ETV Bharat / international

ರಫಾ ಕ್ರಾಸಿಂಗ್ ತೆರೆಯಲು ಇಸ್ರೇಲ್​ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ: ಈಜಿಪ್ಟ್​ ಸ್ಪಷ್ಟನೆ - Rafah Border Crossing

ರಫಾ ಕ್ರಾಸಿಂಗ್​ನ ಗಡಿಯನ್ನು ಮತ್ತೆ ತೆರೆಯಲು ಇಸ್ರೇಲ್​ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಈಜಿಪ್ಟ್​ ಹೇಳಿದೆ.

author img

By ETV Bharat Karnataka Team

Published : May 31, 2024, 2:39 PM IST

ಈಜಿಪ್ಟ್​ ಹತ್ತಿರದ ರಫಾ ಕ್ರಾಸಿಂಗ್​ ಪ್ರದೇಶ
ಈಜಿಪ್ಟ್​ ಹತ್ತಿರದ ರಫಾ ಕ್ರಾಸಿಂಗ್​ ಪ್ರದೇಶ (IANS image)

ಕೈರೋ : ಗಾಜಾ ಪಟ್ಟಿಗೆ ಸಂಪರ್ಕ ಕಲ್ಪಿಸುವ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಇಸ್ರೇಲ್​ನೊಂದಿಗೆ ಈಜಿಪ್ಟ್​ ಒಪ್ಪಂದ ಮಾಡಿಕೊಂಡಿಲ್ಲ ಎಂದು ಈಜಿಪ್ಟ್​ನ ಟಿವಿ ಚಾನೆಲ್ ಶುಕ್ರವಾರ ವರದಿ ಮಾಡಿದೆ. ಈ ತಿಂಗಳ ಆರಂಭದಲ್ಲಿ, ಈಜಿಪ್ಟ್​ನೊಂದಿಗೆ ಸಂಪರ್ಕ ಕಲ್ಪಿಸುವ ರಫಾ ಕ್ರಾಸಿಂಗ್​ನ ಭಾಗವನ್ನು ಇಸ್ರೇಲ್ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇದರ ನಂತರ ಈ ಕ್ರಾಸಿಂಗ್ ಮೂಲಕ ಪರಿಹಾರ ಸಾಮಗ್ರಿ ಪೂರೈಕೆಯಾಗುವುದನ್ನು ಈಜಿಪ್ಟ್​ ನಿಲ್ಲಿಸಿತ್ತು.

ಈಜಿಪ್ಟ್-ಇಸ್ರೇಲಿ ಒಪ್ಪಂದದ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಉನ್ನತ ಮಟ್ಟದ ಮೂಲವನ್ನು ಉಲ್ಲೇಖಿಸಿ ಈಜಿಪ್ಟ್​ನ ಸರ್ಕಾರಿ ಸಂಯೋಜಿತ ಅಲ್-ಕೆಹೆರಾ ನ್ಯೂಸ್ ಟಿವಿ ಶುಕ್ರವಾರ ಹೇಳಿದೆ.

"ರಫಾ ಕ್ರಾಸಿಂಗ್​ನಿಂದ ಇಸ್ರೇಲ್ ಪಡೆಗಳು ಸಂಪೂರ್ಣವಾಗಿ ಹಿಂದೆ ಸರಿದರೆ ಮಾತ್ರ ತಾನು ಪರಿಹಾರ ಸಾಮಗ್ರಿಗಳ ಪೂರೈಕೆಗೆ ಅವಕಾಶ ನೀಡುವುದಾಗಿ ಈಜಿಪ್ಟ್​ ಷರತ್ತು ವಿಧಿಸಿದೆ" ಎಂದು ಮೂಲಗಳು ತಿಳಿಸಿವೆ.

ಈಜಿಪ್ಟ್ 1979 ರಲ್ಲಿ ಇಸ್ರೇಲ್​ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಅರಬ್ ದೇಶವಾಗಿದೆ. ಆದರೆ ಗಾಜಾದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯು ಅರಬ್ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಜಿಪ್ಟ್​ನಲ್ಲಿ ಇಸ್ರೇಲಿ ವಿರೋಧಿ ಭಾವನೆಯನ್ನು ಕೆರಳಿಸಿದೆ ಮತ್ತು ಅವರ ದಶಕಗಳಷ್ಟು ಹಳೆಯ ಸಂಬಂಧಗಳನ್ನು ಹದಗೆಡಿಸಿದೆ.

ಹೌತಿ ನೆಲೆಗಳ ಮೇಲೆ ದಾಳಿ: ಯುಕೆ ಮತ್ತು ಅಮೆರಿಕದ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯೆಮೆನ್​ನ ಹೌತಿ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಇದು ಜನವರಿಯಿಂದ ಐದನೇ ಜಂಟಿ ಕಾರ್ಯಾಚರಣೆಯಾಗಿದೆ. ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯಲ್ಲಿ ಅಂತರರಾಷ್ಟ್ರೀಯ ಹಡಗುಗಳ ಮೇಲೆ ಹೌತಿ ದಾಳಿಗೆ ಪ್ರತಿಕ್ರಿಯೆಯಾಗಿ ಗುರುವಾರ ಹೌತಿಗಳ ವಿರುದ್ಧ ದಾಳಿಗಳು ನಡೆದಿವೆ ಎಂದು ಯುಕೆ ರಕ್ಷಣಾ ಸಚಿವಾಲಯ (ಎಂಒಡಿ) ದೃಢಪಡಿಸಿದೆ.

ಹುದೈದಾ ಬಳಿಯ ಎರಡು ಸ್ಥಳಗಳಿಂದ ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಗುಪ್ತಚರ ಇಲಾಖೆ ದೃಢಪಡಿಸಿದೆ. ಆರ್​ಎಎಫ್ ಟೈಫೂನ್ ಎಫ್ ಜಿಆರ್ 4 ಗಳು ಪೇವ್ ವೇ IV ಮಾರ್ಗದರ್ಶಿ ಬಾಂಬ್​ಗಳ ಮೂಲಕ ಮೂರು ಸ್ಥಳಗಳಲ್ಲಿನ ಹೌತಿ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಹೌತಿಗಳ ಅಲ್ ಮಸಿರಾ ಉಪಗ್ರಹ ಸುದ್ದಿ ಸಂಸ್ಥೆಯ ಪ್ರಕಾರ, ಒಂದು ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹತ್ತು ಜನ ಗಾಯಗೊಂಡಿದ್ದಾರೆ.

36,000 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯರನ್ನು ಬಲಿತೆಗೆದುಕೊಂಡ ಗಾಜಾದಲ್ಲಿನ ಯುದ್ಧವನ್ನು ಇಸ್ರೇಲ್ ಕೊನೆಗೊಳಿಸಬೇಕೆಂದು ಒತ್ತಾಯಿಸಿ ಹೌತಿಗಳು ಇತ್ತೀಚಿನ ತಿಂಗಳುಗಳಲ್ಲಿ ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯಲ್ಲಿ ಹಡಗುಗಳ ಮೇಲೆ ತೀವ್ರ ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅಧ್ಯಕ್ಷ ರೈಸಿ ಇದ್ದ ಹೆಲಿಕಾಪ್ಟರ್​ ಪತನ ಘಟನೆ: ವಿಧ್ವಂಸಕ ಕೃತ್ಯವಲ್ಲ ಎಂದ 2ನೇ ವರದಿ - Raisi helicopter crash

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.