ETV Bharat / international

ದೇಶಕ್ಕೆ ಅಪಾಯ ಎದುರಾದರೆ ಪರಮಾಣು ನೀತಿ ಬದಲಾವಣೆ: ರಷ್ಯಾ ಎಚ್ಚರಿಕೆ - nuclear doctrine

ದೇಶಕ್ಕೆ ಅಪಾಯ ಎದುರಾದಲ್ಲಿ ತನ್ನ ಪರಮಾಣು ನೀತಿಯಲ್ಲಿ ಬದಲಾವಣೆ ತರಬೇಕಾಗಬಹುದು ಎಂದು ರಷ್ಯಾ ಹೇಳಿದೆ.

ರಷ್ಯಾದ ಪರಮಾಣು ಅಸ್ತ್ರ
ರಷ್ಯಾದ ಪರಮಾಣು ಅಸ್ತ್ರ (IANS)
author img

By ETV Bharat Karnataka Team

Published : Jun 23, 2024, 7:47 PM IST

ಮಾಸ್ಕೊ: ದೇಶದ ರಕ್ಷಣೆಗಾಗಿ ಪ್ರತೀಕಾರವಾಗಿ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ತನ್ನ ಪರಮಾಣು ಸಿದ್ಧಾಂತವನ್ನು ರಷ್ಯಾ ಬದಲಾಯಿಸಬಹುದು ಎಂದು ರಷ್ಯಾದ ಹಿರಿಯ ಸಂಸದರೊಬ್ಬರು ರವಿವಾರ ಹೇಳಿದ್ದಾರೆ. ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳಿಂದ ದೇಶದ ಮೇಲೆ ದಾಳಿ ನಡೆದರೆ ಅಥವಾ ಸಾಂಪ್ರದಾಯಿಕ ಯುದ್ಧದಿಂದ ದೇಶದ ಅಸ್ತಿತ್ವಕ್ಕೆ ಬೆದರಿಕೆ ಎದುರಾದರೆ ಮಾತ್ರ ಪರಮಾಣು ಶಸ್ತ್ರಗಳನ್ನು ಬಳಸುವ ಸಿದ್ಧಾಂತವನ್ನು ರಷ್ಯಾ ಅಳವಡಿಸಿಕೊಂಡಿದೆ. ಆದರೆ ದೇಶದ ವಿರುದ್ಧ ಅಪಾಯ ಮತ್ತು ಸವಾಲುಗಳು ಹೆಚ್ಚಾಗುತ್ತಲೇ ಸಾಗಿದರೆ ಪರಮಾಣು ಸಿದ್ಧಾಂತವನ್ನು ಬದಲಾಯಿಸಬೇಕಾಗಬಹುದು ಎಂದು ಹಿರಿಯ ಸಂಸದರು ತಿಳಿಸಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದ ನಿಯಮಗಳಲ್ಲಿನ ಯಾವುದೇ ಬದಲಾವಣೆಗಳು ಅಂತರರಾಷ್ಟ್ರೀಯ ಮಿಲಿಟರಿ ಮತ್ತು ರಾಜಕೀಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಸಂಸತ್ತಿನ ರಕ್ಷಣಾ ಸಮಿತಿಯ ಅಧ್ಯಕ್ಷ ಆಂಡ್ರೆ ಕರ್ಟಪೊಲೊವ್ ಆರ್​ಐಎ ನೋವೊಸ್ಟಿಗೆ ತಿಳಿಸಿದ್ದಾರೆ.

"ಈ ಸಿದ್ಧಾಂತವು ನಮ್ಮ ದೇಶದ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಅವಲಂಬಿಸಿರುತ್ತದೆ. ಸವಾಲುಗಳು ಮತ್ತು ಬೆದರಿಕೆಗಳು ಹೆಚ್ಚುತ್ತಿರುವುದನ್ನು ನೋಡಿದರೆ, ಪರಮಾಣು ಶಸ್ತ್ರಾಸ್ತ್ರಗಳನ್ನು ನಾವು ಯಾವಾಗ ಬಳಸಬೇಕೆಂಬ ಬಗ್ಗೆ ನಮ್ಮ ಸಿದ್ಧಾಂತವನ್ನು ಬದಲಾವಣೆ ಮಾಡಿಕೊಳ್ಳಬೇಕಾಗಬಹುದು" ಎಂದು ಅವರು ಹೇಳಿದರು.

ಆದಾಗ್ಯೂ, 2020 ರ ಜೂನ್​ನಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ "ಪರಮಾಣು ಪ್ರತಿರೋಧ ಕ್ಷೇತ್ರದಲ್ಲಿ ರಷ್ಯಾ ಒಕ್ಕೂಟದ ರಾಜ್ಯ ನೀತಿಯ ಅಡಿಪಾಯಗಳಿಗೆ" (State Policy of the Russian Federation in the Area of Nuclear Deterrence) ಯಾವುದೇ ತಿದ್ದುಪಡಿ ಮಾಡಲು ಇನ್ನೂ ಸಮಯ ಬಂದಿಲ್ಲ ಎಂದು ಅವರು ಒತ್ತಿಹೇಳಿದರು.

ಅಧ್ಯಕ್ಷ ಪುಟಿನ್, ವಿಯೆಟ್ನಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ, ರಷ್ಯಾದ ಸಂಭಾವ್ಯ ಎದುರಾಳಿಗಳಾಗಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ಅತ್ಯಂತ ಕಡಿಮೆ ಇಳುವರಿಯ ಪರಮಾಣು ಸಾಧನಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಮಿತಿಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿರುವುದರಿಂದ ಮಾಸ್ಕೋ ತನ್ನ ಪರಮಾಣು ಸಿದ್ಧಾಂತದಲ್ಲಿ ಬದಲಾವಣೆಗಳನ್ನು ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಿದರು.

ಈ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಮತ್ತು ಇದರಲ್ಲಿ ನಿರ್ದಿಷ್ಟವಾಗಿ ಭಯಾನಕವಾದುದು ಏನೂ ಇಲ್ಲ ಎಂಬ ಆಲೋಚನೆಗಳು ಪಾಶ್ಚಿಮಾತ್ಯ ತಜ್ಞರ ಸಮುದಾಯದಲ್ಲಿ ಹರಿದಾಡುತ್ತಿವೆ. ಹೀಗಾಗಿ ರಷ್ಯಾ ಈ ಬಗ್ಗೆ ಗಮನ ಹರಿಸಲೇಬೇಕಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತೆಗೆ ಪರಮಾಣು ಶಸ್ತ್ರಾಸ್ತ್ರಗಳು ಪ್ರಾಥಮಿಕ ಖಾತರಿದಾರನಾಗಿರುವುದರಿಂದ ರಷ್ಯಾ ತನ್ನ ಪರಮಾಣು ಶಸ್ತ್ರಾಗಾರವನ್ನು ನವೀಕರಿಸಲಿದೆ ಎಂದು ಅಧ್ಯಕ್ಷ ಪುಟಿನ್ ಶುಕ್ರವಾರ ಘೋಷಿಸಿದ್ದಾರೆ.

ಇದನ್ನೂ ಓದಿ : ಐಸಿಸ್ ಅಡಗುತಾಣಗಳ ಮೇಲೆ ಇರಾಕ್ ಸೇನೆ ದಾಳಿ: 7 ಉಗ್ರರು ಹತ - ISIS Militants Killed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.