ETV Bharat / health

ಜಾಗಿಂಗ್​​, ಯೋಗದಿಂದ ಖಿನ್ನತೆ ಅಪಾಯ ಕಡಿಮೆ ಮಾಡಬಹುದು: ಅಧ್ಯಯನ - ಖಿನ್ನತೆಯ ಅಪಾಯವನ್ನು ಕಡಿಮೆ

ಖಿನ್ನತೆ ಹೊಂದಿರುವ ವ್ಯಕ್ತಿಗಳು ತೀವ್ರತರಹದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ಗೊತ್ತಾಗಿದೆ.

yoga and strength training seems to be the most effective exercises to ease depression

author img

By IANS

Published : Feb 16, 2024, 10:24 AM IST

ಲಂಡನ್​: ಜಗತ್ತಿನಾದ್ಯಂತ 300 ಮಿಲಿಯನ್​ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಖಿನ್ನತೆ ಸಮಸ್ಯೆಯಿಂದ ಬಳಲುತ್ತಿರುವರು ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ನಡಿಗೆ ಅಥವಾ ಜಾಗಿಂಗ್​, ಯೋಗ ಮತ್ತು ಶಕ್ತಿ ತರಬೇತಿಗಳನ್ನು ಪಡೆಯುವುದರಿಂದ ಹೆಚ್ಚಿನ ಪ್ರಯೋಜನಗಳಿವೆ ಎಂದು ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿದೆ. ಯೋಗ, ಜಾಗಿಂಗ್​ ಅಥವಾ ಸೈಕೋಥೆರಪಿ ಮತ್ತು ಔಷಧಗಳ ಮೂಲಕ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಖಿನ್ನತೆ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಚಿಕಿತ್ಸೆಯ ಮಾರ್ಗಸೂಚಿಗಳು ಮತ್ತು ಹಿಂದಿನ ಪುರಾವೆಗಳ ವಿಮರ್ಶೆಗಳು ಖಿನ್ನತೆ ನಿರ್ವಹಣೆಗೆ ವ್ಯಾಯಾಮ ಉತ್ತಮ ಎಂಬುದನ್ನು ಹೇಗೆ ಶಿಫಾರಸು ಮಾಡಬೇಕು ಎಂದು ಒಪ್ಪುವುದಿಲ್ಲ.

ಈ ಅಧ್ಯಯನಕ್ಕಾಗಿ 218 ಪ್ರಯೋಗಗಳನ್ನು ನಡೆಸಿದ್ದು, ಖಿನ್ನತೆ ಹೊಂದಿರುವ 14,170 ಮಂದಿ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಈ ಅಧ್ಯಯನವನ್ನು ಬಿಎಂಜೆಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನವೂ ಚಟುವಟಿಕೆಗಳ ಮೂಲಕ ಹೆಚ್ಚು ಸಕ್ರಿಯವಾಗಿರುವುದರಿಂದ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ಸೂಚಿಸಿದೆ.

ಸ್ಪೇನ್​, ಡೆನ್ಮಾರ್ಕ್​, ಆಸ್ಟ್ರೇಲಿಯಾ ಮತ್ತು ಫಿನ್​ಲ್ಯಾಂಡ್​ನಲ್ಲಿ ಖಿನ್ನತೆ ಚಿಕಿತ್ಸೆಗೆ ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮವನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ನಿಯಂತ್ರಿತ ಗುಂಪಿಗೆ ಹೋಲಿಸಿದಾಗ ನೃತ್ಯ, ವಾಕಿಂಗ್​​, ಯೋಗ, ಏರೋಬಿಕ್​ನಂತಹ ಚಟುವಟಿಕೆಗಳನ್ನು ಹೊಂದಿರುವ ಖಿನ್ನತೆಯ ಗುಂಪಿನಲ್ಲಿ ಸುಧಾರಣೆ ಕಂಡು ಬಂದಿದೆ. ಫಿಸಿಯೋಥೆರಪಿ ಜೊತೆಗೆ ವ್ಯಾಯಾಮವನ್ನು ಏರೋಬಿಕ್​ ಮತ್ತು ಎಸ್​ಎಸ್​ಆರ್​ಐನೊಂದಿಗೆ ಸಂಯೋಜಿಸಿದಾಗ ವ್ಯಾಯಾಮವು ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ.

ವಾಕಿಂಗ್​ ಅಥವಾ ಜಾಗಿಂಗ್​​ ಪುರುಷ ಮತ್ತು ಮಹಿಳೆಯರಲ್ಲಿ ಪರಿಣಾಮಕಾರಿಯಾಗಿದ್ದು, ಮಹಿಳೆಯರಲ್ಲಿ ಶಕ್ತಿ ತರಬೇತಿ ಪರಿಣಾಮಕಾರಿಯಾಗಿದ್ದು, ಯೋಗವೂ ಪುರುಷರಲ್ಲಿ ಪರಿಣಾಮಕಾರಿಯಾಗಿದೆ. ವಯಸ್ಸಾದವರಲ್ಲಿ ಯೋಗವೂ ಪರಿಣಾಮಕಾರಿಯಾಗಿದ್ದು, ಯುವ ಜನತೆಯಲ್ಲಿ ಶಕ್ತಿ ತರಬೇತಿ ಪರಿಣಾಮಕಾರಿಯಾಗಿದೆ.

ವಾಕಿಂಗ್​ ಮತ್ತು ಯೋಗದಂತಹ ಹಗುರ ದೈಹಿಕ ಚಟುವಟಿಕೆಗಳು ಪ್ರಯೋಗಿಕವಾಗಿ ಪರಿಣಾಮಕಾರಿಯಾಗಿದ್ದು, ತೀವ್ರತರಹದ ರನ್ನಿಂಗ್​ ಮತ್ತು ಮಧ್ಯಂತರ ತರಬೇತಿಗಳು ಹೆಚ್ಚಿನ ಪ್ರಯೋಜನ ನೀಡುತ್ತದೆ. ಆರೋಗ್ಯ ಪರಿಸ್ಥಿತಿಗಳು ಮತ್ತು ಖಿನ್ನತೆಯ ವಿವಿಧ ಹಂತಗಳಿರುವ ಜನರಿಗೆ ವ್ಯಾಯಾಮವು ಸಮಾನವಾಗಿ ಪರಿಣಾಮಕಾರಿ ಆಗಿದೆ.

ನಮ್ಮ ಸಂಶೋಧನೆಗಳು ಖಿನ್ನತೆಗೆ ಪ್ರಾಯೋಗಿಕ ಅಭ್ಯಾಸ ಮಾರ್ಗಸೂಚಿಗಳ ಭಾಗವಾಗಿ ವ್ಯಾಯಾಮವನ್ನು ಸೇರಿಸುವುದನ್ನು ನಮ್ಮ ಅಧ್ಯಯನವೂ ಬೆಂಬಲಿಸುತ್ತದೆ ಎಂದು ಲೇಖಕರು ತಿಳಿಸಿದ್ದಾರೆ. ಆರೋಗ್ಯ ವ್ಯವಸ್ಥೆಗಳು ಪರ್ಯಾಯ ಚಿಕಿತ್ಸೆ ಅಥವಾ ಇತರ ಸ್ಥಾಪಿತ ಮಧ್ಯಸ್ಥಿಕೆಗಳಿಗೆ ಸಹಾಯಕವಾಗಿ ಒದಗಿಸಲು ಬಯಸಬಹುದು. ಇವು ಖಿನ್ನತೆಗೆ ಸಂಬಂಧಿಸಿದ ದೈಹಿಕ ಆರೋಗ್ಯದ ಅಪಾಯಗಳನ್ನು ತಗ್ಗಿಸುತ್ತವೆ.

ಇದನ್ನೂ ಓದಿ: ಮೈಗ್ರೇನ್, ಬೆವರುವಿಕೆ: ಯುವತಿಯರಲ್ಲಿ ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚಿಸಬಹುದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.