ಮಾಲಿ (ಪಶ್ಚಿಮ ಆಫ್ರಿಕಾ): ನೈಋತ್ಯ ಮಾಲಿಯಲ್ಲಿ ಕಳೆದ ವಾರ ಚಿನ್ನದ ಗಣಿ ಕುಸಿದು 70ಕ್ಕೂ ಅಧಿಕ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನರು ಸಾವನ್ನಪ್ಪಿರುವ ಕುರಿತು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ಕೌಲಿಕೊರೊ ಪ್ರದೇಶದ ಕಂಗಾಬಾ ಜಿಲ್ಲೆಯಲ್ಲಿದ್ದ ಗಣಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಕಾರ್ಮಿಕರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಮಾಲಿಯ ಗಣಿ ಸಚಿವಾಲಯ ತಿಳಿಸಿದೆ.
ಈ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಸಚಿವಾಲಯವು ಸುರಕ್ಷತಾ ಅವಶ್ಯಕತೆಗಳನ್ನು ಕಡ್ಡಾಯವಾಗಿ ಪಾಲಿಸಲು ಗಣಿಗಾರರಿಗೆ ಮತ್ತು ಅಲ್ಲಿನ ಸಮುದಾಯಗಳಿಗೆ ಸೂಚಿಸಿದೆ. ಸಚಿವಾಲಯದ ವಕ್ತಾರ ಬೇಯ್ ಕೌಲಿಬಾಲಿ ಘಟನೆ ಕುರಿತು, ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ಇದ್ದುದರಿಂದ ಸಾವು ನೋವು ಸಂಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಗಡಿ ಪ್ರದೇಶದಲ್ಲಿ ಸೇನಾ ವಿಮಾನ ಪತನ.. ಪ್ಲೈಟ್ನಲ್ಲಿದ್ದ ಎಲ್ಲ 74 ಜನರ ಸಾವು