ETV Bharat / international

ಫ್ರಾನ್ಸ್​ನಲ್ಲಿ 2ನೇ ಸುತ್ತಿನ ಸಂಸತ್ ಚುನಾವಣೆಗೆ ಮತದಾನ ಆರಂಭ: ಬಲಪಂಥೀಯ ಪಕ್ಷ ಮುನ್ನಡೆ - France Elections

ಫ್ರಾನ್ಸ್​ ಸಂಸತ್ತಿನ ಎರಡನೇ ಹಂತದ ಚುನಾವಣೆಗೆ ಮತದಾನ ಭಾನುವಾರ ಆರಂಭವಾಗಿದೆ.

author img

By ETV Bharat Karnataka Team

Published : Jul 7, 2024, 4:24 PM IST

ಫ್ರಾನ್ಸ್​ನಲ್ಲಿ 2ನೇ ಸುತ್ತಿನ ಸಂಸತ್ ಚುನಾವಣೆಯ ಮತದಾನ ಆರಂಭ
ಫ್ರಾನ್ಸ್​ನಲ್ಲಿ 2ನೇ ಸುತ್ತಿನ ಸಂಸತ್ ಚುನಾವಣೆಯ ಮತದಾನ ಆರಂಭ (IANS)

ಪ್ಯಾರಿಸ್: ಫ್ರಾನ್ಸ್​ನ 577 ಸದಸ್ಯ ಬಲದ ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಇನ್ನುಳಿದ 501 ಸದಸ್ಯರನ್ನು ಆಯ್ಕೆ ಮಾಡಲು ಎರಡನೇ ಮತ್ತು ನಿರ್ಣಾಯಕ ಸುತ್ತಿನ ಮತದಾನ ಭಾನುವಾರ ಆರಂಭವಾಗಿದೆ. ಫ್ರೆಂಚ್ ಆಂತರಿಕ ಸಚಿವಾಲಯ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಫ್ರೆಂಚ್ ಬಲಪಂಥೀಯ ಪಕ್ಷ ನ್ಯಾಷನಲ್ ರ್ಯಾಲಿ (ಆರ್​ಎನ್) ಜೂನ್ 30ರಂದು ನಡೆದ ಚುನಾವಣೆಯ ಮೊದಲ ಸುತ್ತಿನಲ್ಲಿ 37 ಸ್ಥಾನಗಳನ್ನು ಪಡೆದು ಮುನ್ನಡೆ ಸಾಧಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಡಪಂಥೀಯ ಪಕ್ಷಗಳ ಚುನಾವಣಾ ಮೈತ್ರಿಕೂಟವಾದ ನ್ಯೂ ಪಾಪ್ಯುಲರ್ ಫ್ರಂಟ್ (ಎನ್ಎಫ್​​ ಪಿ) 32 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದ್ದರೆ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಮಧ್ಯಸ್ಥ ಮೈತ್ರಿಕೂಟವು ಕೇವಲ ಎರಡು ಸ್ಥಾನಗಳನ್ನು ಗಳಿಸಿದೆ. ಮೊದಲ ಸುತ್ತಿನಲ್ಲಿ ವಿವಿಧ ಬಲಪಂಥೀಯ ಮತ್ತು ತೀವ್ರ ಬಲಪಂಥೀಯ ಪಕ್ಷಗಳ ಇತರ ಐದು ಪ್ರತಿನಿಧಿಗಳನ್ನು ಸಹ ಆಯ್ಕೆ ಮಾಡಲಾಯಿತು.

ಬಲಪಂಥೀಯ ಪಕ್ಷಗಳು ಅಧಿಕಾರ ಹಿಡಿಯುವುದನ್ನು ತಡೆಯುವಲ್ಲಿ ಫ್ರಾನ್ಸ್ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಕನ್ಸಲ್ಟಿಂಗ್ ಸಂಸ್ಥೆ ಎಲಾಬೆ (Elabe) ಶುಕ್ರವಾರ ಪ್ರಕಟಿಸಿದ ಸಮೀಕ್ಷೆಯ ಪ್ರಕಾರ, ಫ್ರೆಂಚ್ ಮತದಾರರ ಪೈಕಿ ಶೇ 33 ರಷ್ಟು ಜನ ಈ ಬಾರಿ ಆರ್​ಎನ್ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನ ಪಡೆಯಬೇಕೆಂದು ಬಯಸುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ ಎನ್ಎಫ್​ಪಿ ಶೇ 24 ಮತ್ತು ಮ್ಯಾಕ್ರೋನ್ ಅವರ ಮಧ್ಯಸ್ಥ ಮೈತ್ರಿಕೂಟ ಕೇವಲ ಶೇ 18 ರಷ್ಟು ಮತದಾರರ ಬೆಂಬಲ ಪಡೆದಿವೆ.

ಫ್ರಾನ್ಸ್​ನಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷವು 577 ರಾಷ್ಟ್ರೀಯ ಅಸೆಂಬ್ಲಿಯಲ್ಲಿ 289 ಸ್ಥಾನಗಳ ಸಂಪೂರ್ಣ ಬಹುಮತವನ್ನು ಹೊಂದಿರಬೇಕು. ಇತ್ತೀಚಿನ ಅಂದಾಜಿನ ಪ್ರಕಾರ ಆರ್​ಎನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುಬಹುದಾದರೂ ಬಹುಮತ ಪಡೆಯುವುದು ಕಷ್ಟವಾಗಲಿದೆ.

ಅಸೆಂಬ್ಲಿ ಚುನಾವಣೆಯಲ್ಲಿ ಯಾವುದೇ ಪಕ್ಷ ಗೆದ್ದರೂ, ತಾವು 2027ರವರೆಗೆ ಎರಡನೇ ಅಧ್ಯಕ್ಷೀಯ ಅವಧಿಯನ್ನು ಮುಂದುವರಿಸುವುದಾಗಿ ಮ್ಯಾಕ್ರೋನ್ ಘೋಷಿಸಿದ್ದಾರೆ.

ಎರಡನೇ ಸುತ್ತಿನ ಮುಂಚೆ ನಡೆದ ಚುನಾವಣಾ ಪ್ರಚಾರದ ಅವಧಿಯಲ್ಲಿ 51 ಅಭ್ಯರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆದ ಬಗ್ಗೆ ವರದಿಯಾಗಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಶುಕ್ರವಾರ ಹೇಳಿದ್ದಾರೆ. ಈ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 30 ಶಂಕಿತರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಫಲಿತಾಂಶಗಳ ಘೋಷಣೆಯ ನಂತರ ಗಲಭೆಗಳಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ಯಾರಿಸ್ ಮತ್ತು ಅದರ ಉಪನಗರಗಳಲ್ಲಿ 5,000 ಪೊಲೀಸರು ಸೇರಿದಂತೆ ಭಾನುವಾರ ಫ್ರಾನ್ಸ್​ನಾದ್ಯಂತ ಸುಮಾರು 30,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಡಾರ್ಮಾನಿನ್ ತಿಳಿಸಿದರು.

ಇದನ್ನೂ ಓದಿ: ಯುಕೆ ಚುನಾವಣಾ ಫಲಿತಾಂಶ: ಸಂಸತ್ತಿಗೆ ದಾಖಲೆ ಸಂಖ್ಯೆಯ ಭಾರತೀಯ ಮೂಲದವರು ಆಯ್ಕೆ! - British Indian MPs

ETV Bharat Logo

Copyright © 2024 Ushodaya Enterprises Pvt. Ltd., All Rights Reserved.