ಮೊಗಾದಿಶು (ಸೊಮಾಲಿಯಾ): ಸೊಮಾಲಿಯಾದ ರಾಜಧಾನಿ ಮೊಗಾದಿಶುವಿನಲ್ಲಿ ಬೀಚ್‌ನ ಹೋಟೆಲ್‌ನಲ್ಲಿ ಸ್ಫೋಟ ಮತ್ತು ಗುಂಡಿನ ಸದ್ದು ಕೇಳಿ ಬಂದಿದೆ. ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಶುಕ್ರವಾರ ರಾತ್ರಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಸುಮಾರು 32 ಜನ ಸಾವನ್ನಪ್ಪಿದ್ದು, 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭದ್ರತಾ ಪಡೆಗಳು ದಾಳಿಕೋರರನ್ನು ಸದೆಬಡಿವೆ ಎಂದು ಸರ್ಕಾರಿ ಸ್ವಾಮ್ಯದ ಸೊಮಾಲಿ ರಾಷ್ಟ್ರೀಯ ಸುದ್ದಿ ಸಂಸ್ಥೆ ತಿಳಿಸಿದೆ. ಸಾವು-ನೋವುಗಳ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಅಲ್-ಖೈದಾದ ಪೂರ್ವ ಆಫ್ರಿಕಾದ ಅಂಗಸಂಸ್ಥೆ ಅಲ್-ಶಬಾಬ್ ತನ್ನ ರೇಡಿಯೊ ಮೂಲಕ ತನ್ನ ಹೋರಾಟಗಾರರು ದಾಳಿ ನಡೆಸಿದ್ದಾರೆ ಎಂದು ಹೇಳಿದೆ.
ಸೊಮಾಲಿಗಳು ತಮ್ಮ ವಾರಾಂತ್ಯವನ್ನು ಆನಂದಿಸುತ್ತಿರುವ ಕಾರಣ ಮೊಗಾಡಿಶುವಿನ ಜನಪ್ರಿಯ ಪ್ರದೇಶವಾದ ಲಿಡೋ ಬೀಚ್ ಶುಕ್ರವಾರ ರಾತ್ರಿ ಜನಸಂದಣಿಯಿಂದ ಕೂಡಿತ್ತು. ಪ್ರತ್ಯಕ್ಷದರ್ಶಿ ಮೊಹಮ್ಮದ್ ಮೊಯಾಲಿಮ್ ಹೇಳಿಕೆ ಪ್ರಕಾರ, ಬೀಚ್ ವ್ಯೂ ಹೋಟೆಲ್‌ನ ಪಕ್ಕದಲ್ಲಿ ವ್ಯಕ್ತಿ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೊದಲು ದಾಳಿಕೋರನು ಸ್ಫೋಟಕ ಉಡುಪನ್ನು ಧರಿಸಿದ್ದನ್ನು ನೋಡಿದ್ದೇನೆ. ಹೋಟೆಲ್‌ನಲ್ಲಿ ಅವರೊಂದಿಗಿದ್ದ ಅವರ ಕೆಲವು ಸ್ನೇಹಿತರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಮೊಯಾಲಿಮ್ ಹೇಳಿದರು.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಅಬ್ದಿಸಲಾಮ್ ಆಡಮ್ ಪ್ರಕಾರ, ಅನೇಕ ಜನರು ಪ್ರಾಣ ಕಳೆದುಕೊಂಡು ನೆಲದ ಮೇಲೆ ಮಲಗಿರುವುದನ್ನು ನಾನು ನೋಡಿದ್ದೇನೆ. ನಾನು ಕೆಲವು ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದೆ ಎಂದು ಹೇಳಿದರು. ಲಿಡೋ ಬೀಚ್ ಪ್ರದೇಶವು ಈ ಹಿಂದೆ ಅಲ್-ಶಬಾಬ್‌ನ ಮಿತ್ರ ಉಗ್ರಗಾಮಿಗಳ ಗುರಿಯಾಗಿತ್ತು. ಕಳೆದ ವರ್ಷ ನಡೆದ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರು.
ಓದಿ: ವಯನಾಡ್ ಭೀಕರ ಭೂಕುಸಿತ: ಅವಶೇಷದಡಿ ಸಿಲುಕಿದ ಜೀವಗಳ ಉಸಿರಾಟ ಪತ್ತೆ ಮಾಡಿದ ರಡಾರ್! - WAYANAD LANDSLIDES