ETV Bharat / international

ಟ್ರಂಪ್​ - ಮಸ್ಕ್​ ಕುಚಿಕು ಗೆಳೆತನ ಹೀಗೇ ಮುಂದುವರಿಯುತ್ತಾ?

ವಿಶ್ವದ ಶ್ರೀಮಂತ ವ್ಯಕ್ತಿ ಮತ್ತು ಅಮೆರಿಕದ ಅಧ್ಯಕ್ಷರಾಗುತ್ತಿರುವ ಟ್ರಂಪ್​ ನಡುವಿನ ಈ ಬ್ರೊಮಾನ್ಸ್​​ ನಡುವೆಯೂ ಅವರಲ್ಲಿ ಕೆಲವು ನೀತಿಗಳ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

donald-trump-elon-musk-can-their-bromance-last
ಟ್ರಂಪ್​- ಮಸ್ಕ್ (AFP)
author img

By ETV Bharat Karnataka Team

Published : 2 hours ago

ವಾಷಿಂಗ್ಟನ್, ಅಮೆರಿಕ​: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಗೆದ್ದು ಬೀಗಿದ ಡೊನಾಲ್ಡ್​ ಟ್ರಂಪ್​ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್​ ಮಸ್ಕ್​ ಇದೀಗ ಕುಚಿಕು ಗೆಳೆಯರಾಗಿದ್ದಾರೆ. ಚುನಾವಣೆ ಬಳಿಕ ಕಳೆದ ವಾರ ಫ್ಲೋರಿಡಾದ ಮರ್​ - ಅ - ಲಾಗೊ ರೆಸಾರ್ಟ್​ನಲ್ಲಿ ಟ್ರಂಪ್​ ವಿಶ್ರಾಂತಿ ಪಡೆಯುವಾಗಲೂ ಮಸ್ಕ್​ ಜೊತೆಗಿದ್ದರು. ಈ ವೇಳೆ ಮಸ್ಕ್​ ಅನ್ನು ನಾನು ಹೊರಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಕೂಡ ಟ್ರಂಪ್​ ತಮಾಷೆ ಮಾಡಿದರು. ನಾನು ಅವನ್ನು ಇಲ್ಲಿ ಇರಲು ಬಯಸುತ್ತೇನೆ. ಆತ ಉತ್ತಮ ಕೆಲಸ ಮಾಡಿದ್ದಾನೆ. ಆತ ಅದ್ಬುತ ವ್ಯಕ್ತಿ ಎಂದು ಬಣ್ಣಿಸಿದ್ದರು.

ಆದರೆ, ವಿಶ್ವದ ಶ್ರೀಮಂತ ವ್ಯಕ್ತಿ ಮತ್ತು ಅಮೆರಿಕದ ಅಧ್ಯಕ್ಷರಾಗುತ್ತಿರುವ ಟ್ರಂಪ್​ ನಡುವಿನ ಸಂಬಂಧ ಗಟ್ಟಿಯಾಗುತ್ತಿರುವ ನಡುವೆಯೂ ಅವರಲ್ಲಿ ಕೆಲವು ನೀತಿಗಳ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಇದರಿಂದ ಭವಿಷ್ಯದಲ್ಲಿ ಅವರ ಈ ಸಂಬಂಧದಲ್ಲಿ ಘರ್ಷಣೆಯಾಗುವ ಸಾಧ್ಯತೆಗಳಿರುವುದು ಅಲ್ಲಗಳೆಯಲು ಸಾಧ್ಯವಿಲ್ಲ. ಅವರ ನಡುವಿನ ಪ್ರಮುಖ ಆರು ಭಿನ್ನಾಭಿಪ್ರಾಯ ಕುರಿತು ಎಎಫ್​ಪಿ ತಿಳಿಸಿದೆ.

ಯಾರು ಬಾಸ್​?: ತಮ್ಮ ಅಮೋಘ ಕೆಲಸ ಮತ್ತು ಹಾರ್ಡ್​ಕೋರ್​​ ಶೈಲಿಯಿಂದಾಗಿ ಮಸ್ಕ್​ ಹೆಸರಾಗಿದ್ದು, ಇದರಿಂದಾಗಿ ಅವರು ತಮ್ಮ ಸಂಸ್ಥೆಗಳಲ್ಲಿ ತಮ್ಮ ವೈಯಕ್ತಿಕ ನಿರ್ಧಾರದ ಮೇಲೆ ನಡೆಸುತ್ತಾರೆ. ಸಂಸ್ಥೆಗಳಲ್ಲಿ ಮಸ್ಕ್​ ಪ್ರಶ್ನಿಸುವ ಅಧಿಕಾರಿಗಳು ವಿರಳ. ಫ್ಯಾಕ್ಟರಿ ಉತ್ಪಾದನೆಯಿಂದಾಗಿ ಬೆಡ್​ರೂಂವರೆಗೆ ಅವರದ್ದೇ ನೀತಿಗಳು. ಆತ ವಿರುದ್ಧ ಬಾಯಿ ತೆಗೆದವರು ಅದೇ ಕ್ಷಣದಲ್ಲಿ ಉದ್ಯೋಗದಿಂದ ಕಿತ್ತೊಗೆಯಲಾಗುವುದು. ಅಲ್ಲದೇ ಕೆಲವು ಸಾರ್ವಜನಿಕವಾಗಿ ಅವರ ಬುದ್ಧಿವಂತಿಕೆ ಅವಮಾನಗೊಳಿಸಲಾಗುವುದು.

ಇನ್ನು ಟ್ರಂಪ್​ ಕೂಡ ಸಾರ್ಜನಿಕವಾಗಿ ಜನರನ್ನು ಮಜುಗರಕ್ಕೆ ಒಳಗಾಗಿಸುವ ಮತ್ತು ಸ್ಥಾನದಿಂದ ಕಿತ್ತೊಗೆಯುವಲ್ಲಿ ಹಿಂದೆ ಮುಂದೆ ಯೋಚಿಸುವುದಿಲ್ಲ. ಇವರಿಗೆ ಬೇಕಿರುವುದು ನಿಯತ್ತು. ಸಲಹೆಗಾರರು ಮತ್ತು ಕ್ಯಾಬಿನೆಟ್​ ಸಚಿವರ ವಿರುದ್ದ ಪರಸ್ಪರ ಆಟಕ್ಕೆ ಬಿಟ್ಟು ಮಜಾ ಮಾಡುವುದು ಇವರಿಗೆ ಇಷ್ಟ ಎಂದು ಮಾಜಿ ಆಪ್ತರು ಕೂಡ ತಿಳಿಸಿದ್ದಾರೆ

ಮಸ್ಕ್​​ ಮೊದಲ ಬಾರಿ ಸಾರ್ವಜನಿಕವಾಗಿ ಟ್ರಂಪ್​ ವಿರುದ್ಧ ಕಳೆದ ವಾರ ಬೋರಿಸ್ ಎಪ್ಶ್ಟೇನ್ ಅಧಿಕಾರ ವರ್ಗಾವಣೆ ವೇಳೆ ಬುಸುಗುಟ್ಟಿದ್ದಾರೆ ಎಂದು ಆಕ್ಸಿಯೊಸ್​ ನ್ಯೂಸ್​ ತಾಣ ತಿಳಿಸಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿಗಾಗಿ ಬ್ರೋಕರೇಜ್ ಬಿಲಿಯನೇರ್ ಹೊವಾರ್ಡ್ ಲುಟ್ನಿಕ್ ಅನ್ನು ಬಹಿರಂಗವಾಗಿ ಅನುಮೋದಿಸಿದರು. ಇದು ಆರಂಭಿಕ ಪರೀಕ್ಷೆ ಎಂದೇ ಹೇಳಲಾಗುತ್ತಿದೆ.

ಹವಾಮಾನ ಬದಲಾವಣೆ: ಜಾಗತಿಕ ತಾಪಮಾನದ ಕಾಳಜಿ ಹೊರತಾಗಿ 2004 ರಲ್ಲಿ ಮಸ್ಕ್​​ ಟೆಸ್ಲಾಗೆ ಹೂಡಿಕೆ ಮಾಡಿದರು. 2017ರಲ್ಲಿ ಟ್ರಂಪ್​ ಬ್ಯುಸಿನೆಸ್​​ ಸಲಹೆಗಾರ ಮಂಡಳಿಗೆ ರಾಜೀನಾಮೆ ನೀಡಿದರು. ಇದಕ್ಕೆ ಕಾರಣ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ನಿರ್ಧಾರವನ್ನು ಖಂಡಿಸಿದರು.

ಹವಾಮಾನ ಬದಲಾವಣೆ ನಿಜ. ಆದರೆ, ವಿಶ್ವ ಅಥವಾ ಅಮೆರಿಕಕ್ಕಾಗಿ ಪ್ಯಾರಿಸ್​ ತೊರೆಯುವುದು ಉತ್ತಮವಲ್ಲ ಎಂದು ಮಸ್ಕ್​ ಅಂದು ಟ್ವೀಟ್​​​ ಮಾಡಿದ್ದರು. ಆದರೆ, ಟ್ರಂಪ್​ ಮಾತ್ರ ಹವಾಮಾನ ಬದಲಾವಣೆ ಸುಳ್ಳು ಎಂದು ಕರೆದು ದೂರವಾದರು. 2020ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​​ ಮತ್ತೆ ಪ್ಯಾರಿಸ್​ ಒಪ್ಪಂದಕ್ಕೆ ಮರು ಸೇರ್ಪಡೆಯಾದರು.

ಇತ್ತೀಚಿಗೆ ನಮ್ಮ ನಿಲುವನ್ನು ಬದಲಾಯಿಸಿಕೊಂಡಿರುವ ಮಸ್ಕ್​, ಆಗಸ್ಟ್​ನಲ್ಲಿ ಟ್ರಂಪ್​ ಜೊತೆಗೆ ಎಕ್ಸ್​ನಲ್ಲಿ ಸಂವಾದ ಮಾಡುವಾಗ ನಾವು ಇಂದಿನಿಂದ 50-100 ವರ್ಷ ಬದುಕಬಹುದಾದರೆ, ಇದು ಪ್ರಾಯಶಃ ಓಕೆ ಎಂದರು. ವಿಶ್ವಸಂಸ್ಥೆ ಐಪಿಸಿಸಿ ಜಗತ್ತಿನ ಪ್ರಮುಖ ಹವಾಮಾನ ತಜ್ಞರ ಮಂಡಳಿ ಹೇಳುವಂತೆ 2030ಕ್ಕೆ ಮುಂಚೆಯೇ ನಾವು ಪೂರ್ವ ಕೈಗಾರಿಕಾ ಸಮಯದಲ್ಲಿನ 1.5ಸೆ ಗಿಂತ ಹೆಚ್ಚಿನ ಜಾಗತಿಕ ತಾಪಮಾನಕ್ಕೆ ತಲುಪಬಹುದು. ಇದು ಪರಿಸರ ವ್ಯವಸ್ಥೆ ಮೇಲೆ ಪ್ರಮುಖವಾಗಿ ಪರಿಣಾಮ ಬೀರಲಿದೆ ಎಂದರು.

ಶಕ್ತಿ ಬದಲಾವಣೆ: ಶಕ್ತಿ ಕ್ಷೇತ್ರದಲ್ಲಿ ಬದಲಾವಣೆಯಲ್ಲಿ ಮಸ್ಕ್ ಕೊಂಚ ಮುಂದಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್​ ಕಾರ್​ ಜೊತೆಗೆ ದೇಶಿಯ ಬ್ಯಾಟರಿ ಟೆಕ್ನಾಲಜಿಯಲ್ಲಿ ಅಭಿವೃದ್ಧಿ ಮತ್ತು ಸೌರ ಶಕ್ತಿ ರೂಫ್​ ಟೈಲ್ಸ್​ ಭವಿಷ್ಯ ಕಂಡಿದ್ದಾರೆ. ಆದರೆ, ಟ್ರಂಪ್​ ಇನ್ನು ಪಳೆಯುಳಿಕೆ ಇಂಧನದ ಸೌಲಭ್ಯ ಮತ್ತು ಅನುಮತಿಗಾಗಿ ಡ್ರಿಲ್ಲಿಂಗ್​ ನಡೆಸಿದ್ದಾರೆ.

ಟ್ರಂಪ್ ಅವರ ಗಣಿ ಮತ್ತು ಸುಡುವ ಹೈಡ್ರೋಕಾರ್ಬನ್ ಆರ್ಥಿಕತೆಯನ್ನು ಮಸ್ಕ್ ಅಪಹಾಸ್ಯ ಮಾಡುತ್ತಿದ್ದರು. ಟ್ರಂಪ್​ ಫ್ರಾಕಿಂಗ್ ಮ್ಯಾಗ್ನೇಟ್ ತಮ್ಮ ಶಕ್ತಿ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.

ಚೀನಾದ ಮೇಲಿನ ಒಲವು: ಟ್ರಂಪ್​ ಚೀನಾದ ಮೇಲೆ ಆಕ್ರಮಣಕಾರಿ ಒಲವು ಹೊಂದಿದ್ದು, ಎರಡು ದೊಡ್ಡ ಆರ್ಥಿಕ ದೇಶಗಳ ವ್ಯಾಪಾರ ಯುದ್ಧವೂ ಕೂಡ ಮಸ್ಕ್​ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಚೀನಾ ಟೆಸ್ಲಾಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಇಲ್ಲಿ ಗಿಗಾಪ್ಯಾಕ್ಟರಿ ಹೊಂದಿದೆ. ಚೀನಾದ ಆಡಳಿತ ಸರ್ಕಾರದ ವಿರುದ್ಧ ಮಸ್ಕ್​​ ಯಾವುದೇ ನಕಾರಾತ್ಮಕ ಮಾತುಗಳನ್ನು ಕೂಡ ಆಡಿಲ್ಲ.

ಸರ್ಕಾರದ ಸಾಮರ್ಥ್ಯ: ತನ್ನ ಸಂಸ್ಥೆಯಲ್ಲಿಯೇ ವೆಚ್ಚ ಕಡಿತಕ್ಕೆ ಮುಂದಾದ ಮಸ್ಕ್​ ಇದೀಗ ಟ್ರಂಪ್​ ಸರ್ಕಾರದ ಸಾಮರ್ಥ್ಯ ವಿಭಾಗದ ನಿರ್ವಹಣೆ ನೀಡಿದ್ದು, ಸರ್ಕಾರದ ವೆಚ್ಚಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಹಲವು ಕಾರ್ಯಕ್ರಮಗಳ ಕಡಿತದ ಯೋಜನೆಯನ್ನು ಹೊಂದಿದ್ದರು. ಇದು ರಾಜಕೀಯವಾಗಿ ರಿಪಬ್ಲಿಕ್​ನಿಂದ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ.

ಟೆಕ್​ ದೈತ್ಯರ ನಡುವಿನ ಕದನ: ಕಳೆದೊಂದು ದಶಕದಿಂದ ಮಸ್ಕ್​ ಸಿಲಿಕಾನ್​ ವ್ಯಾಲಿಯ ದೊಡ್ಡ ಟೆಕ್​ ಕಂಪನಿಗಳ ಜೊತೆಗೆ ವೈಯಕ್ತಿಕ ಹಗೆತನ ಹೊಂದಿದ್ದಾರೆ. ಆಡಳಿತದದಲ್ಲಿ ಈ ಸಂಬಂಧ ಅವರು ಸಂಘರ್ಷವನ್ನು ಎದುರಿಸಬಹುದು. ಇದೇ ವೇಳೆ ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಸೊಸ್​​ ಟ್ರಂಪ್​ಗೆ ಹತ್ತಿರವಾದರೆ, ಸ್ಪೇಸ್​ಎಕ್ಸ್​ ಸಹಿಸಬಹುದೇ ಎಂಬ ಪ್ರಶ್ನೆ ಕೂಡ ಮೂಡಿದೆ.

ಇದನ್ನೂ ಓದಿ: ಎಲೋನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ತನ್ನ ಸರ್ಕಾರದಲ್ಲಿ ಮಹತ್ವದ ಹುದ್ದೆ ನೀಡಿದ ಡೊನಾಲ್ಡ್ ಟ್ರಂಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.