ETV Bharat / international

ಉಕ್ರೇನ್​​ನ 158 ಡ್ರೋನ್​ ಹೊಡೆದುರುಳಿಸಿದ ರಷ್ಯಾ; ಸಂಸ್ಕರಣಾ ಘಟಕಕ್ಕೆ ಹೊತ್ತಿಕೊಂಡ ಬೆಂಕಿ - Russia downed Ukrainian drones

author img

By PTI

Published : Sep 1, 2024, 11:05 PM IST

ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧದಲ್ಲಿ ಸಾವು- ನೋವುಗಳಿಗೆ ಅಂತ್ಯವಿಲ್ಲವಾಗಿದೆ. ಉಭಯ ರಾಷ್ಟ್ರಗಳು ನಡೆಸಿದ ಡ್ರೋನ್​ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.

ಉಕ್ರೇನ್​​ನ 158 ಡ್ರೋನ್​ ಹೊಡೆದುರುಳಿಸಿದ ರಷ್ಯಾ
ಉಕ್ರೇನ್​​ನ 158 ಡ್ರೋನ್​ ಹೊಡೆದುರುಳಿಸಿದ ರಷ್ಯಾ (ETV Bharat)

ಮಾಸ್ಕೋ (ರಷ್ಯಾ): ಉಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದ್ದು, ಸಾವು- ನೋವುಗಳಿಗೆ ಅಂತ್ಯವಿಲ್ಲವಾಗಿದೆ. ರಷ್ಯಾದ ಮೇಲೆ ಉಕ್ರೇನ್​ 158 ಡ್ರೋನ್​ ದಾಳಿ ನಡೆಸಿದ್ದು, ಎಲ್ಲವನ್ನೂ ಹೊಡೆದುರುಳಿಸಿದ್ದಾಗಿ ರಷ್ಯಾ ಹೇಳಿಕೊಂಡಿದೆ. ಇತ್ತ, ರಷ್ಯಾದ ಡ್ರೋನ್​ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿದ್ದಾಗಿ ಉಕ್ರೇನ್​ ತಿಳಿಸಿದೆ.

ರಷ್ಯಾದ ತೈಲ ಸಂಸ್ಕರಣಾ ಘಟಕ, ಟರ್ಮಿನಲ್​ಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್​ ಡ್ರೋನ್​ ದಾಳಿ ನಡೆಸುತ್ತಿದೆ. ಅದರಂತೆ ಶನಿವಾರವೂ ಕೂಡ ಒಂದೇ ಬಾರಿಗೆ 158 ಡ್ರೋನ್​ಗಳ ದಂಡನ್ನು ದಾಳಿಗೆ ಕಳುಹಿಸಿದೆ. ರಷ್ಯಾದ ವಾಯುಪಡೆಯು ಇವುಗಳನ್ನು ಕಂಡು ನಾಶ ಮಾಡಿದೆ.

ರಾಜಧಾನಿ ಮಾಸ್ಕೊದಲ್ಲಿ 2, ರಾಜಧಾನಿಯ ಹೊರಭಾಗದಲ್ಲಿ 9, ಕುರ್ಸ್​ಕ್​ ಪ್ರದೇಶದಲ್ಲಿ 46, ಬ್ಯ್ರಾನ್ಸ್​​ಕ್​​ನಲ್ಲಿ 34, ವೊರೊನೆಜ್​ನಲ್ಲಿ 28, ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಬೆಲ್ಗೊರೊಡ್ ಪ್ರದೇಶದ ಮೇಲೆ 14 ಡ್ರೋನ್​ಗಳನ್ನು ಹಾರಿಸಲಾಯಿತು. ಅವೆಲ್ಲವನ್ನೂ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಹೊಡೆದುರುಳಿಸಲಾದ ಡ್ರೋನ್​ಗಳ ಅವಶೇಷಗಳು ಬಿದ್ದ ಕಾರಣ, ನಗರದ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ನಿಯಂತ್ರಣದಲ್ಲಿದೆ ಎಂದು ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ.

ರಷ್ಯಾದ ಗಡಿ ಪ್ರದೇಶದ ಬೆಲ್ಗೊರೊಡ್​​ನಲ್ಲಿ ಉಕ್ರೇನಿಯನ್ ವೈಮಾನಿಕ ಕ್ಷಿಪಣಿ ದಾಳಿಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಅವರು ಭಾನುವಾರ ತಿಳಿಸಿದ್ದಾರೆ.

ಉಕ್ರೇನ್​ ಮೇಲೂ ರಷ್ಯಾ ದಾಳಿ: ಉಕ್ರೇನ್​ ಡ್ರೋನ್​ ದಾಳಿಗೆ ಪ್ರತಿಯಾಗಿ ರಷ್ಯಾ ಕೂಡ ದಾಳಿ ನಡೆಸಿದೆ. ಶನಿವಾರ ರಾತ್ರಿಯಿಡೀ ರಷ್ಯಾ ಉಡಾವಣೆ ಮಾಡಿದ 11 ಡ್ರೋನ್‌ಗಳಲ್ಲಿ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್​ ವಾಯುಪಡೆ ತಿಳಿಸಿದೆ.

ಸುಮಿ ಪ್ರದೇಶದಲ್ಲಿ ನಡೆದ ಶೆಲ್ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ಖಾರ್ಕಿವ್ ಪ್ರದೇಶದಲ್ಲಿ ಐದು ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಶಾಪಿಂಗ್ ಸೆಂಟರ್, ಕ್ರೀಡಾ ಸಮುಚ್ಛಯ ಮತ್ತು ವಸತಿ ಕಟ್ಟಡಗಳು ಹಾನಿಗೀಡಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಮಾಸ್​ ವಶದಲ್ಲಿದ್ದ 6 ಇಸ್ರೇಲಿಗರು ಶವವಾಗಿ ಪತ್ತೆ: ಉಗ್ರರನ್ನು ಬೇಟೆಯಾಡುತ್ತೇವೆ ಎಂದ ನೆತನ್ಯಾಹು - Israeli Hostages Killed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.