ETV Bharat / health

ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ವಿಭಿನ್ನ; ಅಧ್ಯಯನ - ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು

ಹೃದಯಾಘಾತವೂ ಇಂದು ಹೆಚ್ಚಿನ ಜನರನ್ನು ಬಾಧಿಸುತ್ತಿರುವ ವಿಷಯವಾಗಿದ್ದು, ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ.

women experience diffrent heart attack symptoms

author img

By IANS

Published : Feb 12, 2024, 10:32 AM IST

ಹೈದರಾಬಾದ್​: ಬೆವರುವುದು, ವಾಕರಿಕೆ, ತಲೆಸುತ್ತು ಮತ್ತು ಅತಿಯಾದ ಆಯಾಸವು ಹೃದಯಾಘಾತದ ಸಾಮಾನ್ಯ ಲಕ್ಷಣಗಳಾಗಿ ತೋರುವುದಿಲ್ಲ. ಆದರೆ, ಇದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಅವರು ನಿದ್ರೆ ಅಥವಾ ವಿಶ್ರಾಂತಿ ಮಾಡುವಾಗ ಈ ಲಕ್ಷಣಗಳು ಕಂಡು ಬರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಪುರುಷರಲ್ಲಿ ಕಂಡು ಬರುವಂತೆ ನೋವು, ಒತ್ತಡ ಅಥವಾ ಅಸ್ವಸ್ಥತೆಗಳು ಮಹಿಳೆಯರಲ್ಲಿ ತೀವ್ರವಾಗಿರುವುದಿಲ್ಲ ಅಥವಾ ಪುರುಷರಂತೆ ಮಹಿಳೆಯರಲ್ಲಿ ಪ್ರಮುಖವಾದ ಹೃದಯಾಘಾತದ ಲಕ್ಷಣಗಳು ಕಂಡು ಬರುವುದಿಲ್ಲ. ಇದೇ ಕಾರಣಕ್ಕೆ ಮಹಿಳೆಯರು ಹೃದಯಾಘಾತ ಕುರಿತು ವಿಶಿಷ್ಟ ಲಕ್ಷಣಗಳನ್ನು ಅರ್ಥೈಸಿಕೊಂಡು ಹೃದಯದ ರೋಗದ ಅಪಾಯ ಕಡಿಮೆ ಮಾಡಿಕೊಳ್ಳಬೇಕು ಎಂದು ಮೇಯೊ ಕ್ಲಿನಿಕ್‌ನ ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಲಾಗುತ್ತದೆ. ಮಹಿಳೆಯರ ರೋಗಲಕ್ಷಣಗಳು ಸಾಮಾನ್ಯವಾಗಿ ಅಸ್ಪಷ್ಟವಾಗಿರುತ್ತವೆ - ಉಸಿರಾಟದ ತೊಂದರೆ, ವಾಕರಿಕೆ, ವಾಂತಿ, ಮತ್ತು ಬೆನ್ನು ಅಥವಾ ದವಡೆಯ ನೋವನ್ನು ಕೆಲವರು ಅನುಭವಿಸಿದರೆ, ಮತ್ತೆ ಕೆಲವು ಮಹಿಳೆಯರು ತಲೆ ಸುತ್ತು, ಎದೆಯ ಕೆಳಭಾಗ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಮತ್ತು ತೀವ್ರ ಆಯಾಸವನ್ನು ಅನುಭವಿಸುತ್ತಾರೆ.

ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಅಪಾಯಕಾರಿ ಅಂಶಗಳನ್ನು ಗುರುತಿಸುವುದು ಮುಖ್ಯವಾಗಿದೆ ಮತ್ತು ನಂತರ ಆ ಅಪಾಯವನ್ನು ಉಲ್ಬಣಗೊಳಿಸಬಹುದಾದ ನಡವಳಿಕೆಗಳನ್ನು ಶಮನ ಮಾಡಲು ಕೆಲಸ ಮಾಡಬಹುದಾಗಿದೆ ಎಂದು ಮಂಕಾಟೋದಲ್ಲಿನ ಮೇಯೊ ಕ್ಲಿನಿಕ್ ಹೆಲ್ತ್ ಸಿಸ್ಟಮ್‌ನ ಕುಟುಂಬ ಔಷಧ ವೈದ್ಯ ಚತುರ ಆಲೂರ್ ಹೇಳಿದರು.

ಹೆಚ್ಚಿನ ಕೊಲೆಸ್ಟ್ರಾಲ್, ಸ್ಥೂಲಕಾಯತೆ ಮತ್ತು ಅಧಿಕ ರಕ್ತದೊತ್ತಡಗಳು ಹೃದಯ ರೋಗದ ಅಪಾಯಕ್ಕೆ ಕಾರಣವಾಗುತ್ತದೆ. ಹೃದಯ ರೋಗವನ್ನು ತಡೆಯಲು ಮಹಿಳೆಯರು ಮಧುಮೇಹ, ಮಾನಸಿಕ ಒತ್ತಡ ಮತ್ತು ಖಿನ್ನತೆ, ಧೂಮಪಾನ ಮತ್ತು ಜಡ ಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸಬೇಕು. ಋತುಚಕ್ರ ಮತ್ತು ಹೃದಯದ ಸಿಂಡ್ರೋಮ್ ಮತ್ತು ಗರ್ಭಾವಸ್ಥೆಯ ತೊಡಕುಗಳು ಸೇರಿದಂತೆ ಕೆಲವು ಪರಿಸ್ಥಿತಿಗಳು ಸಹ ಮಹಿಳೆಯರಲ್ಲಿ ಹೃದಯದ ಅಪಾಯವನ್ನು ಹೆಚ್ಚಿಸುತ್ತದೆ.

ಎಲ್ಲ ವಯೋಮಾನದ ಮಹಿಳೆಯರು ಕೂಡ ಹೃದಯದ ರೋಗವನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಅನೇಕ ಮಹಿಳೆಯರು ಈ ಲಕ್ಷಣಗಳು ಗಂಭೀರವಾದ ಪರಿಣಾಮ ಬೀರುವವರೆಗೂ ನಿರ್ಲಕ್ಷ್ಯ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ದೇಹದ ಚಿಹ್ನೆಗಳನ್ನು ಅರ್ಥೈಸಿಕೊಳ್ಳುವುದು ಮುಖ್ಯವಾಗಿದೆ. ಈ ಲಕ್ಷಣಗಳು ತೀವ್ರವಾಗುವ ಮುನ್ನ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಮಾಡಬೇಕು.

ಅಮೆರಿಕನ್​ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಜನನ ನಿಯಂತ್ರಣ ಮಾತ್ರೆಗಳು ಮತ್ತು ಧೂಮಪಾನಗಳು ಕೂಡ ಯುವತಿಯರಲ್ಲಿ ಹೃದ್ರೋಗದ ಅಪಾಯವನ್ನು 20ರಷ್ಟು ಹೆಚ್ಚಿಸುತ್ತದೆ.

ಮಹಿಳೆಯರು ಈ ಹಿಂದಿನ ಯಾವುದೇ ಸೂಚನೆ ಇಲ್ಲದೇ ಹೃದಯಾಘಾತವನ್ನು ಅನುಭವಿಸಬಹುದು. ಶೇ 64ರಷ್ಟು ಮಹಿಳೆಯರು ಈ ಹಿಂದೆ ಇಂತಹ ಯಾವುದೇ ಲಕ್ಷಣಗಳಿಲ್ಲದಿದ್ದರೂ ಸೂಚನೆ ಇಲ್ಲದೇ ದಿಢೀರ್​ ಹೃದಯಾಘಾತದಿಂದ ಸಾವನ್ನಪ್ಪಬಹುದು. ಕುಟುಂಬದ ಇತಿಹಾಸ ಮತ್ತು ಮಹಿಳೆಯರ ವಯಸ್ಸು ಕೂಡ ಕೆಲವೊಮ್ಮೆ ಪ್ರಮುಖ ಪಾತ್ರವಹಿಸುತ್ತದೆ. ಅತಿಯಾದ ತಿನ್ನುವಿಕೆ ಮತ್ತು ಜಢ ಜೀವನಶೈಲಿ ಮಹಿಳೆಯರಲ್ಲಿ ಅಪಧಮನಿ ಬ್ಲಾಕ್​​ ಆಗಲು ಕಾರಣವಾಗುತ್ತದೆ.

ಈ ಹಿನ್ನೆಲೆ 20ರ ಬಳಿಕ ಕುಟುಂಬದಲ್ಲಿ ಹೃದಯ ರೋಗದ ಇತಿಹಾಸ ಹೊಂದಿರುವ ಮಹಿಳೆಯರು ಕೊಲೆಸ್ಟ್ರಾಲ್​ ಪರೀಕ್ಷೆಗೆ ಒಳಗಾಗುವಂತೆ ಎಎಚ್​ಎ ಶಿಫಾರಸು ಮಾಡುತ್ತದೆ. ಇದರ ಜೊತೆಗೆ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷೆ ನಡೆಸುವುದು ಅವಶ್ಯವಾಗಿದೆ ಎಂದು ಅದು ಸಲಹೆ ಕೂಡಾ ನೀಡಿದೆ.

ಇದನ್ನೂ ಓದಿ: ಲಕ್ಷಾಂತರ ಮಕ್ಕಳ ಜೀವ ಉಳಿಸುವ ಓಆರ್​ಎಸ್​​​ ಶಿಫಾರಸು ಮಾಡುವಲ್ಲಿ ಹಿಂದೇಟು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.