ETV Bharat / bharat

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸಂಕಲ್ಪ ಮಹಾ ರ್ಯಾಲಿಯಲ್ಲಿಂದು ಪ್ರಧಾನಿ ಮೋದಿ ಭಾಗಿ - PM Modi address BJP campaign - PM MODI ADDRESS BJP CAMPAIGN

ಬಿಜೆಪಿ ಸಂಕಲ್ಪ ಮಹಾ ರ್ಯಾಲಿ ಎಂದು ಹೆಸರಿಸಲಾಗಿರುವ ಬೃಹತ್​ ಪ್ರಚಾರ ಸಭೆಯು ನಗರದ ಎಂಎ ಮೈದಾನದಲ್ಲಿ ನಡೆಯಲಿದೆ.

PM Modi will address a large BJP campaign rally on Saturday in Jammu
ಪ್ರಧಾನಿ ನರೇಂದ್ರ ಮೋದಿ (ಎಎನ್​ಐ)
author img

By ETV Bharat Karnataka Team

Published : Sep 28, 2024, 10:45 AM IST

ಜಮ್ಮು: ಇಂದು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್​ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬಿಜೆಪಿ ಸಂಕಲ್ಪ ಮಹಾ ರ್ಯಾಲಿ ಎಂದು ಹೆಸರಿಸಲಾಗಿರುವ ಬೃಹತ್​ ಪ್ರಚಾರ ಸಭೆಯು ನಗರದ ಎಂಎ ಮೈದಾನದಲ್ಲಿ ನಡೆಯಲಿದೆ.

ಅಕ್ಟೋಬರ್​ 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರ ಸಜ್ಜಾಗಿರುವ ಹೊತ್ತಿನಲ್ಲಿ ಈ ಬಿಜೆಪಿ ಸಂಕಲ್ಪ ಮಹಾ ರ್ಯಾಲಿ ನಡೆಯಲಿದೆ. ಈ ಸಮಾವೇಶದಲ್ಲಿ ಮೂರನೇ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ. ಈ ಅಭ್ಯರ್ಥಿಗಳು ಜಮ್ಮು, ಸಾಂಬಾ, ಕಥುವಾ ಮತ್ತು ಉಧಂಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಕ್ಟೋಬರ್​ 1ರಂದು ಜಮ್ಮು ಜಿಲ್ಲೆಯಲ್ಲಿ 11, ಸಾಂಬಾ ಮೂರು, ಕಥುವಾ ಆರು ಮತ್ತು ಉಧಂಪುರ್ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕಣಿವೆ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕನೆ ಪ್ರಚಾರ ಸಭೆ ಇದಾಗಿದೆ. ಮೊದಲಿಗೆ ಸೆಪ್ಟೆಂಬರ್​ 14ರಂದು ದೋಡಾದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗಿಯಾದ್ದರು. ಬಳಿಕ ಸೆಪ್ಟೆಂಬರ್​ 19ರಂದು ಮಾತಾ ವೈಷ್ಣೋದೇವಿ ದೇಗುಲದ ಕತ್ರಾ ಬೇಸ್ ಕ್ಯಾಂಪ್ ಪಟ್ಟಣದಲ್ಲಿ ಪ್ರಚಾರ ನಡೆಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಸಭೆ ಹಿನ್ನೆಲೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಜನರು ಹೆಚ್ಚು ಸೇರುವ ಹಿನ್ನೆಲೆ ಜನರು ಸಂಚಾರ​ ಮಾರ್ಗಗಳ ಬಗ್ಗೆ ತಿಳಿಯುವುದು ಅವಶ್ಯ ಎಂದು ಪೊಲೀಸ್​ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಜಮ್ಮುವು ಬಿಜೆಪಿಯ ಭದ್ರಕೋಟೆಯಾಗಿದ್ದು, 2014ರಲ್ಲಿ 25 ವಿಧಾನಸಭಾ ಸ್ಥಾನವನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

ದಶಕಗಳ ಬಳಿಕ ನಡೆಯುತ್ತಿರುವ ಮತ್ತು ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದತಿ ನಂತರ ನಡೆಯುತ್ತಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್​ ನ್ಯಾಷನಲ್​ ಕಾನ್ಫರೆನ್ಸ್​ ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿ ತನ್ನದೇ ಆದ ನೆಲೆಗಟ್ಟಿನ ಮೇಲೆ ಹೋರಾಡುತ್ತಿದೆ.

ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಈಗಾಗಲೇ ಸೆಪ್ಟೆಂಬರ್​ 18 ಮತ್ತು ಸೆಪ್ಟೆಂಬರ್​ 25ರಂದು ಮೊದಲ ಮತ್ತು ಎರಡನೇ ಹಂತದ ಚುನಾವಣೆ ನಡೆದಿದ್ದು, ಅಕ್ಟೋಬರ್​ 1ರಂದು ಅಂತಿಮ ಹಂತದ ಮತದಾನ ಜರುಗಲಿದೆ. ಅಕ್ಟೋಬರ್​ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣ: 7 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.