ETV Bharat / international

ಹಮಾಸ್​- ಇಸ್ರೇಲ್​ ಸಂಘರ್ಷ ಕುರಿತ ವಿವಾದ: ರಾಜೀನಾಮೆ ನೀಡಿದ ಕೊಲಂಬಿಯಾ ಯುನಿರ್ಸಿಟಿ ಅಧ್ಯಕ್ಷೆ - Columbia University President

ಶಫೀಕ್​ ರಾಜೀನಾಮೆ ಹಿನ್ನೆಲೆ ಮಧ್ಯಂತರ ಅಧ್ಯಕ್ಷರಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಇರ್ವಿಂಗ್ ವೈದ್ಯಕೀಯ ಕೇಂದ್ರದ ಸಿಇಒ ಕತ್ರಿನಾ ಆರ್ಮ್‌ಸ್ಟ್ರಾಂಗ್ ಹುದ್ದೆ ನಿರ್ವಹಣೆ ಮಾಡಲಿದ್ದಾರೆ.

columbia-university-president-resigns-after-months-of-turmoil-punctuated-by-clashes-over-israel-hamas-war
ಮಿನೌಚೆ ಶಫೀಕ್ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 15, 2024, 12:30 PM IST

ನ್ಯೂಯಾರ್ಕ್​: ಕೊಲಂಬಿಯಾ ಯುನಿವರ್ಸಿಟಿಯ ಅಧ್ಯಕ್ಷರಾದ ಮಿನೌಚೆ ಶಫೀಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಮಾಸ್​-ಇಸ್ರೇಲ್​ ಯುದ್ಧದ ಸಂಬಂಧ ನ್ಯೂಯಾರ್ಕ್​​ ಯುನಿವರ್ಸಿಟಿಯಲ್ಲಿ ಉಂಟಾದ ಪ್ರತಿಭಟನೆಗಳ ಪ್ರಕ್ಷುಬ್ಧತೆಯನ್ನು ಅವರು ಎದುರಿಸಿದ್ದರು.

ಮ್ಯಾನ್‌ಹ್ಯಾಟನ್‌ನಲ್ಲಿರುವ ಐವಿ ಲೀಗ್ ಶಾಲೆಯಲ್ಲಿ ಈ ಯುದ್ಧ ಸಂಬಂಧ ಭಾರೀ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೇ ಪ್ಯಾಲೆಸ್ತೇನಿ ಪರ ಹೋರಾಟದಲ್ಲಿ ನಡೆದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ಕಾರಣವಾಗಿತ್ತು. ಅಲ್ಲದೇ, ಈ ಪ್ರತಿಭಟನೆಗಳು ದೇಶದೆಲ್ಲೆಡೆಯ ಕಾಲೇಜುಗಳಿಗೂ ವ್ಯಾಪ್ತಿಸಿತ್ತು. ಘಟನೆಯಲ್ಲಿ ಅನೇಕರ ಬಂಧನ ಕೂಡ ಆಗಿತ್ತು.

ಮೂವರು ಡೀನ್​ಗಳ ರಾಜೀನಾಮೆ ಬಳಿಕ ಇದೀಗ ಶಫೀಕ್​ ರಾಜೀನಾಮೆ ಸಲ್ಲಿಕೆ ಆಗಿದೆ ಎಂದು ದೃಢಪಟ್ಟಿದೆ. ಅವರು ಕ್ಯಾಂಪಸ್​ ಚರ್ಚೆಯಲ್ಲಿ ಯಹೂದಿ ಜೀವನ ಪರ ಮತ್ತು ವಿರೋಧಿಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಫೀಕ್​ ಕೂಡ ಯುನಿವರ್ಸಿಟಿ ನಾಯಕಿಯಾಗಿದ್ದು, ಈ ವರ್ಷದ ಆರಂಭದಲ್ಲಿ ಅವರನ್ನು ಪ್ರಶ್ನಿಸಲು ಕಾಂಗ್ರೆಸ್​ ಕರೆ ನೀಡಿತ್ತು. ಕೊಲಂಬಿಯಾದ ಕ್ಯಾಂಪಸ್‌ನಲ್ಲಿ ಯೆಹೂದಿ ವಿರೋಧಿಗಳ ಬಗ್ಗೆ ಅವರು ಕ್ರಮ ಕೈಗೊಂಡಿಲ್ಲ ಎಂದು ಕೂಡ ರಿಪಬ್ಲಿಕನ್​ ಟೀಕೆ ಮಾಡಿತ್ತು.

ಕಳೆದ ವರ್ಷ ಜನವರಿಯಲ್ಲಿ ಶಫೀಕ್​ ನೇಮಕವಾಗಿದ್ದು, ಸೆ.3ರಂದು ತರಗತಿ ಆರಂಭವಾಗುವ ಮುನ್ನವೇ ಅವರು ಯುನಿವರ್ಸಿಟಿ ಸಮುದಾಯಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕೊಲಂಬಿಯನ್​ ಐಡಿ ಮತ್ತು ನೋಂದಣಿ ಅತಿಥಿಗಳಿಗೆ ಕ್ಯಾಂಪಸ್​ ಸೇವೆಯನ್ನು ನಿಯಂತ್ರಿಸಲು ಯುನಿವರ್ಸಿಟಿ ಮುಂದಾಗಿದೆ. ಹೊಸ ಸೆಮಿಸ್ಟರ್​ನಲ್ಲಿ ಅಡಚಣೆಯನ್ನು ಹತ್ತಿಕ್ಕುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ರಾಜೀನಾಮೆ ಪ್ರಮುಖ ಕ್ಷೇತ್ರದಲ್ಲಿ ಪ್ರಗತಿಯ ನಡುವೆ ನಮ್ಮ ಸಮುದಾಯದಲ್ಲಿನ ವಿಭಿನ್ನ ದೃಷ್ಟಿಕೋನವನ್ನು ಎದುರಿಸುವಲ್ಲಿ ಕಷ್ಟವಾಗಿದೆ. ಈ ಅವಧಿಯಲ್ಲಿ ನಮ್ಮ ಕುಟುಂಬ ಗಣನೀಯ ಪರಿಣಾಮ ಎದುರಿಸಿದೆ. ಈ ಬೇಸಿಗೆಯಲ್ಲಿ ನನ್ನ ಸವಾಲನ್ನು ಎದುರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಶಫೀಕ್​ ರಾಜೀನಾಮೆ ಹಿನ್ನೆಲೆ ಮಧ್ಯಂತರ ಅಧ್ಯಕ್ಷರಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಇರ್ವಿಂಗ್ ವೈದ್ಯಕೀಯ ಕೇಂದ್ರದ ಸಿಇಒ ಕತ್ರಿನಾ ಆರ್ಮ್‌ಸ್ಟ್ರಾಂಗ್ ಹುದ್ದೆ ನಿರ್ವಹಣೆ ಮಾಡಲಿದ್ದಾರೆ ಎಂದು ಕೊಲಂಬಿಯಾ ಮಂಡಳಿಯ ಟ್ರಸ್ಟಿಗಳು ತಿಳಿಸಿದ್ದಾರೆ.

ಹೊಸ ಜವಾಬ್ಧಾರಿ ಕುರಿತು ಮಾತನಾಡಿರುವ ಕತ್ರಿನಾ ಆರ್ಮ್​​ಸ್ಟ್ರಾಂಗ್​, ಸವಾಲಿನ ಸಮಯಗಳು ಸಮುದಾಯದಲ್ಲಿ ಪ್ರತಿಯೊಂದು ಗುಂಪು ಮತ್ತು ವ್ಯಕ್ತಿಯಿಂದ ಗಂಭೀರ ನಾಯಕತ್ವದ ಅವಕಾಶ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿರುತ್ತದೆ. ಈ ಹುದ್ದೆಗೆ ನಾನು ಕಾಲಿಡುತ್ತಿದ್ದು, ಕಳೆದೊಂದು ವರ್ಷದಿಂದ ಯುನಿವರ್ಸಿಟಿಯಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಅರಿವಿದೆ ಎಂದಿದ್ದಾರೆ.

ಇದನ್ನೂ ಓದಿ: ಆಫ್ರಿಕಾ ದೇಶಗಳಲ್ಲಿ ಮಂಕಿಫಾಕ್ಸ್​ ಉಲ್ಬಣ: ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ WHO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.