ETV Bharat / international

ಮನಿಲಾ ಕೊಲ್ಲಿಯಲ್ಲಿ ಮುಳುಗಿದ ಪಿಲಿಪ್ಪೀನ್ಸ್​ ಟ್ಯಾಂಕರ್​: ತೈಲ ಸೋರಿಕೆ ಭೀತಿ - Philippine oil tanker sinks

author img

By PTI

Published : Jul 25, 2024, 4:04 PM IST

ಮನಿಲಾ ಕೊಲ್ಲಿಯಲ್ಲಿ ಫಿಲಿಪ್ಪೀನ್ಸ್​ನ ತೈಲ ಟ್ಯಾಂಕರ್​ ಮುಳುಗಿದ್ದು, ಅದು ಹೊತ್ತೊಯ್ಯುತ್ತಿದ್ದ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಮನಿಲಾ : ಸಮುದ್ರದಲ್ಲಿ ಎದ್ದ ಎತ್ತರದ ಅಲೆಗಳ ಕಾರಣದಿಂದಾಗಿ ಫಿಲಿಪ್ಪೀನ್ಸ್​ನ ತೈಲ ಟ್ಯಾಂಕರ್​ವೊಂದು ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದೆ. ನಂತರ ರಾತ್ರಿ ಕೋಸ್ಟ್​ ಗಾರ್ಡ್​ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಟ್ಯಾಂಕರ್​ನ 17 ಸಿಬ್ಬಂದಿಗಳ ಪೈಕಿ 16 ಮಂದಿಯನ್ನು ರಕ್ಷಿಸಲಾಗಿದೆ. ಸದ್ಯ ಈ ಹಡಗಿನಿಂದ ತೈಲ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಕಂಡು ಹಿಡಿಯಲು ಕೋಸ್ಟ್​ ಗಾರ್ಡ್​ ಸಿಬ್ಬಂದಿ ಪ್ರಯತ್ನಿಸುತ್ತಿದೆ.

ಟೆರ್ರಾ ನೋವಾ ಹೆಸರಿನ ಟ್ಯಾಂಕರ್ ಬಟಾನ್ ಪ್ರಾಂತ್ಯದಿಂದ ಕೇಂದ್ರ ಪ್ರಾಂತ್ಯವಾದ ಇಲೋಯಿಲೊಗೆ ಸುಮಾರು 1.4 ಮಿಲಿಯನ್ ಲೀಟರ್ (3,70,000 ಗ್ಯಾಲನ್) ಕೈಗಾರಿಕಾ ಇಂಧನ ತೈಲವನ್ನು ಹೊತ್ತು ಸಾಗುತ್ತಿತ್ತು. ಸಮುದ್ರದಲ್ಲಿ ಎತ್ತರದ ಅಲೆಗಳು ಕಾಣಿಸಿಕೊಂಡ ನಂತರ ಟ್ಯಾಂಕರ್​ ಅನ್ನು ಮರಳಿ ಬಂದರಿಗೆ ಸಾಗಿಸಲು ಸಿಬ್ಬಂದಿ ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಮಧ್ಯರಾತ್ರಿಯ ಹೊತ್ತಿಗೆ ಟ್ಯಾಂಕರ್ ಮುಳುಗಿದೆ ಎಂದು ಕೋಸ್ಟ್ ಗಾರ್ಡ್ ವಕ್ತಾರ ರಿಯರ್ ಅಡ್ಮಿರಲ್ ಅರ್ಮಾಂಡೊ ಬಾಲಿಲೋ ಹೇಳಿದ್ದಾರೆ.

ಮನಿಲಾದಲ್ಲಿ ಇತ್ತೀಚೆಗೆ ಬೀಸಿದ ಚಂಡಮಾರುತದಿಂದಾಗಿ ಕನಿಷ್ಠ 22 ಜನ ಸಾವಿಗೀಡಾಗಿದ್ದರು ಮತ್ತು 5 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಸಮುದ್ರದಲ್ಲಿ ಟ್ಯಾಂಕರ್ ಮುಳುಗಿದ ಸ್ಥಳದಲ್ಲಿ ನೀರಿನ ಮೇಲೆ ಸುಮಾರು 3.7 ಕಿಲೋಮೀಟರ್ (2.3 ಮೈಲಿ) ಉದ್ದದ ತೈಲ ಸೋರಿಕೆ ಆಗಿರುವುದು ವೈಮಾನಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಆದರೆ, ಅದು ಟ್ಯಾಂಕರ್​ನ ಇಂಧನ ಟ್ಯಾಂಕ್​ನಿಂದ ಸೋರಿಕೆಯಾದ ತೈಲವಿರಬಹುದು ಎಂದು ಅಂದಾಜಿಸಲಾಗಿದೆ.

ಬಟಾನ್ ಪ್ರಾಂತ್ಯದ ಕರಾವಳಿಯಿಂದ 6 ಕಿಲೋಮೀಟರ್ (ಸುಮಾರು 4 ಮೈಲಿ) ದೂರದಲ್ಲಿ ಟ್ಯಾಂಕರ್​ ಮುಳುಗಿದಾಗ, ಕೋಸ್ಟ್​ ಗಾರ್ಡ್​ನ ಬಿಆರ್​ಪಿ ಮೆಲ್ಚೋರಾ ಅಕ್ವಿನೊ ಎಂಬ ಹಡಗು ಅದರ ಹತ್ತಿರದಲ್ಲಿಯೇ ಇತ್ತು. ಸದ್ಯ ಈ ಹಡಗಿನಲ್ಲಿರುವ ಕೋಸ್ಟ್​ ಗಾರ್ಡ್​ ಸಿಬ್ಬಂದಿಯು ಕಾಣೆಯಾದ ಓರ್ವ ಟ್ಯಾಂಕರ್​ ಸಿಬ್ಬಂದಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಟ್ಯಾಂಕರ್​ನಲ್ಲಿ ಸಂಗ್ರಹವಾಗಿರುವ ತೈಲ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಮನಿಲಾ ಕೊಲ್ಲಿಯ ಬಳಿ ಟ್ಯಾಂಕರ್​ ಮುಳುಗಿದ್ದು, ಒಂದು ವೇಳೆ ತೈಲ ಸೋರಿಕೆಯಾದರೆ ಇದು ಮನಿಲಾ ತೀರದವರೆಗೂ ಹರಡಬಹುದು ಹಾಗೂ ದೊಡ್ಡ ಪ್ರಮಾಣದಲ್ಲಿ ಸಮುದ್ರ ಜೀವಿಗಳ ಸಾವಿಗೆ ಕಾರಣವಾಗಬಹುದು.

ಮನಿಲಾದ ಕಡಲತೀರವು ಪ್ರಮುಖ ಪ್ರವಾಸೋದ್ಯಮ ಮತ್ತು ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ದೇಶದ ಮುಖ್ಯ ಬಂದರು, ಐತಿಹಾಸಿಕ ಸಾರ್ವಜನಿಕ ಉದ್ಯಾನ, ಯುಎಸ್ ರಾಯಭಾರ ಕಚೇರಿ ಮತ್ತು ದುಬಾರಿ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಿವೆ. ಕ್ಯಾಸಿನೊ ಮತ್ತು ಪ್ರವಾಸೋದ್ಯಮ ಸಂಕೀರ್ಣಗಳನ್ನು ಕೂಡ ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ : ಹಿಜ್ಬುಲ್ಲಾ ಉಗ್ರರೊಂದಿಗೆ ಲಿಂಕ್: ಜರ್ಮನಿಯಲ್ಲಿ ಐಜೆಡ್​ಎಚ್ ಇಸ್ಲಾಮಿಕ್ ಸಂಘಟನೆ ಬ್ಯಾನ್‌ - Germany Bans IZH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.