ETV Bharat / international

ಪ್ರವಾಹ ಹಾನಿ ತಡೆಗೆ ವಿಫಲರಾದ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ - KIM ORDERS EXECUTION - KIM ORDERS EXECUTION

ಪ್ರವಾಹ ಹಾನಿ ತಡೆಯುವಲ್ಲಿ ವಿಫಲರಾದ ಸುಮಾರು 30 ಅಧಿಕಾರಿಗಳಿಗೆ ಉತ್ತರ ಕೊರಿಯಾದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ (IANS)
author img

By ETV Bharat Karnataka Team

Published : Sep 4, 2024, 4:30 PM IST

ಪ್ಯೊಂಗ್ಯಾಂಗ್( ಉತ್ತರ ಕೊರಿಯಾ): ಪ್ರವಾಹ ಮತ್ತು ಭೂಕುಸಿತದ ಘಟನೆಗಳನ್ನು ತಡೆಗಟ್ಟುವಲ್ಲಿ ವಿಫಲರಾದ ಆರೋಪದ ಮೇಲೆ 30 ಅಧಿಕಾರಿಗಳನ್ನು ಗಲ್ಲಿಗೇರಿಸುವಂತೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ - ಉನ್ ಆದೇಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪದ ಮೇಲೆ ಸುಮಾರು 20 ರಿಂದ 30 ನಾಯಕರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಉತ್ತರ ಕೊರಿಯಾದ ಅಧಿಕಾರಿಯನ್ನು ಉಲ್ಲೇಖಿಸಿ ಟಿವಿ ಚೋಸುನ್ ವರದಿ ಮಾಡಿದೆ.

ಈ ಹಿಂದೆ ಕಳೆದ ತಿಂಗಳ ಕೊನೆಯಲ್ಲಿ, ಪ್ರವಾಹ ಪೀಡಿತ ಪ್ರದೇಶದಲ್ಲಿ ಇದೇ ರೀತಿಯಾಗಿ ಸುಮಾರು 20 ರಿಂದ 30 ಕಾರ್ಯಕರ್ತರನ್ನು ಗಲ್ಲಿಗೇರಿಸಲಾಯಿತು ಎಂದು ಅಧಿಕಾರಿ ಟಿವಿ ಮಾಧ್ಯಮಕ್ಕೆ ಹೇಳಿದ್ದಾರೆ. ಈ ಹಿಂದೆ, ಪ್ರವಾಹ ಮತ್ತು ಭೂಕುಸಿತಗಳಿಂದ ಹೆಚ್ಚಿನ ಜನ ಸಾವಿಗೀಡಾಗಿ, ಸುಮಾರು 15,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ ನಂತರ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಕಿಮ್ ಆದೇಶಿಸಿದ್ದರು ಎಂದು ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಉತ್ತರ ಕೊರಿಯಾದಲ್ಲಿ ಸಾರ್ವಜನಿಕ ಮರಣದಂಡನೆ ಶಿಕ್ಷೆಗಳು ಹೆಚ್ಚಾಗಿದೆ. ಕೊರೊನಾಗಿಂತ ಮೊದಲು, ವರ್ಷಕ್ಕೆ 10 ಸಾರ್ವಜನಿಕ ಮರಣದಂಡನೆಗಳನ್ನು ನೀಡಲಾಗುತ್ತಿತ್ತು. ಇದು ಸದ್ಯ ವಾರ್ಷಿಕ 100 ಮರಣದಂಡನೆಗಳಿಗೆ ಏರಿಕೆಯಾಗಿದೆ ಎಂದು ಕೊರಿಯಾ ಟೈಮ್ಸ್ ತಿಳಿಸಿದೆ.

ಉತ್ತರ ಫಿಯೊಂಗನ್ ಪ್ರಾಂತ್ಯದ ಉತ್ತರ ಗಡಿ ನಗರ ಸಿನುಯಿಜು ಮತ್ತು ಉಜು ಕೌಂಟಿಯಲ್ಲಿ ಭಾರಿ ಮಳೆಯಾಗಿದ್ದು, 4,100 ಮನೆಗಳು, 7,410 ಎಕರೆ ಕೃಷಿ ಭೂಮಿ ಮತ್ತು ಅನೇಕ ಸಾರ್ವಜನಿಕ ಕಟ್ಟಡಗಳು, ರಸ್ತೆಗಳು ಮತ್ತು ರೈಲುಗಳು ಪ್ರವಾಹಕ್ಕೆ ಸಿಲುಕಿವೆ ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ವರದಿ ಮಾಡಿದೆ.

ಸತ್ತವರು ಅಥವಾ ಕಾಣೆಯಾದವರ ಸಂಖ್ಯೆ ಸುಮಾರು 1,000 ಮೀರಬಹುದು. ಇತ್ತೀಚೆಗೆ, ಕಿಮ್ ಉಜು ಕೌಂಟಿಗೆ ಭೇಟಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು ಎಂದು ಕೆಸಿಎನ್ಎ ತಿಳಿಸಿದೆ.

ಉತ್ತರ ಕೊರಿಯಾಕ್ಕೆ ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾಗಳು ಸಹಾಯ ಮಾಡಲು ಮುಂದೆ ಬಂದರೂ ಕಿಮ್ ಅದನ್ನು ನಿರಾಕರಿಸಿದ್ದಾರೆ. ಮಳೆಯಿಂದ ಹಾನಿಯಾದ ಸಮಯದಲ್ಲಿ ನೆರವು ನೀಡಲು ಮುಂದೆ ಬಂದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಕಿಮ್, ಅಗತ್ಯವಿದ್ದಾಗ ಸಹಾಯ ಕೋರುವುದಾಗಿ ಹೇಳಿದರು. ಆದರೆ, ಉತ್ತರ ಕೊರಿಯಾದಲ್ಲಿ ಪ್ರವಾಹದಿಂದ ತೀವ್ರ ಹಾನಿಯಾಗಿದೆ ಎಂಬುದೆಲ್ಲ ಸುಳ್ಳು ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ಹೇಳಿವೆ.

ಇದನ್ನೂ ಓದಿ : ಫಿಲಡೆಲ್ಫಿ ಕಾರಿಡಾರ್​ ಎಲ್ಲಿದೆ?: ಇಸ್ರೇಲ್​ಗೆ ಇದು ಯಾಕಿಷ್ಟು ಮಹತ್ವದ್ದು? - Philadelphi Corridor

ETV Bharat Logo

Copyright © 2024 Ushodaya Enterprises Pvt. Ltd., All Rights Reserved.