ಜೆರುಸಲೇಂ (ಇಸ್ರೇಲ್): ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ಸೋಮವಾರ ಒಂದೇ ದಿನ ನಡೆದ ವಾಯುದಾಳಿಯಲ್ಲಿ 21 ಮಕ್ಕಳು ಸೇರಿ 274ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಜ್ಬುಲ್ಲಾ ಉಗ್ರರ 1000 ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಿದೆ.
ಸೋಮವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 274 ಜನರು ಸಾವನ್ನಪ್ಪಿದ್ದಾರೆ. 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದೊಂದು ವರ್ಷದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿ ಅತಿದೊಡ್ಡ ದಾಳಿ ಇದಾಗಿದೆ.
ಹಿಜ್ಬುಲ್ಲಾ ಉಗ್ರರನ್ನು ಹದ್ದುಬಸ್ತಿನಲ್ಲಿಡಲು ಇಸ್ರೇಲ್ ವಾಯುಪಡೆಯು ಅರ್ಧ ಗಂಟೆಯಲ್ಲಿ 80 ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ದಕ್ಷಿಣ ಲೆಬನಾನ್‌ನ ಪ್ರದೇಶಗಳಲ್ಲಿ ನಡೆಸಿದೆ. ಅದೇ ಸಮಯದಲ್ಲಿ ಪೂರ್ವ ಲೆಬನಾನ್‌ನ ಬೆಕಾ ಕಣಿವೆ ಪ್ರದೇಶದಲ್ಲೂ ಬಾಂಬ್ಗಳ ಸುರಿಮಳೆ ಸುರಿದಿದೆ. ಸಾವಿರಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ಸ್ಥಳಗಳನ್ನು ಗುರಿಯಾಗಿಸಲಾಗಿದೆ. ಸೋಮವಾರ ಬೆಳಗ್ಗೆ 6:30 ರಿಂದ 7:30 ರ ನಡುವೆ 150 ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ವಾಯು ಸೇನೆ ತಿಳಿಸಿದೆ.
ಭಾನುವಾರವಷ್ಟೆ ಹಿಜ್ಬುಲ್ಲಾ ಉಗ್ರರು, ಇಸ್ರೇಲ್ನ ಹೈಫಾ ನಗರದ ಮೇಲೆ 100 ಕ್ಕೂ ಹೆಚ್ಚಿನ ರಾಕೆಟ್ಗಳನ್ನು ಹಾರಿಬಿಟ್ಟಿದ್ದರು. ಇದರ ಬೆನ್ನಲ್ಲೇ, ಇಸ್ರೇಲ್ ಸೇನೆ ಲೆಬನಾನ್‌ನ 300 ಸ್ಥಳಗಳ ಮೇಲೆ ವೈಮಾನಿಕ ದಾಳಿ ಮಾಡಿದೆ.
ಶಾಲೆಗಳಿಗೆ ರಜೆ ಘೋಷಣೆ: ಲೆಬನಾನ್‌ನ ಪೂರ್ವ ಮತ್ತು ದಕ್ಷಿಣ ನಗರಗಳಲ್ಲಿ ಇಸ್ರೇಲಿ ದಾಳಿಗಳು ತೀವ್ರಗೊಂಡಿರುವುದರಿಂದ ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಲೆಬನಾನ್‌ನ ಶಿಕ್ಷಣ ಸಚಿವ ಅಬ್ಬಾಸ್ ಹಲಾಬಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟಾಗದಿರಲು ಸೋಮವಾರ ಮತ್ತು ಮಂಗಳವಾರ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುಲಾಗುವುದು ಎಂದರು.
ಲೆಬನಾನ್ ಮತ್ತೊಂದು ಗಾಜಾ: ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಲೆಬನಾನ್ ಮತ್ತೊಂದು ಗಾಜಾ ಆಗುವ ಆತಂಕ ವ್ಯಕ್ತಪಡಿಸಿದ್ದಾರೆ. ಉಭಯ ರಾಷ್ಟ್ರಗಳು ಕದನ ವಿರಾಮದಲ್ಲಿ ಆಸಕ್ತಿ ಹೊಂದಿಲ್ಲ. ಹೀಗಾಗಿ ಇಸ್ರೇಲ್ ದಾಳಿಗೆ ಸಿಲುಕಿ ಛಿದ್ರವಾಗಿರುವ ಗಾಜಾದ ಮಾದರಿ ಲೆಬನಾನ್ ಕೂಡ ಆಗಲಿದೆ ಎಂದು ಕಳವಳಗೊಂಡಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಬಯಸುವುದಿಲ್ಲ. ಇದೀಗ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಯುದ್ಧ ಆರಂಭವಾಗಿದೆ. ಉಭಯ ಸೇನೆಗಳು ರಾಕೆಟ್ಗಳನ್ನು ವಿನಿಯಮ ಮಾಡಿಕೊಂಡಿವೆ. ಹೀಗಾಗಿ ಎರಡೂ ಕಡೆ ನಷ್ಟ ಉಂಟಾಗುತ್ತಿದೆ ಎಂದರು.
ಇದನ್ನೂ ಓದಿ: ಹಿಜ್ಬುಲ್ಲಾ ವಿರುದ್ಧದ ದಾಳಿ ಮತ್ತಷ್ಟು ತೀವ್ರವಾಗಲಿದೆ: ಇಸ್ರೇಲ್ - Israel To Intensify Strikes