ಜಾರ್ಜ್ ಟೌನ್ (ಗಯಾನಾ): ಬುಧವಾರ ಗಯಾನಾಕ್ಕೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಕೇತಿಕವಾಗಿ ಜಾರ್ಜ್ ಟೌನ್ ನಗರದ ಕೀಲಿ ಕೈ ನೀಡುವ ಮೂಲಕ ವಿಶಿಷ್ಟವಾಗಿ ಸ್ವಾಗತ ಕೋರಲಾಯಿತು. ಗಯಾನಾದ ಭಾರತೀಯ ಸಮುದಾಯದ ಸದಸ್ಯರಿಂದಲೂ ಅವರಿಗೆ ಭವ್ಯ ಸ್ವಾಗತ ದೊರೆಯಿತು.
ಭಾರತೀಯ ವಲಸಿಗ ಸದಸ್ಯರೊಂದಿಗೆ ಸಂವಾದ: ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ, ಗ್ರೆನಡಾ ಪ್ರಧಾನಿ ಡಿಕಾನ್ ಮಿಚೆಲ್, ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲೆ ಮತ್ತು ಗಯಾನಾದ ನಾಲ್ವರು ಸಚಿವರು ಗಯಾನಾದ ರಾಜಧಾನಿ ಜಾರ್ಜ್ ಟೌನ್ನ ಹೋಟೆಲ್ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಸಾಂಪ್ರದಾಯಿಕ ನೃತ್ಯ, ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಪ್ರಧಾನಮಂತ್ರಿಯವರು ಗಯಾನಾ ಸರ್ಕಾರದ ವಿವಿಧ ಸಚಿವರು ಮತ್ತು ಭಾರತೀಯ ವಲಸಿಗ ಸದಸ್ಯರೊಂದಿಗೆ ಸಂವಾದ ನಡೆಸಿದರು.
A heartfelt thank you to the Indian community in Guyana for their warm and spirited welcome.
— Narendra Modi (@narendramodi) November 20, 2024
They have shown that distance is never a barrier to staying connected to one’s roots. Glad to see the community making a mark here across different sectors. pic.twitter.com/BED9nxnEuZ
ಗಯಾನಾ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ನೀಡಿದ ಗಯಾನಾದ ಭಾರತೀಯ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಒಬ್ಬರ ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ದೂರವು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ನೀವೆಲ್ಲ ತೋರಿಸಿರುವಿರಿ. ಸಮುದಾಯವು ಗಯಾನಾದ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವುದನ್ನು ನೋಡಿ ಸಂತೋಷವಾಗಿದೆ." ಎಂದು ಬರೆದಿದ್ದಾರೆ.
ಮೋದಿಗೆ ಸಿಕ್ಕಿತು ಅದ್ಧೂರಿ ಸ್ವಾಗತ: ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷ ಇರ್ಫಾನ್ ಅಲಿ, ಪ್ರಧಾನಿ ಮಾರ್ಕ್ ಆಂಥೋನಿ ಫಿಲಿಪ್ಸ್ ಮತ್ತು ಹನ್ನೆರಡಕ್ಕೂ ಹೆಚ್ಚು ಕ್ಯಾಬಿನೆಟ್ ಸಚಿವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. 56 ವರ್ಷಗಳಲ್ಲಿ ದಕ್ಷಿಣ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಪ್ರಧಾನಿ ತಂಗಲಿರುವ ಹೋಟೆಲ್ನಲ್ಲಿ, ಅವರು ಭಾರತೀಯ ವಲಸೆಗಾರರೊಂದಿಗೆ ಸಂವಹನ ನಡೆಸಿದರು.
ಇದಕ್ಕೂ ಮುನ್ನ ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಗಯಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ರುದ್ರ ಜಯಂತ ಭಗವತಿ, "ಪ್ರಧಾನಿ ಮೋದಿ ಇಲ್ಲಿಗೆ ಬರುತ್ತಿರುವುದು ಗಯಾನಾಕ್ಕೆ ದೊಡ್ಡ ಉಡುಗೊರೆಯಾಗಿದೆ" ಎಂದು ಹೇಳಿದರು.
ಗಯಾನ ಸಂಸತ್ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ಪಿಎಂ: ತಮ್ಮ ಭೇಟಿಯ ಸಮಯದಲ್ಲಿ, ಪಿಎಂ ಮೋದಿ ಗಯಾನಾದ ಸಂಸತ್ತಿನ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. 2 ನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಕೆರಿಬಿಯನ್ ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿಯವರ ಗಯಾನಾ ಭೇಟಿಗೆ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪೂರ್ವ) ಜೈದೀಪ್ ಮಜುಂದಾರ್ ಅವರು ಅಧ್ಯಕ್ಷ ಇರ್ಫಾನ್ ಅಲಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಯಲ್ಲಿ ತೊಡಗಲಿದ್ದಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ : G2- ಶೃಂಗ: ಬ್ರೆಜಿಲ್ನಲ್ಲಿ ರಾಮಾಯಣ ನಾಟಕ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ಮೋದಿ