದು, ಯಾದವ್​​ ಭಾರತ ಸರ್ಕಾರದ ಉದ್ಯೋಗಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ.

ಅಮೆರಿಕದ ಅಟಾರ್ನಿ ಜನರಲ್​ ಮೆರ್ರಿಕ್​ ಬಿ ಗಾರ್ಲಂಡ್ ಪ್ರತಿಕ್ರಿಯಿಸಿ​, ಅಮೆರಿಕನ್ನರನ್ನು ಗುರಿಯಾಗಿಸಿ ಈ ರೀತಿ ಪ್ರಯತ್ನ ನಡೆಸುವುದನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಮೆರಿಕ ಪ್ರಜೆಗಳ ಹಕ್ಕನ್ನು ನಾವು ದುರ್ಬಲಗೊಳಿಸುವುದಿಲ್ಲ ಎಂದಿದ್ದಾರೆ.

ಆದರೆ, ಅಮೆರಿಕದ ನೆಲದಲ್ಲಿ ಅಲ್ಲಿನ ಪ್ರಜೆಯನ್ನು ಕೊಲ್ಲುವ ಯತ್ನದಲ್ಲಿ ಭಾಗಿಯಾಗಿರುವ ವಾದವನ್ನು ಭಾರತ ಅಲ್ಲಗಳೆದಿದೆ.

ಇದನ್ನೂ ಓದಿ: ಖಲಿಸ್ತಾನಿ ಉಗ್ರ ಪನ್ನುನ್​ ಹತ್ಯೆ ಯತ್ನ ಪ್ರಕರಣ: ಅಮೆರಿಕದ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.