ETV Bharat / international

ಸಿರಿಯಾ ಗಡಿಯಲ್ಲಿ ಟರ್ಕಿ ಸೈನ್ಯ ಜಮಾವಣೆ: ಶಸ್ತ್ರ ಕೈಗೆತ್ತಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ ಕುರ್ದಿಶ್ ಪಡೆ - SYRIA CONFLICT

ಸಿರಿಯಾದ ಗಡಿಯಲ್ಲಿ ಟರ್ಕಿ ಪಡೆಗಳು ತನ್ನ ವಿರುದ್ಧ ದಾಳಿ ಆರಂಭಿಸಿವೆ ಎಂದು ಕುರ್ದಿಶ್ ಪಡೆಗಳು ಹೇಳಿವೆ.

ಸಿರಿಯಾ ಗಡಿಯಲ್ಲಿ ಟರ್ಕಿ ಸೈನ್ಯ ಜಮಾವಣೆ: ಶಸ್ತ್ರ ಕೈಗೆತ್ತಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ ಕುರ್ದಿಶ್ ಪಡೆ
ಸಿರಿಯಾ ಗಡಿಯಲ್ಲಿ ಟರ್ಕಿ ಸೈನ್ಯ ಜಮಾವಣೆ: ಶಸ್ತ್ರ ಕೈಗೆತ್ತಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ ಕುರ್ದಿಶ್ ಪಡೆ (IANS)
author img

By ETV Bharat Karnataka Team

Published : Dec 20, 2024, 1:02 PM IST

ಡಮಾಸ್ಕಸ್: ಸಿರಿಯಾದ ಗಡಿ ನಗರ ಕೊಬಾನಿ ಬಳಿ ಟರ್ಕಿ ಪಡೆಗಳು ಮತ್ತು ಅದರ ಮಿತ್ರ ಪಡೆಗಳು ದಾಳಿಗಳನ್ನು ಹೆಚ್ಚಿಸಿವೆ ಎಂದು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ (ಎಸ್​ಡಿಎಫ್) ಗುರುವಾರ ಆರೋಪಿಸಿದೆ. ಟರ್ಕಿಯ ಪಡೆಗಳು ಮತ್ತು ಅದರ ಬಾಡಿಗೆ ಸೈನಿಕರು ಬುಧವಾರ ಕೊಬಾನಿಯ ದಕ್ಷಿಣ ಹೊರವಲಯದಲ್ಲಿ, ವಿಶೇಷವಾಗಿ ತಿಶ್ರೀನ್ ಅಣೆಕಟ್ಟು ಪ್ರದೇಶದ ಬಳಿ ಪೂರ್ಣ ಪ್ರಮಾಣದ ದಾಳಿ ಆರಂಭಿಸಿದ್ದಾರೆ ಎಂದು ಎಸ್​ಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಹೋರಾಟಗಾರರು ರಾತ್ರಿಯ ವೇಳೆಗೆ ದಾಳಿಕೋರರನ್ನು ಹಿಮ್ಮೆಟ್ಟಿಸಿದರು. ಆದರೆ, ಟರ್ಕಿಯ ಡ್ರೋನ್​ಗಳು ಮತ್ತು ಫಿರಂಗಿಗಳು ಕೊಬಾನಿಯ ವಿವಿಧ ಭಾಗಗಳ ಮೇಲೆ ದಾಳಿ ಮುಂದುವರಿಸಿವೆ ಎಂದು ಗುಂಪು ಹೇಳಿಕೊಂಡಿದೆ. ಇದಲ್ಲದೇ ಟ್ಯಾಂಕ್​​ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಟರ್ಕಿಯ ಮಿಲಿಟರಿ ಪಡೆಗಳು ಸಿರಿಯಾದ ಉತ್ತರ ಗಡಿ ಉದ್ದಕ್ಕೂ ಜಮಾಯಿಸುತ್ತಿವೆ ಎಂದು ಹೇಳಲಾಗಿದೆ.

ಸಿರಿಯಾದಲ್ಲಿ ಯುದ್ಧ ಪರಿಸ್ಥಿತಿಗಳನ್ನು ನಿಲ್ಲಿಸುವ ಪ್ರಯತ್ನಗಳ ಭಾಗವಾಗಿ ಡಿಸೆಂಬರ್ 14 ರಂದು ನಡೆದ ಅಕಾಬಾ ಸಭೆಯಲ್ಲಿ ಯುಎಸ್ ನೇತೃತ್ವದ ಪ್ರಯತ್ನಗಳಿಗೆ ಮತ್ತು ಸಕಾರಾತ್ಮಕ ನಿಲುವಿಗೆ ಎಸ್​ಡಿಎಫ್ ತನ್ನ ಬೆಂಬಲ ವ್ಯಕ್ತಪಡಿಸಿದೆ.

ಟರ್ಕಿ ತನ್ನ ಮೇಲೆ ನಡೆಸುತ್ತಿರುವ ದಾಳಿಯ ವಿರುದ್ಧ ಸ್ಪಷ್ಟ ಮತ್ತು ದೃಢವಾದ ನಿಲುವು ತೆಗೆದುಕೊಳ್ಳುವಂತೆ ಎಸ್​ಡಿಎಫ್ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ. ಸಿರಿಯಾದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಟರ್ಕಿ ಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.

"ನಾವು ಮತ್ತಷ್ಟು ಸಂಘರ್ಷವನ್ನು ಬಯಸುವುದಿಲ್ಲ. ಆದರೆ, ನಮ್ಮ ಜನರನ್ನು ಮತ್ತು ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಹಿಂಜರಿಯುವುದಿಲ್ಲ" ಎಂದು ಎಸ್​ಡಿಎಫ್​ ಎಚ್ಚರಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಗಳನ್ನು ಎದುರಿಸಲು ಕೊಬಾನಿಯ ನಿವಾಸಿಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಮತ್ತು ಆಕ್ರಮಣದ ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಅದು ತನ್ನ ನಾಗರಿಕರಿಗೆ ಕರೆ ನೀಡಿದೆ.

"ಕೊಬಾನಿಯ ಪ್ರತಿಯೊಂದು ಹಳ್ಳಿ ಮತ್ತು ಮೂಲೆ ಪ್ರತಿರೋಧದ ರಣರಂಗವಾಗಬಹುದು. ಹೊರಗಿನವರಾರೂ ಸುಲಭವಾಗಿ ಒಳ ನುಗ್ಗಲು ಬಿಡುವುದಿಲ್ಲ" ಎಂದು ಅದು ಹೇಳಿದೆ. ಟರ್ಕಿಯೊಳಗಿನ ಕುರ್ದಿಶ್ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಕಾರಣದಿಂದ ಅಂಕಾರಾ ದೀರ್ಘಕಾಲದಿಂದ ಎಸ್​ಡಿಎಫ್ ವಿರುದ್ಧ ಹೋರಾಟ ನಡೆಸುತ್ತಿದೆ.

ಸಿರಿಯಾದ ಈಶಾನ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ಎಸ್​ಡಿಎಫ್ ಹಲವಾರು ವರ್ಷಗಳಿಂದ ಯುಎಸ್ ಪಡೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಿದೆ. ಮಾರ್ಚ್ 2019 ರಲ್ಲಿ ಸಿರಿಯಾದ ಇರಾಕ್ ಗಡಿಯ ಬಳಿಯ ಐಸಿಸ್​ನ ಅಂತಿಮ ನೆಲೆಯಾಗಿದ್ದ ಬಾಘುಜ್​ನಲ್ಲಿ ಐಸಿಸ್​ ಅನ್ನು ಎಸ್​ಡಿಎಫ್ ಸೋಲಿಸಿತ್ತು.

ಇದನ್ನೂ ಓದಿ : ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಗೆ ಎಂದಿಗೂ ಒಪ್ಪಲ್ಲ: ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟೋಕ್ತಿ - PALESTINIAN NATION

ETV Bharat Logo

Copyright © 2025 Ushodaya Enterprises Pvt. Ltd., All Rights Reserved.