ETV Bharat / international

ಲಾಹೋರ್​ ವಾಯುಮಾಲಿನ್ಯ: ಭಾರತದ ಸಹಾಯ ಕೋರಿದ ಮರಿಯಮ್​ ನವಾಜ್​ - PAK PUNJAB PROVINCE CM MARYAM NAWAZ

ಲಾಹೋರ್ ನಗರಿಯ​ ವಾಯುಮಾಲಿನ್ಯದ ಕುರಿತು ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರಿಗೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಸಿಎಂ ಮರಿಯಮ್​ ನವಾಜ್​ ಶರೀಫ್​ ಪತ್ರ ಬರೆದು, ಸಹಕಾರ ಕೋರಿದ್ದಾರೆ.

Pak punjab province CM maryam nawaz writes letter to india on Smog issue
ಪಾಕಿಸ್ತಾನ ಪಂಜಾಬ್​ ಪ್ರಾಂತ್ಯದ ಸಿಎಂ ಮರಿಯಮ್​ ನವಾಜ್​ ಶರೀಫ್​ (IANS)
author img

By ETV Bharat Karnataka Team

Published : Oct 30, 2024, 4:43 PM IST

ಲಾಹೋರ್​: ಪಾಕಿಸ್ತಾನದ ಲಹೋರ್ ಜಗತ್ತಿನ ಅತ್ಯಂತ ವಾಯುಮಾಲಿನ್ಯ ನಗರಿಯಾಗಿದೆ. ಇಲ್ಲಿನ ವಾಯುಮಾಲಿನ್ಯ ಮತ್ತು ಹೊಗೆ ಸಮಸ್ಯೆಯ ನಿವಾರಣೆಗೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಸಿಎಂ ಮರಿಯಮ್​ ನವಾಜ್​ ಶರೀಫ್​ ಮುಂದಾಗಿದ್ದು, ಇದಕ್ಕಾಗಿ ಭಾರತ ಸಹಾಯ ಕೋರಿದ್ದಾರೆ. ಈ ಕುರಿತು ಅವರು ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ಗೆ ಪತ್ರ ಬರೆದಿದ್ದಾರೆ.

ಲಾಹೋರ್​ನ ಮಾಲಿನ್ಯ ಸಮಸ್ಯೆಗೆ ಭಾರತದತ್ತ ಬೊಟ್ಟು ಮಾಡಿರುವ ಮರಿಯನ್​ ನವಾಜ್​ ಸರ್ಕಾರದ ಹಿರಿಯ ಸಚಿವ ಮರ್ರಿಯುಮ್​ ಔರಂಗಜೇಬ್​, ಭಾರತದ ದೆಹಲಿ, ಅಮೃತ್‌ಸರ್, ಚಂಡೀಗಢದಲ್ಲಿನ ಮಾಲಿನ್ಯಭರಿತ ಗಾಳಿ ಲಾಹೋರ್​ನತ್ತ ಬರುತ್ತಿದ್ದು, ಇದು ಇಲ್ಲಿನ ಸಮಸ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ.

"ಗಾಳಿಗೆ ಗಡಿ ಇಲ್ಲ. ಪಂಜಾಬ್​ನಲ್ಲಿ ಆಗುತ್ತಿರುವ ಹೊಗೆ ಸಮಸ್ಯೆ ಇಲ್ಲಿಯೂ ಕಾಡುತ್ತಿದೆ. ಇದು ರಾಜಕೀಯ ವಿಚಾರವಲ್ಲ ಎಂಬುದನ್ನು ನಾವು ಭಾರತದ ಪಂಜಾಬ್​ ಸಿಎಂಗೆ ಒತ್ತಿ ಹೇಳುತ್ತಿದ್ದೇವೆ. ಈ ಹೊಗೆ ಭಾರತ ಮತ್ತು ಇಲ್ಲಿ ಎರಡು ಕಡೆಯೂ ಗಂಭೀರವಾಗಿ ಕಾಡುತ್ತಿದ್ದು, ಇದರ ನಿರ್ವಹಣೆಯಲ್ಲಿ ನಾವು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ನಾವು ಮಾನವೀಯತೆಯ ನೆಲೆಗಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕಿದ್ದು ನಮ್ಮ ಜನರು ತೀವ್ರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ" ಎಂದು ಮರಿಯಮ್​ ಲಾಹೋರ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ ವೇಳೆ ತಿಳಿಸಿದರು.

ಜಗತ್ತಿನ ವಾಯುಮಾಲಿನ್ಯ ನಗರಗಳ ಪೈಕಿ ಲಾಹೋರ್​ ಮೊದಲನೇ ಸ್ಥಾನದಲ್ಲಿ ಮುಂದುವರೆದಿದ್ದು, ಆರೋಗ್ಯ ತಜ್ಞರು ಮತ್ತು ಪ್ರಾಂತ್ಯದ ಸರ್ಕಾರ ಸಾರ್ವಜನಿಕರ ಆರೋಗ್ಯ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವಂತೆ ಹಾಗೂ ಹೊರಬಂದಾಗ ತಪ್ಪದೇ ಮಸ್ಕ್​ ಧರಿಸುವಂತೆಯೂ ಸೂಚನೆ ನೀಡಲಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ರಾತ್ರಿ 11ರ ಹೊತ್ತಿಗೆ ಲಾಹೋರ್​ನ ಎಕ್ಯೂಐ 708 ಇದ್ದು, ಪಿಎಂ 2.5 ಇದೆ. ಗಾಳಿಯ ಗುಣಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಮನವಿ ಮೇರೆಗೆ ಶಾಲೆಗಳ ಸಮಯ ಬದಲಾವಣೆ ಮಾಡಲಾಗಿದೆ. ನಗರದಲ್ಲಿ ಅತಿ ಹೆಚ್ಚು ಅನಿಲ ಹೊರಸೂಸುವ ವಾಹನಗಳ ವಿರುದ್ಧವೂ ಕಾರ್ಯಾಚರಣೆ ನಡೆಸುವಂತೆ ಆದೇಶಿಸಲಾಗಿದೆ.

ದೀಪ ಹಚ್ಚಿ ದೀಪಾವಳಿ ಆಚರಿಸುವಂತೆ ಕೇಜ್ರಿವಾಲ್​ ಮನವಿ: ಈಗಾಗಲೇ ದೆಹಲಿ ವಾಯುಗುಣಮಟ್ಟ ಕಳಪೆಯಾಗಿದ್ದು, ದೀಪಾವಳಿ ಸಮಯದಲ್ಲಿ ಹಚ್ಚುವ ಪಟಾಕಿಗಳಿಂದ ವಾಯು ಗುಣಮಟ್ಟ ಮತ್ತಷ್ಟು ಹದಗೆಡುತ್ತದೆ. ಜನರು ಪಟಾಕಿ ಬದಲಾಗಿ ದೀಪಗಳನ್ನು ಬೆಳಗಿಸುವ ಮೂಲಕ ಪರಿಸರಸ್ನೇಹಿ ದೀಪಾವಳಿ ಆಚರಿಸಬೇಕು ಎಂದು ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕರೆ ನೀಡಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಜಗತ್ತಿನ ಅತ್ಯಂತ ಮಲಿನ ನಗರ ಯಾವುದು ಗೊತ್ತೆ? ಇದು ನಮ್ಮ ನೆರೆ ದೇಶದಲ್ಲೇ ಇದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.