ETV Bharat / international

ಅಕ್ಟೋಬರ್ 7ರ ಹಮಾಸ್​ ದಾಳಿಯ ಬಗ್ಗೆ ಐಡಿಎಫ್​ಗೆ ಮೊದಲೇ ತಿಳಿದಿತ್ತು: ಇಸ್ರೇಲ್ ಮಾಧ್ಯಮ - Hamas Attack on Israel

author img

By ETV Bharat Karnataka Team

Published : Jun 18, 2024, 7:45 PM IST

ಹಮಾಸ್​ ಉಗ್ರರು ದಾಳಿ ನಡೆಸುವ ಸಂಭವನೀಯತೆಯ ಬಗ್ಗೆ ಐಡಿಎಫ್​ಗೆ ಗುಪ್ತಚರ ಮಾಹಿತಿ ಬಂದಿತ್ತು ಎಂದು ಇಸ್ರೇಲಿ ಮಾಧ್ಯಮವೊಂದು ವರದಿ ಮಾಡಿದೆ.

ಇಸ್ರೇಲಿ ಸೈನಿಕರ ಕಾರ್ಯಾಚರಣೆ
ಇಸ್ರೇಲಿ ಸೈನಿಕರ ಕಾರ್ಯಾಚರಣೆ (IANS (ಸಂಗ್ರಹ ಚಿತ್ರ))

ಟೆಲ್ ಅವೀವ್ : ಕಳೆದ ವರ್ಷ ಅಕ್ಟೋಬರ್ 7ರಂದು ಗಾಜಾ ಪಟ್ಟಿಯಿಂದ ಹಮಾಸ್​ ದಾಳಿ ನಡೆಸುವ ಎರಡು ವಾರಗಳ ಮೊದಲೇ ಇಂಥದೊಂದು ದಾಳಿ ನಡೆಯಬಹುದು ಎಂದು ಇಸ್ರೇಲ್ ಮಿಲಿಟರಿ ಗುಪ್ತಚರ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿತ್ತು ಎಂದು ಇಸ್ರೇಲ್ ಸಾರ್ವಜನಿಕ ಪ್ರಸಾರ ಸಂಸ್ಥೆ ಕಾನ್ ತಿಳಿಸಿದೆ.

ಮಿಲಿಟರಿ ನೆಲೆಗಳು ಮತ್ತು ವಸಾಹತುಗಳ ಮೇಲೆ ದಾಳಿ ನಡೆಸುವ ಬಗ್ಗೆ ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 250 ಜನರನ್ನು ಒತ್ತೆಯಾಳುಗಳನ್ನಾಗಿ ಕರೆದುಕೊಂಡು ಹೋಗುವ ಯೋಜನೆಗಳನ್ನು ಹಮಾಸ್​ ರೂಪಿಸಿದೆ ಎಂದು ಸೆಪ್ಟೆಂಬರ್ 19 ರಂದು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಗಾಜಾ ವಿಭಾಗದಲ್ಲಿ ವಿತರಿಸಲಾದ ದಾಖಲೆಯಲ್ಲಿ ವಿವರಿಸಲಾಗಿದೆ ಎಂದು ಕಾನ್ ವರದಿ ತಿಳಿಸಿದೆ.

ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿರುವ ಐಡಿಎಫ್​ನ ಅತ್ಯುನ್ನತ ಘಟಕವಾದ 8200 ಈ ವರದಿ ತಯಾರಿಸಿತ್ತು. ಆದರೆ ಹಿರಿಯ ಅಧಿಕಾರಿಗಳು ಈ ವರದಿಯನ್ನು ನಿರ್ಲಕ್ಷಿಸಿದರು. ಹತ್ತಾರು ಹಮಾಸ್​ ಉಗ್ರರು ಮಾತ್ರ ಇಸ್ರೇಲ್ ಪ್ರವೇಶಿಸಬಹುದು ಎಂದು ಅಧಿಕಾರಿಗಳು ಅಂದುಕೊಂಡಿದ್ದು ಇನ್ನೂ ದುರಂತಮಯವಾಗಿದೆ.

"ಆ ಸಮಯದಲ್ಲಿ ಭದ್ರತಾ ವ್ಯವಸ್ಥೆಯು ಪ್ಯಾಲೆಸ್ಟೈನ್​ ನಾಗರಿಕರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ಯಾಲೆಸ್ಟೈನಿಯರಿಗೆ ಕೆಲಸದ ಪರವಾನಗಿಗಳನ್ನು ಮತ್ತು ಸರಕುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ ಗಾಜಾ ಪಟ್ಟಿಯ ಶಾಂತಿಗಾಗಿ ಕೆಲಸ ಮಾಡುತ್ತಿತ್ತು" ಎಂದು ಕಾನ್ ಮಿಲಿಟರಿ ವರದಿಗಾರರೊಬ್ಬರು ಹೇಳಿದರು.

ಹಮಾಸ್​ ಉಗ್ರರು ಇಸ್ರೇಲ್​ನ ತೀರಾ ಒಳಭಾಗಕ್ಕೆ ಬರಲಾರದಷ್ಟು ತನ್ನ ಗಡಿ ರಕ್ಷಣಾ ವ್ಯವಸ್ಥೆಯು ಸುಭದ್ರವಾಗಿದೆ ಎಂದು ಐಡಿಎಫ್​ ನಂಬಿತ್ತು. ಆದರೆ ಅಕ್ಟೋಬರ್​ 7ರಂದು ಅದೆಲ್ಲವೂ ಸುಳ್ಳಾಯಿತು. ಗಾಜಾ ವಿಭಾಗದ ಇಸ್ರೇಲ್ ಅಧಿಕಾರಿಗಳು ಎಲ್ಲಾ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದರು.

ಇಸ್ರೇಲ್ ದಾಳಿಯಲ್ಲಿ 17 ಜನ ಸಾವು: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಹೊಸ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಅಧಿಕಾರಿಗಳು ಮಂಗಳವಾರ ವರದಿ ಮಾಡಿದ್ದಾರೆ. ಗಾಜಾ ಪಟ್ಟಿಯ ಮಧ್ಯಭಾಗದಲ್ಲಿರುವ ನುಸೆರಾತ್ ನಿರಾಶ್ರಿತರ ಶಿಬಿರದಿಂದ ಶವಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ವಫಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), ಮಂಗಳವಾರದ ದಾಳಿಯಲ್ಲಿ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಲಾಗಿದೆ ಮತ್ತು ಪ್ರದೇಶದ ಮಧ್ಯ ಮತ್ತು ದಕ್ಷಿಣದಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಐಡಿಎಫ್ ಪಡೆಗಳು ದೂರದ ದಕ್ಷಿಣದ ರಫಾ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಕಳೆದ ದಿನದಲ್ಲಿ ವಿವಿಧ ಎನ್ ಕೌಂಟರ್​ಗಳಲ್ಲಿ ಹಲವಾರು ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಅದು ತಿಳಿಸಿದೆ.

ಇದನ್ನೂ ಒದಿ : EXPLAINER: G 7 ಗುಂಪಿನ ಸಾಮರ್ಥ್ಯ, ದೌರ್ಬಲ್ಯಗಳೇನು? - Importance of G7 Group

ETV Bharat Logo

Copyright © 2024 Ushodaya Enterprises Pvt. Ltd., All Rights Reserved.