ETV Bharat / international

ಯುದ್ಧ ಸ್ಥಿತಿ ಇನ್ನಷ್ಟು ಜಟಿಲಗೊಳಿಸಲು ಹಮಾಸ್ ಯತ್ನ: ಇಸ್ರೇಲ್ ಆರೋಪ - Hamas

ರಂಜಾನ್ ಸಮಯದಲ್ಲಿ ಗಾಜಾದಲ್ಲಿನ ಯುದ್ಧ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಲು ಹಮಾಸ್ ಪ್ರಯತ್ನಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ.

Israel accuses Hamas of trying to complicate war situation

author img

By ETV Bharat Karnataka Team

Published : Mar 10, 2024, 1:11 PM IST

ಟೆಲ್ ಅವೀವ್ : ರಂಜಾನ್ ಸಮಯದಲ್ಲಿ ಗಾಜಾದಲ್ಲಿನ ಯುದ್ಧ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಲು ಹಮಾಸ್ ಪ್ರಯತ್ನಿಸುತ್ತಿರುವುದರಿಂದ ಅಮೆರಿಕ, ಕತಾರ್ ಮತ್ತು ಈಜಿಪ್ಟ್ ದೇಶಗಳ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗುತ್ತಿಲ್ಲ ಎಂದು ಇಸ್ರೇಲ್ ಗೂಢಚಾರ ಸಂಸ್ಥೆ ಮೊಸ್ಸಾದ್ ಆರೋಪಿಸಿದೆ.

ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಇತ್ತೀಚೆಗೆ ಜೋರ್ಡಾನ್​ನ ಅಮ್ಮಾನ್​ನಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಅವರನ್ನು ಭೇಟಿಯಾಗಿದ್ದರು ಎಂದು ಇಸ್ರೇಲ್ ಪ್ರಧಾನಿ ಕಚೇರಿ ಶನಿವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತಷ್ಟು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಮತ್ತು ಆ ಮೂಲಕ ಅಲ್ಲಿನ ಪ್ಯಾಲೆಸ್ಟೈನಿಯರ ಜೀವನವನ್ನು ಇನ್ನಷ್ಟು ದುರ್ಭರಗೊಳಿಸಲು ಅದು ಯತ್ನಿಸುತ್ತಿದೆ ಎಂಬ ಬಗ್ಗೆ ಮೊಸ್ಸಾದ್ ಮುಖ್ಯಸ್ಥರು ಸಿಐಎ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಹೇಳಿದೆ.

ಆದಾಗ್ಯೂ ಉದ್ವಿಗ್ನತೆ ಹೆಚ್ಚಾಗದಂತೆ ತಡೆಗಟ್ಟಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಕದನ ವಿರಾಮ ಒಪ್ಪಂದ ಮೂಡಿಸಲು ಮಧ್ಯವರ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗಾಜಾ ಪಟ್ಟಿಯಲ್ಲಿ ಕನಿಷ್ಠ 134 ಇಸ್ರೇಲಿ ಒತ್ತೆಯಾಳುಗಳು ಹಮಾಸ್ ವಶದಲ್ಲಿದ್ದಾರೆ (ಈ ಪೈಕಿ 31 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ) ಮತ್ತು ಜೀವಂತವಾಗಿರುವ ಒತ್ತೆಯಾಳುಗಳ ಪಟ್ಟಿಯನ್ನು ನೀಡಬೇಕೆಂದು ಇಸ್ರೇಲ್ ಹಮಾಸ್​ಗೆ ಬೇಡಿಕೆ ಇಟ್ಟಿದೆ. ಆದರೆ ಈ ಬೇಡಿಕೆಯನ್ನು ಹಮಾಸ್ ತಿರಸ್ಕರಿಸಿದೆ. ಎಲ್ಲಾ ಒತ್ತೆಯಾಳುಗಳು ಒಂದೇ ಸ್ಥಳದಲ್ಲಿ ಹಮಾಸ್​ನ ವಶದಲ್ಲಿ ಇಲ್ಲ ಹಾಗೂ ಅವರಲ್ಲಿ ಅನೇಕರು ಹಮಾಸ್​ನ ಇತರ ಅನೇಕ ಸಣ್ಣ ಪುಟ್ಟ ಸಂಘಟನೆಗಳ ವಶದಲ್ಲಿದ್ದಾರೆ ಎಂದು ಅದು ಹೇಳಿದೆ.

ಐದು ತಿಂಗಳ ಹಿಂದೆ ಗಾಜಾ ಮೇಲೆ ಇಸ್ರೇಲ್ ಆರಂಭಿಸಿದ ವಾಯು ಮತ್ತು ನೆಲದ ದಾಳಿಯ ಕಾರಣದಿಂದ ಈವರೆಗೆ ಸುಮಾರು 31,000 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದಲ್ಲಿನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ನಂತರ ಯುದ್ಧ ಆರಂಭವಾಗಿದೆ. ಈ ದಾಳಿಯಲ್ಲಿ 1,200 ಇಸ್ರೇಲಿಗರು ಕೊಲೆಯಾಗಿದ್ದರು ಮತ್ತು 253 ಇಸ್ರೇಲಿಗರನ್ನು ಹಮಾಸ್ ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋಗಿದೆ ಎಂದು ಇಸ್ರೇಲ್ ಅಂಕಿಅಂಶಗಳು ತಿಳಿಸಿವೆ.

ಇದನ್ನೂ ಓದಿ : ಮಸ್ಕ್ ಹಿಂದಿಕ್ಕಿ ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿಯಾದ ಜೆಫ್ ಬೆಜೋಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.