ಮಾಸ್ಕೋ (ರಷ್ಯಾ): ಪುಟಿನ್ ಅವರ ಕಟು ಟೀಕಾಕಾರ, ರಷ್ಯಾದ ಪ್ರತಿಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರನ್ನ ರಾಸಾಯನಿಕ ಅಸ್ತ್ರ ಬಳಸಿ ಅಂದರೆ ನೊವಿಚೋಕ್ ಏಜೆಂಟ್ ಮೂಲಕ ಕೊಲೆ ಮಾಡಲಾಗಿದೆ ಎಂದು ನವಲ್ನಿ ಪತ್ನಿ ಆರೋಪಿಸಿದ್ದಾರೆ. ರಷ್ಯಾ ಪ್ರತಿಪಕ್ಷ ನಾಯಕನನ್ನು ಪುಟಿನ್ ಕೊಲೆ ಮಾಡಿಸಿದ್ದಾರೆ ಎಂದು ಅವರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಇದೇ ವೇಳೆ ಅವರು ಘೋಷಿಸಿದ್ದಾರೆ.
ಅಲೆಕ್ಸಿ ನವಲ್ನಿ ಅವರ ಪತ್ನಿ ಯೂಲಿಯಾ ನವಲ್ನಾಯಾ, ಪತಿ ಸಾವಿನ ಕುರಿತಂತೆ 9 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಪುಟಿನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಲಾಡಿಮಿರ್ ಪುಟಿನ್ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಸ್ವತಂತ್ರ ರಷ್ಯಾಕ್ಕಾಗಿ ನನ್ನ ಹೋರಾಟ ನಿಲ್ಲಲ್ಲ ಎಂದು ನವಲ್ನಾಯ್ ಹೇಳಿದ್ದಾರೆ ಎಂದು ಅಲ್ ಜಜಿರಾ ವರದಿ ಮಾಡಿದೆ. ರಷ್ಯಾದ ಅಧಿಕಾರಿಗಳು ನವಲ್ನಿಯ ದೇಹವನ್ನು ಮರೆಮಾಚಿದ್ದಾರೆ ಎಂದು ನವಲ್ನಾಯಾ ಇದೇ ವೇಳೆ ಆರೋಪಿಸಿದ್ದಾರೆ. ಹೀಗಾಗಿ ಅವರ ದೇಹದಿಂದ 'ನೊವಿಚೋಕ್' ನರ ಏಜೆಂಟ್‌ರು ಮಾಡಿದ ಪ್ರಯೋಗದ ಕುರುಹುಗಳು ಕಣ್ಮರೆಯಾಗಿವೆ ಎಂದು ಅವರು ಹೇಳಿದ್ದಾರೆ.
ಅಲೆಕ್ಸಿ ಅವರನ್ನು ಹತ್ಯೆ ಮಾಡುವ ಮೂಲಕ ನನ್ನ ಅರ್ಧವನ್ನು ಕಸಿದುಕೊಂಡಿದ್ದಾರೆ. ಈಗ ನನ್ನ ಹೃದಯ ಅರ್ಧವೇ ಮಾತ್ರವೇ ಉಳಿದಿದೆ. ಆದರೆ ಎಲ್ಲವನ್ನೂ ಅವರಿಂದ ಕಸಿದುಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಅರ್ಧ ಇದೆ. ಈ ಅರ್ಧದಿಂದಲೇ ಹೋರಾಟ ಮುಂದುವರೆಸುತ್ತೇನೆ. ಅಲೆಕ್ಸಿ ಆರಂಭಿಸಿದ ಕೆಲಸವನ್ನು, ದೇಶಕ್ಕಾಗಿ ಹೋರಾಡುವುದನ್ನು ಮುಂದುವರೆಸುತ್ತೇನೆ ಎಂದು ಅವರು ಘೋಷಿಸಿದ್ದಾರೆ.
ನಾನು ಮುಕ್ತ ರಷ್ಯಾದಲ್ಲಿ ವಾಸಿಸಲು ಬಯಸುತ್ತೇನೆ. ನಾನು ಮುಕ್ತ ರಷ್ಯಾ ದೇಶವನ್ನು ನಿರ್ಮಾಣ ಮಾಡಲು ಇಚ್ಚಿಸುತ್ತೇನೆ ಎಂದು ಅಲೆಕ್ಸಿ ನವಲ್ನಿ ಪತ್ನಿ ನವಲ್ನಾಯಾ ಘೋಷಿಸಿದ್ದಾರೆ. ನನ್ನ ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸುತ್ತೇನೆ. ನನ್ನ ಆಕ್ರೋಶದೊಂದಿಗೆ ನೀವು ಭಾಗಿಯಾಗಿ, ನಮ್ಮ ಭವಿಷ್ಯವನ್ನು ಕೊಂದವರ ಬಗ್ಗೆ ನಾವು ಹೋರಾಡೋಣ, ಆಕ್ರೋಶ ವ್ಯಕ್ತಪಡಿಸೋಣ ಎಂದು ನವಲ್ನಾಯಾ ಕರೆ ನೀಡಿದ್ದಾರೆ.
ನವಲ್ನಾಯಾ ಅವರು ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದರು. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರನ್ನೂ ಭೇಟಿಯಾಗಿ ಪತಿ ಸಾವಿನ ಬಗ್ಗೆ ಚರ್ಚೆ ನಡೆಸಿದರು. ಮುಂದಿನ ಹೋರಾಟದ ರೂಪುರೇಷೆ ರಚನೆಯಲ್ಲಿ ಕೂಡಾ ತೊಡಗಿಸಿಕೊಂಡರು ಇದಕ್ಕೂ ಮೊದಲು ಅವರು ಭಾನುವಾರ ಯೂರೋಪಿಯನ್ ಯೂನಿಯನ್ನ ಉನ್ನತ ರಾಜತಾಂತ್ರಿಕ ಜೋಸೆಪ್ ಬೊರೆಲ್ ಅವರನ್ನು ಭೇಟಿಗಿ ಸಮಾಲೋಚನೆ ನಡೆಸಿದರು.
ಇದನ್ನು ಓದಿ:ಟ್ರಂಪ್ ವಿರುದ್ಧ ನಿಕ್ಕಿ ಹ್ಯಾಲೆ ಗರಂ: ಪುಟಿನ್ಗೆ ಬೆಂಬಲಿಸುವ ಮಾತಿಗೆ ಕೆಂಡಾಮಂಡಲ