ETV Bharat / international

ಇಸ್ರೇಲ್ ದಾಳಿಯಲ್ಲಿ ಲೆಬನಾನ್​ನ ನೀರು ಪೂರೈಕೆ ಘಟಕ ಧ್ವಂಸ

ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಲೆಬನಾನ್​ನ ಕುಡಿಯುವ ನೀರು ಪೂರೈಕೆ ಘಟಕವೊಂದು ಧ್ವಂಸಗೊಂಡಿದೆ.

author img

By ETV Bharat Karnataka Team

Published : 5 hours ago

ಲೆಬನಾನ್​ನಲ್ಲಿ ಇಸ್ರೇಲ್ ದಾಳಿಯ ದೃಶ್ಯ
ಲೆಬನಾನ್​ನಲ್ಲಿ ಇಸ್ರೇಲ್ ದಾಳಿಯ ದೃಶ್ಯ (IANS)

ಬೈರುತ್: ಆಗ್ನೇಯ ಲೆಬನಾನ್​ನ ಶೆಬಾ ಪಟ್ಟಣದ ಹೊರವಲಯದಲ್ಲಿರುವ ನೀರು ಪೂರೈಕೆ ಸ್ಥಾವರವು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಲೆಬನಾನ್ ನ ಅಲ್-ಅರ್ಕೌಬ್, ಹಸ್ಬಯಾ ಮತ್ತು ಮರ್ಜೆಯೂನ್ ಪ್ರದೇಶಗಳಲ್ಲಿನ ಹಲವಾರು ಗ್ರಾಮಗಳು ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ 'ಅಲ್-ಮಘರಾ' ಸ್ಪ್ರಿಂಗ್ ವಾಟರ್ ಯೋಜನೆಯ ಮುಖ್ಯ ನೀರು ಪೂರೈಕೆ ವ್ಯವಸ್ಥೆಯ ಮೇಲೆ ಇಸ್ರೇಲ್ ಯುದ್ಧ ವಿಮಾನದ ಮೂಲಕ ಶನಿವಾರ ಕ್ಷಿಪಣಿ ದಾಳಿ ನಡೆಸಿದೆ ಎಂದು ಶೆಬಾ ಪುರಸಭೆಯ ಮೂಲಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.

"ದಾಳಿಯಿಂದಾಗಿ ಯೋಜನೆಯ ಮುಖ್ಯ ನಿರ್ಗಮನ ದ್ವಾರವು ಸ್ಫೋಟಗೊಂಡಿದ್ದು, ನೀರು ಹೊರಗೆ ಹರಿದು ಹೋಗಲಾರಂಭಿಸಿದೆ" ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಇಸ್ರೇಲಿ ಶೆಲ್ ದಾಳಿಯ ಪರಿಣಾಮದಿಂದ ನೀರು ಪೂರೈಕೆ ಯೋಜನೆಯ ಸೌಲಭ್ಯಗಳು ತೀವ್ರವಾಗಿ ಹಾನಿಗೊಳಗಾಗಿವೆ" ಎಂದು ಯೋಜನೆಯ ನಿರ್ವಹಣಾ ಜವಾಬ್ದಾರಿಯನ್ನು ಹೊಂದಿರುವ ದಕ್ಷಿಣ ಲೆಬನಾನ್ ವಾಟರ್ ಎಸ್ಟಾಬ್ಲಿಷ್ ಮೆಂಟ್ (ಎಸ್ಎಲ್​ಡಬ್ಲ್ಯೂಇ) ಶನಿವಾರ ಎಂದು ಹೇಳಿದೆ.

ನಿರ್ವಹಣಾ ತಂಡಗಳಿಗೆ ರಕ್ಷಣೆ ಒದಗಿಸಲು ಮತ್ತು ಸೌಲಭ್ಯಗಳನ್ನು ದುರಸ್ತಿ ಮಾಡುವ ಸಲುವಾಗಿ ಹಾನಿಯನ್ನು ಪರಿಶೀಲಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ತುರ್ತು ಮತ್ತು ತೀವ್ರ ಸಂಪರ್ಕಗಳನ್ನು ಏರ್ಪಡಿಸಲಾಗಿದೆ ಎಂದು ಎಸ್ಎಲ್​ಡಬ್ಲ್ಯೂಇ ಹೇಳಿದೆ.

"2,000ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಪೂರೈಸುವ ಕುಡಿಯುವ ನೀರಿನ ಯೋಜನೆಯ ಮೇಲೆ ಇಸ್ರೇಲ್ ದಾಳಿಯಿಂದ ಉಂಟಾದ ಹಾನಿಯನ್ನು ಆದಷ್ಟು ಬೇಗ ಸರಿಪಡಿಸಲು ನಾವು ಸರ್ಕಾರಿ ಸಂಸ್ಥೆಗಳು, ಅಂತರರಾಷ್ಟ್ರೀಯ ಸಮುದಾಯ ಸಂಸ್ಥೆಗಳು ಮತ್ತು ಯುನಿಫೈಲ್ ಪಡೆಗಳಿಗೆ ಮನವಿ ಮಾಡುತ್ತೇವೆ" ಎಂದು ಅಲ್-ಅರ್ಕೌಬ್ ಮತ್ತು ಹಸ್ಬಯಾ ಪುರಸಭೆಗಳು ಹೇಳಿವೆ.

ಈ ದಾಳಿಯ ಬಗ್ಗೆ ಇಸ್ರೇಲ್ ಸೇನೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶನಿವಾರ, ತನ್ನ ವಾಯುಪಡೆಯು ಹಿಜ್ಬುಲ್ಲಾ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು ಮತ್ತು ಬೈರುತ್​ನ ದಹಿಯೆ ಉಪನಗರದಲ್ಲಿರುವ ಹಿಜ್ಬುಲ್ಲಾ ಗುಪ್ತಚರ ಪ್ರಧಾನ ಕಚೇರಿ ಕಮಾಂಡ್ ಸೆಂಟರ್ ಮೇಲೆ ನಿಖರವಾದ ಗುಪ್ತಚರ ಮಾಹಿತಿಯ ಮೇರೆಗೆ ದಾಳಿ ನಡೆಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿದೆ.

"ಈ ದಾಳಿಯು ಈ ಪ್ರದೇಶದ ಜನಸಂಖ್ಯೆಗೆ ಅಪಾಯವನ್ನುಂಟು ಮಾಡುವ, ಬೈರುತ್​ನ ಹೃದಯಭಾಗದಲ್ಲಿರುವ ವಸತಿ ಕಟ್ಟಡಗಳ ಕೆಳಗೆ ಹುದುಗಿರುವ ಹಿಜ್ಬುಲ್ಲಾದ ಶಸ್ತ್ರಾಸ್ತ್ರ ಸಂಗ್ರಹಣೆ ಮತ್ತು ಉತ್ಪಾದನಾ ಸೌಲಭ್ಯಗಳನ್ನು ಧ್ವಂಸಗೊಳಿಸುವ ಪ್ರಯತ್ನಗಳ ಭಾಗವಾಗಿದೆ." ಎಂದು ಅದು ಹೇಳಿದೆ.

ಇದನ್ನೂ ಓದಿ: ಇಸ್ರೇಲ್​ ಪ್ರಧಾನಿ ನೆತನ್ಯಾಹು ಖಾಸಗಿ ಮನೆ ಮೇಲೆ ಲೆಬನಾನ್​ ಡ್ರೋನ್​ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.