ETV Bharat / international

ತಾಲಿಬಾನ್ ಆಡಳಿತದಲ್ಲಿ ಅಪರಾಧ ಪ್ರಮಾಣ ಶೇ 30ರಷ್ಟು ಇಳಿಕೆ: ಅಫ್ಘಾನಿಸ್ತಾನ ಸರ್ಕಾರದ ಪ್ರತಿಪಾದನೆ - Afghan government - AFGHAN GOVERNMENT

ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಮಾಣ ಇಳಿಕೆಯಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

ಕಾಬೂಲ್​ನಲ್ಲಿ ಸರ್ಕಾರದ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಮಂಡಿಸಿದ ಒಳಾಡಳಿತ ಉಪ ಸಚಿವ ಮೊಹಮ್ಮದ್ ನಬಿ ಒಮಾರಿ ಮತ್ತು ಇತರರು
ಕಾಬೂಲ್​ನಲ್ಲಿ ಸರ್ಕಾರದ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಮಂಡಿಸಿದ ಒಳಾಡಳಿತ ಉಪ ಸಚಿವ ಮೊಹಮ್ಮದ್ ನಬಿ ಒಮಾರಿ ಮತ್ತು ಇತರರು (IANS)
author img

By ETV Bharat Karnataka Team

Published : Aug 27, 2024, 5:03 PM IST

ಕಾಬೂಲ್: ತಾನು ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಕಾನೂನು ಸುವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ದೇಶಾದ್ಯಂತ ಅಪರಾಧ ಪ್ರಕರಣಗಳ ಪ್ರಮಾಣ ಶೇಕಡಾ 30ರಷ್ಟು ಇಳಿಕೆಯಾಗಿದೆ ಎಂದು ತಾಲಿಬಾನ್​ ಸರ್ಕಾರದ ಒಳಾಡಳಿತ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿಕೊಂಡಿದೆ.

ಮಂಗಳವಾರ ಕಾಬೂಲ್​ನಲ್ಲಿ ತಮ್ಮ ಸರ್ಕಾರದ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಮಂಡಿಸಿದ ಒಳಾಡಳಿತ ಉಪ ಸಚಿವ ಮೊಹಮ್ಮದ್ ನಬಿ ಒಮಾರಿ, ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ದೇಶದ ನಾಗರಿಕರು ಸುರಕ್ಷಿತವಾಗಿ ವಾಸಿಸಲು ಮತ್ತು ಪ್ರಾಂತ್ಯಗಳ ನಡುವೆ ಮುಕ್ತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ ಎಂದು ಒತ್ತಿ ಹೇಳಿದರು.

ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂಡ್​ ಜಾದಾ ಅವರ ಆದೇಶಗಳು ಮತ್ತು ನ್ಯಾಯಾಲಯದ ತೀರ್ಪುಗಳಿಂದ ಮಾರ್ಗದರ್ಶನ ಪಡೆದ ಕಾರ್ಯತಂತ್ರದ ಯೋಜನೆಯ ಪ್ರಕಾರ ಸಚಿವಾಲಯದ ಚಟುವಟಿಕೆಗಳನ್ನು ಈಗ ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎಂದು ಒಮಾರಿ ಹೇಳಿದರು.

"ರಾಷ್ಟ್ರವ್ಯಾಪಿ ಅಪರಾಧ ಪ್ರಮಾಣವು ಶೇಕಡಾ 30 ರಷ್ಟು ಕಡಿಮೆಯಾಗಿರುವುದು ರಾಷ್ಟ್ರೀಯ ಪಡೆಗಳ ಅವಿರತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ರಾಷ್ಟ್ರೀಯ ಪೊಲೀಸ್ ತರಬೇತಿ ಕೇಂದ್ರಗಳನ್ನು ವೃತ್ತಿಪರಗೊಳಿಸಲು ಮತ್ತು ಸಜ್ಜುಗೊಳಿಸಲು ಸಚಿವಾಲಯ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಪಾಯದ ಪರಿಸ್ಥಿತಿಗಳನ್ನು ಎದುರಿಸಲು ಪೊಲೀಸರು ಈಗ ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ" ಎಂದು ಸಚಿವರು ತಿಳಿಸಿದರು.

ದೇಶದ ಸುರಕ್ಷತಾ ವ್ಯವಸ್ಥೆಯ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದ ಒಮಾರಿ, ಅಪಹರಣದ ಪ್ರಕರಣಗಳಲ್ಲಿ ಭದ್ರತಾ ಪಡೆಗಳು ನಡೆಸಿದ 250 ಕಾರ್ಯಾಚರಣೆಗಳಲ್ಲಿ 34 ಅಪಹರಣಕಾರರನ್ನು ಕೊಲ್ಲಲಾಗಿದೆ ಮತ್ತು 76 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡಲು ಗಸಗಸೆ ತೋಟಗಳನ್ನು ನಾಶಪಡಿಸಲಾಗುತ್ತಿದೆ, ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮಾದಕವಸ್ತು ವ್ಯಾಪಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಉಲ್ಲೇಖಿಸಿದರು.

ಕಳೆದ ಒಂದು ವರ್ಷದಲ್ಲಿ ಅಧಿಕಾರಿಗಳು 3,643 ಟನ್ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ, 790 ಡ್ರಗ್ಸ್​ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳನ್ನು ನಾಶಪಡಿಸಿದ್ದಾರೆ ಮತ್ತು 10,564 ಶಂಕಿತರನ್ನು ಬಂಧಿಸಿದ್ದಾರೆ. ಹೆಚ್ಚುವರಿಯಾಗಿ, 27,891 ವ್ಯಸನಿಗಳನ್ನು ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಲಾಗಿದೆ ಮತ್ತು 17,651 ಹೆಕ್ಟೇರ್ ಭೂಮಿಯನ್ನು ಗಸಗಸೆ ಕೃಷಿಯಿಂದ ತೆರವುಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

1.95 ಮಿಲಿಯನ್ ಯುರೋ, 845,000 ಯುರೋ, 4.83 ಮಿಲಿಯನ್ ಸೌದಿ ರಿಯಾಲ್ ಮತ್ತು 100,000 ದಿರ್ಹಾಮ್ ಸೇರಿದಂತೆ ದೊಡ್ಡ ಪ್ರಮಾಣದ ವಿದೇಶಿ ಕರೆನ್ಸಿಯನ್ನು ವಿವಿಧ ವಿಮಾನ ನಿಲ್ದಾಣಗಳಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಅದನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಆರೋಪಿಗಳನ್ನು ಜೈಲಿಗೆ ಹಾಕಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಶ್ರೀಲಂಕಾ ನೌಕಾಪಡೆಯಿಂದ 8 ತಮಿಳು ಮೀನುಗಾರರ ಬಂಧನ: ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹ - TN fishermen arrested by Sri Lanka

ETV Bharat Logo

Copyright © 2024 Ushodaya Enterprises Pvt. Ltd., All Rights Reserved.