ETV Bharat / international

ವಿದ್ಯುತ್ ಸಮಸ್ಯೆ: ಕತ್ತಲೆಯಲ್ಲೇ ಕಾಲ ಕಳೆದ ಈ ದೇಶದ ಜನತೆ? ಯಾವುದು ಆ ರಾಷ್ಟ್ರ? - Power Outage in Ecuador

author img

By PTI

Published : Jun 20, 2024, 7:36 AM IST

ವಿದ್ಯುತ್​ ಪ್ರಸರಣದಲ್ಲಿನ ಕೆಲ ಸಮಸ್ಯೆಗಳಿಂದಾಗಿ ಸಂಪರ್ಕವಿಲ್ಲದೆ, ಈಕ್ವೆಡಾರ್​ನಲ್ಲಿನ ಜನರು ಸಮಸ್ಯೆ ಎದುರಿಸಿದರು.

power outage
ವಿದ್ಯುತ್ ಸಮಸ್ಯೆ (Photos: AP)

ಕ್ವಿಟೊ (ಈಕ್ವೆಡಾರ್): ಈಕ್ವೆಡಾರ್​ನಲ್ಲಿ ವಿದ್ಯುತ್ ಕ್ಷಾಮದ ನಡುವೆಯೇ, ಪ್ರಸರಣ ಮಾರ್ಗದಲ್ಲಿನ ವೈಫಲ್ಯದಿಂದಾಗಿ ಬುಧವಾರ ದೇಶಾದ್ಯಂತ ಲಕ್ಷಾಂತರ ಜನರು ಅನಿರೀಕ್ಷಿತ ಕತ್ತಲೆ ಎದುರಿಸಿದರು. ಉತ್ಪಾದನೆಯಲ್ಲಿ ಸಮಸ್ಯೆಗಳು ತಲೆದೋರಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಘೋಷಿಸಿದ ಕೆಲ ದಿನಗಳ ಬೆನ್ನಲ್ಲೇ ಈ ತೊಡಕು ಎದುರಾಗಿದೆ.

ಈ ಬಗ್ಗೆ ಈಕ್ವೆಡಾರ್‌ನ ಇಂಧನ ಸಚಿವ ರಾಬರ್ಟೊ ಲುಕ್ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ''ವೈಫಲ್ಯತೆ ಕುರಿತಂತೆ ದೇಶದ ರಾಷ್ಟ್ರೀಯ ವಿದ್ಯುತ್ ಆಪರೇಟರ್​ನವರು ಮಾಹಿತಿ ಪಡೆದುಕೊಂಡಿದ್ದಾರೆ. ಕೆಲ ಸಮಸ್ಯೆಗಳಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ಅಡಚಣೆ ಉಂಟಾಗಿದ್ದು, ರಾಷ್ಟ್ರದಲ್ಲಿ ಇಂಧನ ಸೇವೆಯಿಲ್ಲದಂತಾಯಿತು. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಮತ್ತು ದೋಷಪೂರಿತ ವಿದ್ಯುತ್ ಲೈನ್​​ಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ'' ಎಂದು ಅವರು ಹೇಳಿದ್ದಾರೆ.

ದೇಶದ ಕೆಲ ವಲಯಗಳಲ್ಲಿ ಸುಮಾರು 20 ನಿಮಿಷಗಳ ಕಾಲ ವಿದ್ಯುತ್​ ಸಂಪರ್ಕ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಆದರೆ ಹೆಚ್ಚಿನ ನಗರಗಳಲ್ಲಿ ಸಮಸ್ಯೆ ಮುಂದುವರಿದಿದೆ ಎಂದು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವರದಿಗಳಾಗಿದೆ.

"ವಿದ್ಯುತ್​ ಕಡಿತವು ನಮಗೆ ಅಚ್ಚರಿ ಮೂಡಿಸಿದೆ. ನಮ್ಮಲ್ಲಿ ಮಾತ್ರ ಈ ಸಮಸ್ಯೆ ಉಂಟಾಗಿದೆ ಎಂದು ನಾವು ಭಾವಿಸಿದ್ದೆವು. ಆದರೆ ರೆಸ್ಟೋರೆಂಟ್​ನಿಂದ ಹೊರಗಡೆ ಬಂದು ನೋಡಿದಾಗ ಅಂಗಡಿಗಳಲ್ಲಿಯೂ ವಿದ್ಯುತ್​ ಇಲ್ಲದೇ, ಜನರೇಟರ್‌ಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂತು. ಹೆಚ್ಚಿನೆಡೆ ವಿದ್ಯುತ್ ಕಡಿತಗೊಂಡಿರುವುದು ನಮ್ಮ ಅರಿವಿಗೆ ಬಂದಿತು" ಎಂದು ರಾಜಧಾನಿ ಕ್ವಿಟೊದ ಉತ್ತರದಲ್ಲಿರುವ ರೆಸ್ಟೋರೆಂಟ್‌ನಲ್ಲಿನ ವೇಟರ್​​​ ಎಮಿಲಿಯಾ ಸೆವಾಲ್ಲೋಸ್ ಹೇಳಿದ್ದಾರೆ.

ವಿದ್ಯುತ್​ ಸಮಸ್ಯೆಯಿಂದಾಗಿ ಟ್ರಾಫಿಕ್​ ಸಿಗ್ನಲ್​ ಲೈಟ್​ಗಳೂ ಕೂಡ ಸಹ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ, ಸಂಚಾರ ದಟ್ಟಣೆ ನಿರ್ವಹಣೆಗೆ ಟ್ರಾಫಿಕ್ ಏಜೆಂಟ್‌ಗಳನ್ನು ನಿಯೋಜಿಸಲಾಗಿದೆ ಎಂದು ಕ್ವಿಟೊ ಪುರಸಭೆಯು ಎಕ್ಸ್‌ನಲ್ಲಿ ಹೇಳಿದೆ. ವಿದ್ಯುತ್ ವೈಫಲ್ಯದ ಪರಿಣಾಮ ಕ್ವಿಟೊ ನಗರದಲ್ಲಿ ಮೆಟ್ರೋ ಸೇವೆಯನ್ನೂ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದರು.

ಕಳೆದೊಂದು ವರ್ಷಗಳಿಂದಲೂ ಕೂಡ ಈಕ್ವೆಡಾರ್ ವಿದ್ಯುತ್ ಉತ್ಪಾದನಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದೀಗ ದೇಶಾದ್ಯಂತ ಜನರಿಗೆ ಸಮಸ್ಯೆ ಕಂಡು ಬಂದಿದೆ. ಏಪ್ರಿಲ್‌ನಲ್ಲಿ, ಅಧ್ಯಕ್ಷ ಡೇನಿಯಲ್ ನೊಬೊವಾ ಸರ್ಕಾರವು ದೇಶದ ಪ್ರಮುಖ ನಗರಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರ ವಿದ್ಯುತ್ ವಿತರಣೆ ಆರಂಭಿಸಿತ್ತು. ಎಲ್ ನಿಯೊ ಹವಾಮಾನದ ಪರಿಣಾಮ ದೇಶದ ಹಲವೆಡೆ ಬರಗಾಲ ಆವರಿಸಿದ್ದು, ಜಲಾಶಯಗಳು ನೀರಿಲ್ಲದೇ ಖಾಲಿ ಖಾಲಿಯಾಗಿವೆ. ರಾಷ್ಟ್ರದ ವಿದ್ಯುತ್‌ನ ಸುಮಾರು ಶೇ. 75ರಷ್ಟು ಉತ್ಪಾದಿಸುವ ಜಲವಿದ್ಯುತ್ ಸ್ಥಾವರಗಳಲ್ಲಿ ಸೀಮಿತ ಇಂಧನ ಉತ್ಪಾದನೆಯಾಗುತ್ತಿದೆ.

ಇದನ್ನೂ ಓದಿ: ಉತ್ತರ ಕೊರಿಯಾ ಭೇಟಿ ಬಳಿಕ ಪುಟಿನ್ ವಿಯೆಟ್ನಾಂಗೆ ಭೇಟಿ: ಕುತೂಹಲ ಕೆರಳಿಸಿದ ರಷ್ಯಾ ಅಧ್ಯಕ್ಷರ ಟೂರ್​ - Putin arrives in Vietnam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.