ETV Bharat / international

ಪಾಕಿಸ್ತಾನದಲ್ಲಿ ಮತ್ತೆ ಪೊಲೀಸ್​ ಠಾಣೆಯ ಮೇಲೆ ದಾಳಿ; 10 ಅಧಿಕಾರಿಗಳು ಸಾವು, ಉಗ್ರರು ಪರಾರಿ

ಪಾಕಿಸ್ತಾನದಲ್ಲಿ ಚುನಾವಣೆಗೂ ಮುನ್ನ ಹಿಂಸಾಚಾರ ಹೆಚ್ಚಾಗುತ್ತಿದೆ. ವಾಯವ್ಯ ಪಾಕಿಸ್ತಾನದ ಪೊಲೀಸ್ ಠಾಣೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 10 ಪೊಲೀಸರು ಸಾವನ್ನಪ್ಪಿದ್ದಾರೆ.

Militants Attack Police Station  Northwestern Pakistan  Killing At Least 10 Officers  ಪೊಲೀಸ್​ ಠಾಣೆಯ ಮೇಲೆ ದಾಳಿ  ಅಧಿಕಾರಿಗಳು ಸಾವು
10 ಅಧಿಕಾರಿಗಳು ಸಾವು, ಉಗ್ರರು ಪರಾರಿ
author img

By ETV Bharat Karnataka Team

Published : Feb 5, 2024, 1:17 PM IST

ಪೇಶಾವರ(ಪಾಕಿಸ್ತಾನ): ವಾಯವ್ಯ ಪಾಕಿಸ್ತಾನದ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಗೆ ಸುಮಾರು ಮಂದಿ 10 ಪೊಲೀಸರು ಬಲಿಯಾಗಿದ್ದು, ಸುಮಾರು ಆರು ಮಂದಿ ಗಾಯಗೊಂಡಿದ್ದಾರೆ. ಉಗ್ರರು ರಾಕೆಟ್‌, ಬಂದೂಕುಗಳು ಮತ್ತು ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾಗಿದ್ದರು ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ವರ್ಷ ಭೀಕರ ದಾಳಿಯಲ್ಲಿ ಆರು ಜನ ಅಧಿಕಾರಿಗಳು ಗಾಯಗೊಂಡಿದ್ದಾರೆ. ಯಾವುದೇ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನೀಸ್-ಉಲ್-ಹಸನ್ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಪೊಲೀಸ್ ಠಾಣೆಯ ಹೊರಗೆ ಆತ್ಮಹತ್ಯಾ ಬಾಂಬ್​ ದಾಳಿ ನಡೆದಿತ್ತು. ಈ ದಾಳಿ ನಡೆದು ಎರಡು ತಿಂಗಳ ಕಳೆಯುವಷ್ಟರಲ್ಲಿ ಮತ್ತೊಂದು ಹಿಂಸಾಚಾರ ನಡೆದಿದೆ. ಡಿಸೆಂಬರ್​ನಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 23 ಸೈನಿಕರು ಸಾವನ್ನಪ್ಪಿ, 32 ಮಂದಿ ಗಾಯಗೊಂಡಿದ್ದರು.

ಇನ್ನು ಈ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದು ಪಾಕಿಸ್ತಾನಿ ತಾಲಿಬಾನ್‌ನ ಉಪಶಾಖೆ ಎಂದು ನಂಬಲಾಗಿದೆ. ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಡಿಸೆಂಬರ್ 5ರ ದಾಳಿಯ ನಂತರ ಮಿಲಿಟರಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ರಕ್ಷಣಾ ಪಡೆಗಳು ಅನೇಕ ಕಾರ್ಯಾಚರಣೆಗಳಲ್ಲಿ 27 ದಂಗೆಕೋರರನ್ನು ಹೊಡೆದಾಕಿವೆ. ಸೋಮವಾರದ ಹಿಂಸಾಚಾರವು ಈ ವಾರ ನಡೆಯಲಿರುವ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ಸಂಭವಿಸಿದೆ.

ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ದಂಗೆಕೋರರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿ ನಾಲ್ಕು ಭದ್ರತಾ ಪಡೆಗಳು ಸೇರಿದಂತೆ ಆರು ಜನರನ್ನು ಕೊಂದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಕಳೆದ ವಾರ ಬಲೂಚಿಸ್ತಾನದ ಜಿಲ್ಲೆಯಾದ ಮ್ಯಾಚ್‌ನಲ್ಲಿ ದಾಳಿ ನಡೆಸಿದ ನಂತರ ಸೇನೆಯು 24 ಬಂಡುಕೋರರನ್ನು ಹೊಡೆದು ಹಾಕಿತ್ತು. ಆಗ ಉಗ್ರ ಸಂಘಟನೆಯಾದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಸಂಘಟಿತ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳು ಹೆಚ್ಚಾಗಿವೆ. ಇಂತಹ ಹೆಚ್ಚಿನ ದಾಳಿಗಳು ಖೈಬರ್ ಪಖ್ತುಂಕ್ವಾದಲ್ಲಿ ನಡೆದಿವೆ. ಅಲ್ಲಿ ಜನವರಿ 2023 ರಲ್ಲಿ ಉಗ್ರಗಾಮಿಗಳು ಕನಿಷ್ಠ 101 ಜನರನ್ನು ಕೊಂದು ಹಾಕಿದ್ದಾರೆ. ಹೆಚ್ಚಾಗಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಡೇರಾ ಇಸ್ಮಾಯಿಲ್ ಖಾನ್ ದಕ್ಷಿಣ ವಜಿರಿಸ್ತಾನ್ ಬಳಿ ಇದೆ. ಇದು ಮಾಜಿ ಉಗ್ರಗಾಮಿಗಳು ನೆಲೆಸುತ್ತಿದ್ದ ಅಭಯಾರಣ್ಯವಾಗಿದೆ. 2014ರಲ್ಲಿ ಸೇನೆ ನಡೆಸುತ್ತಿದ್ದ ಶಾಲೆಯೊಂದರ ಮೇಲೆ ದಾಳಿ ನಡೆಸಿ 150ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಪಾಕಿಸ್ತಾನದ ಸೇನೆ ಅಲ್ಲಿ ಹಲವು ಕಾರ್ಯಾಚರಣೆಗಳನ್ನು ನಡೆಸಿತ್ತು.

ಓದಿ: ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.