ETV Bharat / international

ಶೇಖ್ ಹಸೀನಾ ಪಕ್ಷದ ವಿದ್ಯಾರ್ಥಿ ಸಂಘಟನೆ ನಿಷೇಧಿಸಿದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ

ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಅನ್ನು ಬಾಂಗ್ಲಾದೇಶದ ಮಧ್ಯಂತರ ಸರಕಾರ ನಿಷೇಧಿಸಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (IANS)
author img

By ETV Bharat Karnataka Team

Published : Oct 24, 2024, 1:32 PM IST

ಢಾಕಾ, ಬಾಂಗ್ಲಾದೇಶ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಅನ್ನು ಬಾಂಗ್ಲಾದೇಶದ ಮಧ್ಯಂತರ ಸರಕಾರ ನಿಷೇಧಿಸಿದೆ. ಜುಲೈ - ಆಗಸ್ಟ್ ದಂಗೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಗುಂಪಿನ ಬೇಡಿಕೆಯ ಮೇರೆಗೆ 2009ರ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಛಾತ್ರ ಲೀಗ್ ನಿಷೇಧಿಸಲಾಗಿದೆ.

ಭಯೋತ್ಪಾದನಾ ವಿರೋಧಿ ಕಾಯ್ದೆ 2009ರ ಸೆಕ್ಷನ್ 18 ರ ಉಪ-ವಿಭಾಗ (1) ರಲ್ಲಿ ಒದಗಿಸಲಾದ ಅಧಿಕಾರಗಳ ಅಡಿ ಸರ್ಕಾರವು ಬಾಂಗ್ಲಾದೇಶ ಅವಾಮಿ ಲೀಗ್​ನ ಸಹೋದರ ಸಂಘಟನೆ ಬಾಂಗ್ಲಾದೇಶ್ ಛಾತ್ರ ಲೀಗ್ ಅನ್ನು ನಿಷೇಧಿಸಿದೆ ಎಂದು ಬಾಂಗ್ಲಾದೇಶ ಗೃಹ ಸಚಿವಾಲಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಏನಿದೆ?: "ಬಾಂಗ್ಲಾದೇಶ ಸ್ವತಂತ್ರವಾದ ನಂತರ ವಿವಿಧ ಸಮಯಗಳಲ್ಲಿ, ವಿಶೇಷವಾಗಿ ಕಳೆದ 15 ವರ್ಷಗಳ ಸರ್ವಾಧಿಕಾರಿ ಆಡಳಿತದ ಅವಧಿಯಲ್ಲಿ, ಬಾಂಗ್ಲಾದೇಶ ಅವಾಮಿ ಲೀಗ್​ ನ ಸಹೋದರ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಕೊಲೆಗಳು, ಚಿತ್ರಹಿಂಸೆ, ಸಾರ್ವಜನಿಕ ಕೋಣೆಗಳಲ್ಲಿ ಕಿರುಕುಳ, ವಸತಿ ನಿಲಯಗಳಲ್ಲಿ ಸೀಟುಗಳ ವ್ಯಾಪಾರ, ಗ್ಯಾಂಗ್ ದೌರ್ಜನ್ಯ, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಅಪಾಯಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ" ಎಂದು ಬಾಂಗ್ಲಾದೇಶ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

"ಇವುಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಮಾಹಿತಿಯನ್ನು ದೇಶದ ಎಲ್ಲಾ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ ಮತ್ತು ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಕೆಲವು ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿರುವುದು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಸಾಬೀತಾಗಿದೆ" ಎಂದು ಬುಧವಾರ ಸಂಜೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿ ಆಂದೋಲನದ ಬೇಡಿಕೆ ಇದು: ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲು ಕಾರಣವಾದ ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನವು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ರಾಜೀನಾಮೆ ಸೇರಿದಂತೆ ಐದು ಬೇಡಿಕೆಗಳನ್ನು ಈಡೇರಿಸಬೇಕೆಂದು ಮಂಗಳವಾರ ಒತ್ತಾಯಿಸಿತ್ತು. ಅವಾಮಿ ಲೀಗ್​ನ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಅನ್ನು ನಿಷೇಧಿಸುವುದು ಸಹ ಈ ಬೇಡಿಕೆಗಳಲ್ಲಿ ಒಂದಾಗಿದೆ.

ಜುಲೈ 15 ರಿಂದ ಆರಂಭವಾಗಿದ್ದ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ಸಮಯದಲ್ಲಿ ಬಾಂಗ್ಲಾದೇಶ ಛಾತ್ರ ಲೀಗ್ ನಾಯಕರು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೆ ಸಶಸ್ತ್ರ ದಾಳಿಗಳನ್ನು ನಡೆಸಿದ್ದಾರೆ ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ : ಭಾರತದೊಂದಿಗೆ ಗಡಿ ಗಸ್ತು ವ್ಯವಸ್ಥೆ ಒಪ್ಪಂದ ದೃಢಪಡಿಸಿದ ಚೀನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.