ಜೆರುಸಲೇಂ: ಲೆಬನಾನ್ನಲ್ಲಿನ ಭೂಗತ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳ ಮೇಲೆ ನಡೆಸಲಾದ ವ್ಯಾಪಕ ವೈಮಾನಿಕ ಬಾಂಬ್ ದಾಳಿಯಲ್ಲಿ 50 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಮಂಗಳವಾರ ಟಿವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಸ್ರೇಲ್ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ಕಮಾಂಡರ್ಗಳು ಅವಿತಿದ್ದ ಹಿಜ್ಬುಲ್ಲಾದ ದಕ್ಷಿಣ ಮುಂಚೂಣಿಯ ಡಜನ್ಗಟ್ಟಲೆ ಭೂಗತ ಕಮಾಂಡ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಅವುಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದರು.
ಹಿಜ್ಬುಲ್ಲಾದ ಆರು ಹಿರಿಯ ಕಮಾಂಡರ್ಗಳ ಸಾವು: ಹಿಜ್ಬುಲ್ಲಾದ ದಕ್ಷಿಣ ಮುಂಚೂಣಿ ಮತ್ತು ರಾಡ್ವಾನ್ ಪಡೆಗಳ ಆರು ಹಿರಿಯ ಕಮಾಂಡರ್ಗಳು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಬಿಂಟ್ ಜೆಬೀಲ್ ಪ್ರದೇಶದ ಫಿರಂಗಿ ಕಮಾಂಡರ್ ಎಂದು ಗುರುತಿಸಲ್ಪಟ್ಟ ಅಲಿ ಅಹ್ಮದ್ ಇಸ್ಮಾಯಿಲ್ ಮತ್ತು ಹಿಜ್ಬುಲ್ಲಾದ ಗಣ್ಯ ಕಮಾಂಡೋ ಘಟಕವಾದ ರಾಡ್ವಾನ್ ಫೋರ್ಸ್ನ ಬಿಂಟ್ ಜೆಬೀಲ್ ದಾಳಿ ವಲಯದ ಮುಖ್ಯಸ್ಥ ಅಹ್ಮದ್ ಹಸನ್ ನಜಲ್ ಸೇರಿದ್ದಾರೆ ಎಂದು ಹಗರಿ ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾದ ದಕ್ಷಿಣ ಫ್ರಂಟ್ ಭೂಗತ ಮೂಲಸೌಕರ್ಯ ಮತ್ತು ಕಮಾಂಡ್ ಕೇಂದ್ರಗಳ ವ್ಯಾಪಕ ಜಾಲವನ್ನು ನಿರ್ಮಿಸಿದೆ. ಭೂ ಆಕ್ರಮಣದ ಸಮಯದಲ್ಲಿ ಐಡಿಎಫ್ ಸೈನಿಕರ ಮೇಲೆ ದಾಳಿ ಮಾಡಲು ಮತ್ತು ಇಸ್ರೇಲ್ನ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲು ಅನುಕೂಲವಾಗುವಂತೆ ಇವನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಹಗರಿ ತಿಳಿಸಿದರು.
ಸದರ್ನ್ ಫ್ರಂಟ್ನ ಏರಿಯಾ ಮೇಲೆ ದಾಳಿ - IDF: ಹಿಜ್ಬುಲ್ಲಾದ ರಾಡ್ವಾನ್ ಪಡೆಗಳು ಮತ್ತು ಸದರ್ನ್ ಫ್ರಂಟ್ ಕಾರ್ಯನಿರ್ವಹಿಸುತ್ತಿರುವ ಇಡೀ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ವಕ್ತಾರರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಐಡಿಎಫ್ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಲೆಬನಾನ್ ನ 125 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇಸ್ರೇಲಿ ಅಧಿಕೃತ ಅಂಕಿಅಂಶಗಳ ಪ್ರಕಾರ, ಹಿಜ್ಬುಲ್ಲಾ ಮಂಗಳವಾರ ಇಸ್ರೇಲ್ ಗಡಿಯುದ್ದಕ್ಕೂ 170 ಕ್ಕೂ ಹೆಚ್ಚು ರಾಕೆಟ್ಗಳನ್ನು ಉಡಾಯಿಸಿದೆ.
ಇಸ್ರೇಲಿ ದಾಳಿಗಳು ಪ್ರಾರಂಭವಾದಾಗಿನಿಂದ ಲೆಬನಾನ್ ನಲ್ಲಿ ಒಟ್ಟು ಸಾವುನೋವುಗಳ ಸಂಖ್ಯೆ 2,100 ಮೀರಿದೆ ಹಾಗೂ 10,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಲೆಬನಾನ್ನ ಹಲವಾರು ಭಾಗಗಳಲ್ಲಿ ವಾರಗಳ ಕಾಲ ಇಸ್ರೇಲ್ ನಡೆಸಿದ ಭಾರಿ ವೈಮಾನಿಕ ದಾಳಿಗಳು ಮತ್ತು ಕೆಲವೇ ದಿನಗಳಲ್ಲಿ ಹಲವಾರು ಉನ್ನತ ಕಮಾಂಡರ್ಗಳ ಸಾವಿನ ನಂತರವೂ ತನ್ನ ಯುದ್ಧ ಸಾಮರ್ಥ್ಯಕ್ಕೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹಿಜ್ಬುಲ್ಲಾದ ಹಂಗಾಮಿ ನಾಯಕ ಶೇಖ್ ನೈಮ್ ಕಾಸೆಮ್ ಹೇಳಿದ್ದಾರೆ.
ಇದನ್ನೂ ಓದಿ : ಕೀನ್ಯಾದಲ್ಲಿ 10 ಲಕ್ಷ ಜನರಿಗೆ ಆಹಾರ ಕೊರತೆ: 23 ಕೌಂಟಿಗಳಲ್ಲಿ ಕ್ಷಾಮ