ಟಲ್ಸಾ (ಓಕ್ಲಾ- ಅಮೆರಿಕ) : ಮನೆ ಒಳಗೆ ನಾಯಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಜಗಿದಿದ್ದರಿಂದ ಬ್ಯಾಟರಿ ಸ್ಫೋಟಗೊಂಡು ಮನೆಗೆ ಬೆಂಕಿ ಹತ್ತಿರುವ ಘಟನೆ ಅಮೆರಿಕದ ಓಕ್ಲಾದಲ್ಲಿ ಮೇ ತಿಂಗಳಲ್ಲಿ ನಡೆದಿದೆ. ವಿಡಿಯೋವನ್ನು ಟಲ್ಸಾ ಅಗ್ನಿಶಾಮಕ ದಳ 7 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಕುಟುಂಬದ ಸುರಕ್ಷತೆಗಾಗಿ ವಿಡಿಯೋವನ್ನು ಎಲ್ಲರೂ ನೋಡುವಂತೆ ವಿನಂತಿಸಿದೆ.
Must watch this video to make sure that your family is safe!
— Tulsa Fire Dept. (@TulsaFire) July 31, 2024
fire departments across the country are seeing lithium ion battery fires. it’s very important to make sure you use, store, charge and dispose of lithium ion batteries, properly.
https://t.co/AqTDZeIwqS
"ನಿಮ್ಮ ಮನೆಯಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳಿದ್ದರೆ, ಅವುಗಳ ಬಳಕೆ, ಚಾರ್ಜಿಂಗ್ಗಳ ಬಗ್ಗೆ ಖಚಿತಪಡಿಸಿಕೊಳ್ಳಿ. ದೇಶದಾದ್ಯಂತ ಲಿಥಿಯಂ ಐಯಾನ್ ಬ್ಯಾಟರಿಗಳಿಂದಾಗುತ್ತಿರುವ ಬೆಂಕಿ ಘಟನೆಗಳನ್ನು ನೋಡುತ್ತಿದ್ದೇವೆ" ಎಂದು ಟಲ್ಸಾ ಅಗ್ನಿಶಾಮಕ ದಳ ಹೇಳಿದೆ.
ನಾಯಿ ಮಾಡಿದ್ದಾದರೂ ಏನು?: 1 ನಾಯಿ 1 ಬೆಕ್ಕು ಮನೆಯ ಲಿವಿಂಗ್ ರೂಮ್ನಲ್ಲಿ ಕುಳಿತುಕೊಂಡಿದ್ದರೆ, ಮತ್ತೊಂದು ನಾಯಿ ತನ್ನ ಬಾಯಿಯಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಚಾರ್ಜರ್ ಸಮೇತ ತೆಗೆದುಕೊಂಡು ಬಂದು ನೆಲದ ಮೇಲೆ ಹಾಸಿದ್ದ ಸಣ್ಣ ಬೆಡ್ ಮೇಲೆ ಹಾಕಿ ಕಚ್ಚಲು ಶುರು ಮಾಡುತ್ತದೆ. ಸ್ವಲ್ಪ ಹೊತ್ತು ಬ್ಯಾಟರಿಯನ್ನು ನಾಯಿ ಜಗಿಯತ್ತಾ ಇರಬೇಕಾದರೆ ಮೊದಲು ಅದರಲ್ಲಿ ಸಣ್ಣ ರೀತಿಯ ಸ್ಪಾರ್ಕ್ ಬರುತ್ತದೆ. ತಕ್ಷಣ ಆ ಬ್ಯಾಟರಿಯನ್ನು ಬಾಯಿಯಿಂದ ಬಿಟ್ಟ ನಾಯಿ ಹಿಂದಕ್ಕೆ ಸರಿಯುತ್ತದೆ.
ಸಣ್ಣ ಸ್ಪಾರ್ಕ್ ಮತ್ತೆ ಸ್ಪೋಟಗೊಂಡು ಹಾಸಿದ್ದ ಬೆಡ್ ಮೇಲೆ ಬೆಂಕಿ ಹತ್ತುತ್ತದೆ. ತಕ್ಷಣ ಅಲ್ಲಿ ಕುಳಿತಿದ್ದ ಬೆಕ್ಕು ಓಡಿ ಹೋಗುತ್ತದೆ. ಆದರೆ 2 ನಾಯಿಗಳಿಗೆ ಮಾತ್ರ ಏನಾಗುತ್ತಿದೆ ಎಂಬುದೇ ತಿಳಿಯದೇ ಅದನ್ನೇ ನೋಡಿ ಬೊಗಳಲು ಶುರು ಮಾಡಿದೆ. ಸಣ್ಣ ಪುಟ್ಟ ಗಾಯಗಳಿಂದ ಭಯಭೀತರಾದ 2 ನಾಯಿಗಳು, ಬೆಕ್ಕು ಅವುಗಳಿಗೆಂದೇ ಇದ್ದ ಪೆಟ್ ಬಾಗಿಲಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಈ ಘಟನೆ ಮನೆ ಒಳಗೆ ಇದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಗ್ನಿಶಾಮಕ ಇಲಾಖೆಯ ವಕ್ತಾರ ಆಂಡಿ ಲಿಟಲ್, 'ನಾಯಿಯು ಅಗೆದಿರುವ ಬ್ಯಾಟರಿಯು ಮೊಬೈಲ್ಗಳನ್ನು ಚಾರ್ಜ್ ಮಾಡಲು ಬಳಸಲಾಗುತ್ತಿತ್ತು' ಎಂದು ತಾವು ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಾರಿಗೆ ಟಯರ್ ಜೋಡಣೆ ವೇಳೆ ಬ್ಲಾಸ್ಟ್: ರಿಂಗ್ ಜೊತೆ ತೂರಿಬಿದ್ದ ಕಾರ್ಮಿಕನಿಗೆ ಗಂಭೀರ ಗಾಯ - Tire blast