ಹೈದರಾಬಾದ್: ಉಕ್ರೇನ್ಗೆ ತೆರಳುವ ಮುನ್ನ ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪೋಲೆಂಡ್ನಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಇದು ಯುದ್ಧದ ಕಾಲವಲ್ಲ. ಯಾವುದೇ ಸಂಘರ್ಷವನ್ನು ಶಾಂತಿ ಮತ್ತು ಮಾತುಕತೆಯಿಂದ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿ, ಮೋದಿ ಎಂಬ ಘೋಷಣೆ ನಡುವೆ ಮಾತನಾಡಿದ ಅವರು, ಭಾರತವು ದಶಕದಿಂದ ಎಲ್ಲಾ ದೇಶಗಳೊಂದಿಗೆ ಅಂತರ ಕಾಯ್ದುಕೊಳ್ಳುವ ನೀತಿಯನ್ನು ಹೊಂದಿತ್ತು. ಆದಾಗ್ಯೂ ಇಂದು ಭಾರತ ಎಲ್ಲಾ ದೇಶಗಳೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದೆ ಎಂದರು.
ಭಾರತದ ಮಂತ್ರ ಶಾಂತಿ: ಭಾರತವು ಬುದ್ಧನ ನಾಡು. ಈ ಹಿನ್ನೆಲೆ ಈ ಪ್ರದೇಶದಲ್ಲಿ ಶಾಂತಿಯನ್ನು ಶಾಶ್ವತವಾಗಿ ಹೊಂದಲು ಸಲಹೆ ನೀಡುತ್ತದೆ. ಇದು ಯುದ್ಧದ ಕಾಲವಲ್ಲ ಎಂಬ ವಿಷಯದಲ್ಲಿ ಭಾರತ ಸ್ಪಷ್ಟವಾಗಿದೆ. ಭಾರತವು ಸಂಘರ್ಷ ನಿವಾರಣೆಯಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕದ ಬಗ್ಗೆ ನಂಬಿಕೆ ಹೊಂದಿದೆ ಎಂದರು.
1991ರಲ್ಲಿ ಉಕ್ರೇನ್ ಸ್ವಾತಂತ್ರ್ಯ ದೇಶವಾದ ಬಳಿಕ ಕೀವ್ಗೆ ಭೇಟಿ ನೀಡುತ್ತಿರುವ ಭಾರತದ ಪ್ರಧಾನಿ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಆಮಂತ್ರಣದ ಹಿನ್ನಲೆ ಅವರು ಭೇಟಿ ನೀಡುತ್ತಿದ್ದು, ಅಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಶಾಂತಿಯುತ ನಿರ್ಣಯದ ದೂರದೃಷ್ಟಿಯನ್ನು ಅವರು ಹಂಚಿಕೊಳ್ಳಲಿದ್ದಾರೆ.
ಕಳೆದ ಆರು ವಾರಗಳ ಹಿಂದೆ ರಷ್ಯಾಗೆ ಭೇಟಿ ನೀಡಿದ್ದ ಪ್ರಧಾನಿ ನಡೆ ಕುರಿತು ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ಮೈತ್ರಿಗಳು ಟೀಕಿಸಿದ್ದವು. ಇದೀಗ ಪ್ರಧಾನಿ ಕೀವ್ಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ.
ಮಾನವೀಯತೆಗೆ ಆದ್ಯತೆ: ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ಭಾರತ ಎಲ್ಲರೊಂದಿಗೆ ಸಂಪರ್ಕವನ್ನು ಬಯಸುತ್ತಿದೆ.ಭಾರತ ಎಲ್ಲಾ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ. ಭಾರತ ಎಲ್ಲರ ಜೊತೆ ಇದ್ದು, ಎಲ್ಲರ ಹಿತಾಸಕ್ತಿ ಬಗ್ಗೆ ಚಿಂತಿಸುತ್ತದೆ. ಯಾವುದಾದರೂ ದೇಶ ಬಿಕ್ಕಟ್ಟು ಎದುರಿಸುತ್ತಿದ್ದರೆ, ಭಾರತ ಮೊದಲು ಸಹಾಯ ಹಸ್ತ ಚಾಚುತ್ತದೆ. ಕೋವಿಡ್ ಸಮಯದಲ್ಲಿ ಜಗತ್ತಿನ 150ಕ್ಕೂ ಹೆಚ್ಚು ದೇಶಗಳಿಗೆ ನಾವು ಔಷಧ ಮತ್ತು ಲಸಿಕೆಯನ್ನು ಕಳುಹಿಸಿದೆವು. ಭೂಕಂಪ ಅಥವಾ ಯಾವುದೇ ರೀತಿಯ ವಿಪತ್ತು ಸಂಭವಿಸಿದಾಗ ಭಾರತದ ಮೊದಲ ಮಂತ್ರ ಮಾನವೀಯತೆಯಿಂದ ನೆರವು ನೀಡುವುದು ಎಂದರು.
ಗುಣಮಟ್ಟದ ಉತ್ಪಾದನೆ ಮತ್ತು ಮಾನವಶಕ್ತಿ ಬಗ್ಗೆ ಭಾರತ ಸಂಪೂರ್ಣ ಗಮನವನ್ನು ಇರಿಸಿದೆ. ಇದು ಜಾಗತಿಕ ಪೂರೈಕೆ ಸರಪಳಿಯಲ್ಲಿ ನಿರ್ಣಾಯಕವಾಗಿದೆ. 2024ರ ಬಜೆಟ್ನಲ್ಲಿ ನಾವು ಯುವ ಜನತೆಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದೇವೆ. ಭಾರತವನ್ನು ಶಿಕ್ಷಣ, ಸಂಶೋಧನೆ ಮತ್ತು ಅವಿಷ್ಕಾರದ ಕೇಂದ್ರವಾಗಿ ಮಾಡುವ ಗುರಿ ಹೊಂದಿರುವುದಾಗಿ ಮೋದಿ ವಿವರಿಸಿದರು.
ಗುಜರಾತ್ಗೆ ನೀಡಿದ್ದ ಸಹಾಯ ನೆನೆದ ಮೋದಿ: ಪೋಲೆಂಡ್ ಜೊತೆಗಿನ ಹಳೆಯ ನೆನಪನ್ನು ಮೆಲುಕು ಹಾಕಿದ ಮೋದಿ, ಎರಡು ದಶಕಗಳ ಹಿಂದೆ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ ನೆರವು ನೀಡಿದ ರಾಷ್ಟ್ರಗಳಲ್ಲಿ ಪೋಲೆಂಡ್ ಕೂಡ ಒಂದು ಎಂದು ಸ್ಮರಿಸಿದರು.
ಪೋಲೆಂಡ್ ಜನತೆ ಜಾಮ್ ಸಾಹೇಬ್ ಮತ್ತು ಅವರ ಕುಟುಂಬ ಸದಸ್ಯರಿಗೆ ಗೌರವ ಮತ್ತು ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ಇದಕ್ಕೆ ಮಹಾರಾಜ ಚೌಕವು ಸಾಕ್ಷಿಯಾಗಿದೆ. ಇಂದು ನಾನು ದೋಬ್ರಿ ಮಹಾರಾಜ ಸ್ಮಾರಕ ಮತ್ತು ಕೊಲ್ಹಾಪುರ ಸ್ಮಾರಕಕ್ಕೆ ಭೇಟಿ ನೀಡಿದೆ. ಈ ವೇಳೆ ಜಾಮ್ ಸಾಹೇಬ್ ಸ್ಮರಣೆಯ ಯುವ ಕ್ರಮ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಯುವಜನತೆಗೆ ಆಮಂತ್ರಣ ನೀಡುತ್ತದೆ ಎಂದರು.
ಭಾರತೀಯ ಸೈನಿಕರ ಶೌರ್ಯಕ್ಕೆ ಮೆಚ್ಚುಗೆ: ಇದೇ ವೇಳೆ ಪ್ರಧಾನಿ ಮಾಂಟೆ ಕ್ಯಾಸಿನೊ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಅವರು, ಭಾರತ ಸೈನಿಕರು ಜಗತ್ತಿನ ಮೂಲೆ ಮೂಲೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿರುವುದಕ್ಕೆ ಸಾಕ್ಷಿ ಇದು ಎಂದು ತಿಳಸಿದರು.
21ನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದರ ಮೌಲ್ಯ ಮತ್ತು ಪರಂಪರೆ ಬಗ್ಗೆ ಗೌರವವನ್ನು ಹೊಂದಿದೆ. ನಾವು ಭಾರತೀಯರು ನಮ್ಮ ಪ್ರಯತ್ನಗಳು, ಕಾರ್ಯಗಳು ಮತ್ತು ಸಹಾನುಭೂತಿಗೆ ಹೆಸರುವಾಸಿಯಾಗಿದ್ದೇವೆ. ನಾವು ಎಲ್ಲಿಗೆ ಹೋದರೂ, ನಾವು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತೇವೆ. ಉದ್ಯಮಶೀಲತೆ, ಸೇವಾ ಕ್ಷೇತ್ರದಲ್ಲಿನ ಆರೈಕೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತೀಯರು ತಮ್ಮ ಪ್ರಯತ್ನಗಳ ಮೂಲಕ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ ಎಂದು ವಿವರಿಸಿದರು.
ಭಾರತ ಮತ್ತು ಪೋಲೆಂಡ್ ನಡುವೆ ಸಾಕಷ್ಟು ಹೋಲಿಕೆಗಳಿವೆ. ಇದರಲ್ಲಿ ಪ್ರಜಾಪ್ರಭುತ್ವವೂ ಒಂದು. ಭಾರತ ಪ್ರಜಾಪ್ರಭುತ್ವದ ತಾಯಿ ಮಾತ್ರವಲ್ಲ. ಭಾಗವಹಿಸುವಿಕೆ ಮತ್ತು ರೋಮಾಂಚಕರಿ ಪ್ರಜಾಪ್ರಭುತ್ವ ಹೊಂದಿದೆ. ಭಾರತದ ಜನರು ಪ್ರಜಾಪ್ರಭುತ್ವದ ಮೇಲೆ ಸಾಕಷ್ಟು ನಂಬಿಕೆ ಹೊಂದಿದ್ದು, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಅದಕ್ಕೆ ಸಾಕ್ಷಿ ಎಂದರು.
ಪೋಲೆಂಡ್ಗೆ ಧನ್ಯವಾದ: ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸಿದ್ದೇವೆ ಮತ್ತು ಇದು ಇಂದಿನ ಭಾರತದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಗೋಚರಿಸುತ್ತದೆ. ಭಾರತ ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ಸಮತೋಲನೆಗೆ ಆದ್ಯತೆ ನೀಡುತ್ತಿದೆ. ಭಾರತವೂ ಅಭಿವೃದ್ಧಿ ದೇಶದ ನಿರ್ಣಯ ನಡೆಸಿದೆ ಎಂದ ಅವರು, ಭಾರತ ಶೀಘ್ರದಲ್ಲಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದಾಗಿ ತಿಳಿಸಿದರು.
ಪೋಲೆಂಡ್ ಸ್ವಾಗತಕ್ಕೆ ಧನ್ಯವಾದ ತಿಳಿಸಿದರ ಅವರು, ಆಪರೇಷನ್ ಗಂಗಾ ವೇಳೆ ಭಾರತಕ್ಕೆ ಬೆಂಬಲ, ವಿಶೇಷವಾಗಿ ಭಾರತೀಯರಿಗೆ ವೀಸಾ ಮುಕ್ತ ಅವಕಾಶ ನೀಡಿರುವುದಕ್ಕೆ ಧನ್ಯವಾದ ತಿಳಿಸಿದರು.
ಇದನ್ನೂ ಓದಿ: ಪೋಲೆಂಡ್- ಉಕ್ರೇನ್ ಪ್ರವಾಸದಲ್ಲಿ ಪ್ರಧಾನಿ ಮೋದಿ; ಪ್ರವಾಸದ ಹಿಂದಿನ ಅಜೆಂಡಾವಿದು