ETV Bharat / international

ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಬಂಡುಕೋರರ ಮತ್ತೊಬ್ಬ ನಾಯಕ ಹತ: ಇಸ್ರೇಲ್ - Israel killed Hezbollah official - ISRAEL KILLED HEZBOLLAH OFFICIAL

ತನ್ನ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಬಂಡುಕೋರರ ಮತ್ತೊಬ್ಬ ನಾಯಕನನ್ನು ಬೇಟೆಯಾಡಿರುವುದಾಗಿ ಎಂದು ಇಸ್ರೇಲ್​ ಭಾನುವಾರ ತಿಳಿಸಿದೆ.

ಹಿಜ್ಬುಲ್ಲಾ ಬಂಡುಕೋರರ ಮತ್ತೊಬ್ಬ ನಾಯಕ ಹತ
ಹಿಜ್ಬುಲ್ಲಾ ಬಂಡುಕೋರರ ಮತ್ತೊಬ್ಬ ನಾಯಕ ಹತ (AFP)
author img

By PTI

Published : Sep 29, 2024, 3:35 PM IST

ಜೆರುಸಲೇಂ (ಇಸ್ರೇಲ್​): ಲೆಬನಾನ್​ ಮೇಲೆ ಸರಣಿ ದಾಳಿ ನಡೆಸುತ್ತಿರುವ ಇಸ್ರೇಲ್​​ ಸೇನಾಪಡೆಗಳು ಒಬ್ಬೊಬ್ಬರಂತೆ ಹಿಜ್ಬುಲ್ಲಾ ಬಂಡುಕೋರ ನಾಯಕರನ್ನು ಹತ್ಯೆ ಮಾಡುತ್ತಿದೆ. ಎರಡು ದಿನಗಳ ಹಿಂದಷ್ಟೇ ಸಂಘಟನೆಯ ಪ್ರಮುಖ ನಾಯಕ ಹಸನ್ ನಸ್ರಲ್ಲಾ ಅವರನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿದ ಬೆನ್ನಲ್ಲೇ, ಶನಿವಾರದ ದಾಳಿಯಲ್ಲಿ ಮತ್ತೊಮ್ಮೆ ಪ್ರಮುಖ ನಾಯಕನನ್ನು ಕೊಂದಿರುವುದಾಗಿ ಇಸ್ರೇಲ್​​ ಹೇಳಿಕೊಂಡಿದೆ.

ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಹಿಜ್ಬುಲ್ಲಾ ನಾಯಕನಾದ, ಸೆಂಟ್ರಲ್ ಕೌನ್ಸಿಲ್‌ನ ಉಪ ಮುಖ್ಯಸ್ಥ ನಬಿಲ್ ಕೌಕ್​​ನನ್ನು ಬೇಟೆಯಾಡಿರುವವುದಾಗಿ ಇಸ್ರೇಲ್​ ಸೇನಾಪಡೆ ಭಾನುವಾರ ಘೋಷಿಸಿದೆ. ಇದಕ್ಕೆ ಲೆಬನಾನ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶುಕ್ರವಾರ ಬೈರುತ್‌ನಲ್ಲಿ ಬಂಡುಕೋರರ ಪ್ರಮುಖ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಹಲವಾರು ಹಿರಿಯ ಕಮಾಂಡರ್‌ಗಳು ಕೊಲ್ಲಲ್ಪಟ್ಟಿದ್ದಾರೆ. ಪೇಜರ್‌ಗಳು ಮತ್ತು ವಾಕಿ-ಟಾಕಿಗಳಿಂದ ಹತ್ಯೆಗೀಡಾಗಿದ್ದಾರೆ. ನೂರಾರು ಕ್ಷಿಪಣಿಗಳು ಮತ್ತು ರಾಕೆಟ್​ಗಳನ್ನು ಬಂಡುಕೋರರ ಪ್ರದೇಶಗಳ ಮೇಲೆ ಹಾರಿಸಲಾಗಿದೆ. ಇದರಲ್ಲಿ ಹಲವರು ಸಾವಿಗೀಡಾಗಿದ್ದಾರೆ ಎಂದು ಸೇನೆ ತಿಳಿಸಿದೆ.

ಹಿಜ್ಬುಲ್ಲಾ ಬಂಡುಕೋರರ ನಾಯಕನಾಗಿದ್ದ ನಬಿಲ್​ ಕೌಕ್ 1980 ರ ದಶಕದಲ್ಲಿ ಸಂಘಟನೆಯ ಸದಸ್ಯನಾಗಿದ್ದ. ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾದ ಮಿಲಿಟರಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ. ಅಮೆರಿಕ ಈತನ ಮೇಲೆ 2020 ರಲ್ಲಿ ನಿರ್ಬಂಧಗಳನ್ನು ಹೇರಿತ್ತು.

ಇದನ್ನೂ ಓದಿ: ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಖಂಡಿಸಿ ಚುನಾವಣಾ ಪ್ರಚಾರ ನಿಲ್ಲಿಸಿದ ಮೆಹಬೂಬಾ ಮುಫ್ತಿ - Mehbooba Mufti

ETV Bharat Logo

Copyright © 2024 Ushodaya Enterprises Pvt. Ltd., All Rights Reserved.