ETV Bharat / international

ಮೂವರ ಕೊಂದ ಅಪರಾಧಿಗೆ ನೈಟ್ರೋಜನ್ ಗ್ಯಾಸ್​ ಬಳಸಿ ಮರಣಶಿಕ್ಷೆ: 8 ನಿಮಿಷದಲ್ಲಿ ಸಾವು! - Nitrogen Gas Execution - NITROGEN GAS EXECUTION

Nitrogen Gas Execution: ಅಮೆರಿಕದ ಅಲಬಾಮಾದಲ್ಲಿ ಕೊಲೆ ಪ್ರಕರಣದ ಅಪರಾಧಿಗೆ ನೈಟ್ರೋಜನ್ ಗ್ಯಾಸ್​ ಬಳಸಿ ಮರಣಶಿಕ್ಷೆ ನೀಡಲಾಗಿದೆ. ಇದು ಈ ರೀತಿಯ 2ನೇ ಪ್ರಕರಣವಾಗಿದೆ.

MURDER CASE  MURDER ACCUSED  DEATH SENTENCE
ಅಪರಾಧಿ ಅಲನ್ ಯುಜೀನ್ ಮಿಲ್ಲರ್ (AP)
author img

By ETV Bharat Karnataka Team

Published : Sep 27, 2024, 11:59 AM IST

ಅಲಬಾಮಾ: ನೈಟ್ರೋಜನ್ ಗ್ಯಾಸ್ ಮೂಲಕ ಅಪರಾಧಿಗಳಿಗೆ ಮರಣದಂಡನೆ (ನೈಟ್ರೋಜನ್ ಗ್ಯಾಸ್ ಎಕ್ಸಿಕ್ಯೂಷನ್) ವಿಧಿಸುತ್ತಿರುವುದು ಇತ್ತೀಚೆಗೆ ಅಮೆರಿಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಎರಡನೇ ಬಾರಿಗೆ ಇಂಥದ್ದೇ ಘೋರ ಶಿಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮೂವರನ್ನು ಹತ್ಯೆಗೈದ ಮಿಲ್ಲರ್ ಎಂಬ ಅಪರಾಧಿಯನ್ನು ಗುರುವಾರ ಅಮೆರಿಕ ಕಾಲಮಾನ ಪ್ರಕಾರ ಅಲಬಾಮಾದಲ್ಲಿ ನೈಟ್ರೋಜನ್ ಗ್ಯಾಸ್ ಬಳಸಿ ಸಾಯಿಸಲಾಗಿದೆ.

ದಕ್ಷಿಣ ಅಲಬಾಮಾ ಜೈಲಿನಲ್ಲಿದ್ದ 59 ವರ್ಷದ ಅಪರಾಧಿ ಅಲನ್ ಯುಜೀನ್ ಮಿಲ್ಲರ್ ಮುಖಕ್ಕೆ ಅಧಿಕಾರಿಗಳು ಮುಖವಾಡ ಹಾಕಿ ಸಾರಜನಕ ಅನಿಲ ಕಳುಹಿಸಲು ಪ್ರಾರಂಭಿಸಿದರು. ವಿಷಾನಿಲ ಸೇವಿಸಿದ ಆತ ಎರಡೇ ನಿಮಿಷದಲ್ಲಿ ಕೆಳಗೆ ಬಿದ್ದಿದ್ದು, ಮುಂದಿನ ಆರು ನಿಮಿಷದಲ್ಲಿ ಸಾವನ್ನಪ್ಪಿದ್ದಾನೆ. ಇದರೊಂದಿಗೆ 8 ನಿಮಿಷಗಳಲ್ಲಿ ಮರಣದಂಡನೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಲಬಾಮಾದಲ್ಲಿ ನೈಟ್ರೋಜನ್ ಅನಿಲದ ಮೂಲಕ ಮರಣದಂಡನೆ ವಿಧಿಸಿರುವ ಎರಡನೇ ಪ್ರಕರಣ ಇದಾಗಿದೆ. ಈ ವರ್ಷದ ಜನವರಿಯಲ್ಲಿ ಕೊಲೆ ಪ್ರಕರಣದ ಅಪರಾದಿ ಕೆನೆತ್ ಸ್ಮಿತ್ (58) ಎಂಬಾತನಿಗೆ ಇದೇ ಶಿಕ್ಷೆ ವಿಧಿಸಿ ಸಾಯಿಸಲಾಗಿತ್ತು.

ಇದನ್ನೂ ಓದಿ: ಫುಕುಶಿಮಾ ಸ್ಥಾವರದಿಂದ 9ನೇ ಸುತ್ತಿನ ಪರಮಾಣು ಕಲುಷಿತ ನೀರು ಬಿಡುಗಡೆ ಮಾಡಲಾರಂಭಿಸಿದ ಜಪಾನ್ - Fukushima nuclear wastewater

ETV Bharat Logo

Copyright © 2025 Ushodaya Enterprises Pvt. Ltd., All Rights Reserved.