ETV Bharat / international

ಇರಾನ್​ನ ಸಂಭಾವ್ಯ ದಾಳಿ ಎದುರಿಸಲು ಐಡಿಎಫ್ ಸಕಲ ರೀತಿಯಲ್ಲೂ ಸಜ್ಜು: ಇಸ್ರೇಲ್​ ಸೇನೆ - IDF gears up for Iran attack

ಇರಾನ್​ ಒಂದು ವೇಳೆ ದಾಳಿ ನಡೆಸಿದರೆ ಅದನ್ನು ಎದುರಿಸಲು ಐಡಿಎಫ್ ಸಂಪೂರ್ಣ ಸಜ್ಜಾಗಿದೆ ಎಂದು ಇಸ್ರೇಲ್​ನ ರಕ್ಷಣಾ ಸಚಿವರ ಕಚೇರಿಯ ಮೂಲಗಳು ತಿಳಿಸಿವೆ.

ಗಾಜಾ ಸಂಘರ್ಷದ ದೃಶ್ಯ (ಸಂಗ್ರಹ ಚಿತ್ರ)
ಗಾಜಾ ಸಂಘರ್ಷದ ದೃಶ್ಯ (ಸಂಗ್ರಹ ಚಿತ್ರ) (IANS)
author img

By IANS

Published : Aug 1, 2024, 1:35 PM IST

ಟೆಲ್ ಅವೀವ್, ಇಸ್ರೇಲ್​: ಬುಧವಾರ ಬೆಳಗ್ಗೆ ಟೆಹ್ರಾನ್​ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯ ನಂತರ ಇರಾನ್​ ನಡೆಸಬಹುದಾದ ಸಂಭಾವ್ಯ ದಾಳಿಯನ್ನು ಎದುರಿಸಲು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಸಜ್ಜಾಗಿವೆ. ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸುವುದಾಗಿ ಇರಾನ್​ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ, ಐಡಿಎಫ್ ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ ಎಂದು ಇಸ್ರೇಲ್​ನ ರಕ್ಷಣಾ ಸಚಿವರ ಕಚೇರಿಯ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಇಸ್ರೇಲ್​ನ ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಇರಾನ್ ತನ್ನ ಛಾಯಾ ಸಂಘಟನೆಗಳಾದ ಹಮಾಸ್ ಮತ್ತು ಹಿಜ್ಬುಲ್ಲಾ ಹಾಗೂ ಸಮುದ್ರದಲ್ಲಿ ಹೌತಿಗಳನ್ನು ಬಳಸಿಕೊಂಡು ಇಸ್ರೇಲ್ ಮೇಲೆ ದಾಳಿಗಳನ್ನು ತೀವ್ರಗೊಳಿಸುವ ಸಾಧ್ಯತೆಯಿದೆ.

ಇರಾನ್​ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಟೆಹ್ರಾನ್​ಗೆ ಬಂದಿದ್ದ ಹಮಾಸ್​ ನಾಯಕ ಇಸ್ಮಾಯಿಲ್ ಹನಿಯೆಹ್ ಹಲವಾರು ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಉಭಯಕುಶಲೋಪರಿ ನಡೆಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಹನಿಯೆಹ್​ ಹತ್ಯೆಯಾಗಿರುವುದು ಇರಾನ್​ಗೆ ಭಾರಿ ಆಘಾತವನ್ನುಂಟು ಮಾಡಿದೆ. ಅಲ್ಲದೇ ಹನಿಯೆಹ್ ಅವರು ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಮಂಗಳವಾರ ಇರಾನ್​ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರೊಂದಿಗೆ ಕೂಡ ಮುಖಾಮುಖಿ ಸಭೆ ನಡೆಸಿದ್ದರು.

ಖಮೇನಿ ಅವರ ಬಹಿರಂಗ ಬೆದರಿಕೆಯ ಹಿನ್ನೆಲೆಯಲ್ಲಿ ಇಸ್ರೇಲ್ ಭದ್ರತಾ ಮಂಡಳಿಯು ಬುಧವಾರ ತನ್ನ ತುರ್ತು ಸಭೆಯಲ್ಲಿ ಟೆಲ್ ಅವೀವ್ ಮತ್ತು ಹೈಫಾದಲ್ಲಿನ ತನ್ನ ಮಿಲಿಟರಿ ನೆಲೆಯನ್ನು ಬಲಪಡಿಸಲು ಆದೇಶಿಸಿದೆ.

ಸೂಕ್ತ ರೀತಿಯಲ್ಲಿ ಪ್ರತೀಕಾರ: ಹಮಾಸ್ ಪಾಲಿಟ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆಗೈದ ಇಸ್ರೇಲ್​ ವಿರುದ್ಧ ಪ್ರಾದೇಶಿಕ ಶಾಂತಿಗೆ ಭಂಗ ಬರದಂತೆ, ಅತ್ಯಂತ ಸೂಕ್ತವಾದ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಇರಾನ್ ಮಿಲಿಟರಿ ತಜ್ಞರು ಹೇಳಿದ್ದಾರೆ.

"ಈ ಪ್ರದೇಶದಲ್ಲಿ ಯುದ್ಧ ಸ್ಥಿತಿ ಉಲ್ಬಣವಾಗಲಿದೆ, ಆದರೆ ಅದು ನಿಯಂತ್ರಿತವಾಗಿರುತ್ತದೆ" ಎಂದು ಟೆಹ್ರಾನ್ ಮೂಲದ ಅಂತಾರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಕ ಹಸನ್ ಬೆಹೆಸ್ಟಿಪೋರ್ ಕ್ಸಿನ್ಹುವಾಗೆ ತಿಳಿಸಿದರು.

ಬಿಕ್ಕಟ್ಟನ್ನು ತೀವ್ರಗೊಳಿಸುವುದು ಇರಾನ್​​ ಅಥವಾ ಪ್ರತಿರೋಧ ಗುಂಪುಗಳ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಏಪ್ರಿಲ್ ಆರಂಭದಲ್ಲಿ ಸಿರಿಯಾದಲ್ಲಿನ ಇರಾನಿನ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ಮಾರಣಾಂತಿಕ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಅತ್ಯಂತ ನಿಯಂತ್ರಿತ ದಾಳಿಯು ಇರಾನ್​ನ ಕಾರ್ಯತಂತ್ರದ ವಿಧಾನಕ್ಕೆ ಉದಾಹರಣೆಗಳಾಗಿವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಯೂರೋ ಕರೆನ್ಸಿ ಬಳಸುವ 20 ದೇಶಗಳಲ್ಲಿ ಹಣದುಬ್ಬರ ಹೆಚ್ಚಳ: ತೀವ್ರ ಕಳವಳ - Inflation in Europe

ETV Bharat Logo

Copyright © 2024 Ushodaya Enterprises Pvt. Ltd., All Rights Reserved.