ETV Bharat / international

ಈಸ್ಟರ್‌ಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಕಂದಕಕ್ಕೆ ಬಿದ್ದು 45 ಮಂದಿ ಸಾವು; ಬದುಕುಳಿದ ಏಕೈಕ ಮಗು! - South Africa Bus Crash

ದಕ್ಷಿಣ ಆಫ್ರಿಕಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈಸ್ಟರ್ ಹಬ್ಬಕ್ಕೆ ಜನರನ್ನು ಹೊತ್ತು ಸಾಗುತ್ತಿದ್ದ ಬಸ್ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ.

ಬಸ್​ ಅಪಘಾತ
ಬಸ್​ ಅಪಘಾತ
author img

By PTI

Published : Mar 29, 2024, 11:05 AM IST

ಕೇಪ್‌ಟೌನ್(ದಕ್ಷಿಣ ಆಫ್ರಿಕಾ): ಈಸ್ಟರ್ ಹಬ್ಬಕ್ಕೆ ಜನರನ್ನು ಹೊತ್ತು ಸಂಚರಿಸುತ್ತಿದ್ದ ಬಸ್ ಭೀಕರ ರಸ್ತೆ ಅಪಘಾತಕ್ಕೊಳಗಾದ ಘಟನೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಗುರುವಾರ ಸಂಭವಿಸಿದೆ. ಇಲ್ಲಿನ ಮಮಟ್ಲಕಲಾ ಸೇತುವೆಯಿಂದ ಸುಮಾರು 164 ಅಡಿಗಳಷ್ಟು ಆಳದಲ್ಲಿರುವ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, 45 ಜನರು ಮೃತಪಟ್ಟಿದ್ದಾರೆ ಎಂದು ದೇಶದ ಉತ್ತರ ಪ್ರಾಂತ್ಯದ ಲಿಂಪೊಪೊದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬದುಕುಳಿದ ಏಕೈಕ ಮಗು: ಅಪಘಾತದಲ್ಲಿ ಬದುಕುಳಿದ 8 ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ. ಈ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.

ಬೆಂಕಿಯಲ್ಲಿ ಅನೇಕ ದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದವು. ಕೆಲವು ಮೃತದೇಹಗಳು ವಾಹನದೊಳಗೆ ಸಿಲುಕಿಕೊಂಡಿದ್ದವು. ಈ ಬಸ್ ನೆರೆ ದೇಶ ಬೋಟ್ಸ್ವಾನಾದಿಂದ ಈಸ್ಟರ್ ತೀರ್ಥಯಾತ್ರೆಯನ್ನು ಆಯೋಜಿಸಲಾದ ಜನಪ್ರಿಯ ಮೋರಿಯಾ ಪಟ್ಟಣಕ್ಕೆ ಪ್ರಯಾಣಿಸುತ್ತಿತ್ತು ಎಂದು ಅಲ್ಲಿನ ಅಧಿಕಾರಿಗಳ ತಿಳಿಸಿದ್ದಾರೆ.

ಇದನ್ನೂ ಓದಿ: ವಾರಾಣಸಿಗೆ ಹೊರಟ ಕಾರು ತೆಲಂಗಾಣದಲ್ಲಿ ಅಪಘಾತ: ಮೈಸೂರು ಮೂಲದ ಇಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.