ನವದೆಹಲಿ: ಜಾಗತಿಕವಾಗಿ ಮೆದುಳು ಸಂಬಂಧಿತ ಸಮಸ್ಯೆಗಳ ಚಿಕಿತ್ಸೆ, ಸಮಸ್ಯೆಗಳ ತಡೆ ಮತ್ತು ಶಮನ ಮಾಡುವ ನಿಟ್ಟಿನಲ್ಲಿ ವರ್ಲ್ಡ್ ಫೆಡರೇಷನ್ ಆಫ್ ನ್ಯೂರೋಲಾಜಿ ಪ್ರತಿ ವರ್ಷ ಜುಲೈ 22ರಂದು ವಿಶ್ವ ಮೆದುಳು ದಿನವನ್ನು ಆಚರಿಸುತ್ತದೆ. ಈ ದಿನದ ಮುಖ್ಯ ಉದ್ದೇಶದ ಮೆದುಳು ಸಂಬಂಧಿತ ಅಸ್ವಸ್ಥತೆ ಕುರಿತ ಅಂತರ ಹೋಗಲಾಡಿಸಿ, ಈ ಕುರಿತು ಜಾಗೃತಿ ಮೂಡಿಸುವುದಾಗಿದೆ.
ಇತಿಹಾಸ ಮತ್ತು ಮಹತ್ವ: ಮೆದುಳು ಆರೋಗ್ಯ ಮತ್ತು ಮೆದುಳು ನರ ಸಂಬಂಧಿತ ಜಾಗೃತಿ ಮೂಡಿಸುವ ಉದ್ದೇಶದಿಂದ ವರ್ಲ್ಡ್ ಫೆಡರೇಷನ್ ಆಫ್ ನ್ಯೂರಾಲಾಜಿ (ಡಬ್ಲ್ಯೂಎಫ್ಎನ್) 1957 ಜುಲೈ 22ರಂದು ಈ ದಿನವನ್ನು ಆಚರಿಸಲು ಮೊದಲ ಬಾರಿಗೆ ಪ್ರಸ್ತಾಪಿಸಿತು. 2013ರಲ್ಲಿ ವರ್ಲ್ಡ್ ಕಾಂಗ್ರೆಸ್ ಆಫ್ ನ್ಯೂರಾಲಾಜಿ (ಡಬ್ಲ್ಯೂಸಿಎನ್) ಡಬ್ಲ್ಯೂಎಫ್ಎನ್ ಅಡಿ ವಿಶ್ವ ಮೆದುಳು ದಿನದ ಆಲೋಚನೆಯನ್ನು ಹುಟ್ಟುಹಾಕಿತು. ವರ್ಲ್ಡ್ ಕಾಂಗ್ರೆಸ್ ಆಫ್ ನ್ಯೂರಾಲಾಜಿ ಮಂಡಳಿಯ ಬೆಂಬಲದೊಂದಿಗೆ ಫೆಬ್ರವರಿ 2014ರಲ್ಲಿ ಈ ದಿನಾಚರಣೆಗೆ ಒಪ್ಪಿಗೆ ಸಿಕ್ಕಿತು. ಅಂದಿನಿಂದ ಜುಲೈ 22ನ್ನು ಪ್ರತಿ ವರ್ಷ ವಿಶ್ವ ಮೆದುಳು ದಿನವಾಗಿ ಆಚರಿಸಲಾಗುತ್ತಿದೆ.
ಈ ದಿನದಂದು ಮೆದುಳಿನ ಆರೋಗ್ಯದ ಮೌಲ್ಯದ ಕುರಿತು ಜಾಗೃತಿ ಮೂಡಿಸಲಾಗುವುದು. ಎಲ್ಲಾ ವಯೋಮಾನದ ಜನರಿಗೂ ಈ ದಿನದಂದು ಮೆದುಳಿನ ಅಸ್ವಸ್ಥತೆ ಹೊಂದಿರುವರಿಗೆ ಸಮಾನತೆ ಮೂಡಿಸಲು ಮೆದುಳಿನ ಆರೋಗ್ಯ ಶಿಕ್ಷಣ ನೀಡಲಾಗುವುದು.
ಧ್ಯೇಯ: ಈ ವರ್ಷದ ವಿಶ್ವ ಮೆದುಳಿನ ದಿನ ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಲಾಗಿದೆ. ಆರೋಗ್ಯ ಮತ್ತು ತಡೆಗಟ್ಟುವಿಕೆ ಎರಡೂ ವಿಷಯಗಳ ಇತಿಹಾಸವನ್ನು ಹೊಂದಿವೆ. ಚಿಕಿತ್ಸೆ ಜಾಗತಿಕ ಕ್ರಿಯಾ ಯೋಜನೆಯ ಐದು ಸ್ತಂಭಗಳಾದ ವಕಾಲತ್ತು, ಚಿಕಿತ್ಸೆ, ತಡೆಗಟ್ಟುವಿಕೆ, ನಾವೀನ್ಯತೆ ಅಥವಾ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಮೇಲೆ ಗಮನಹರಿಸಲಾಗಿದೆ.
ಈ ಐದು ಸ್ತಂಭಗಳ ಮೂಲಕ ಈ ಸಮಸ್ಯೆಗಳನ್ನು ತಡೆಗಟ್ಟಲು ಆಯ್ಕೆ ಮಾಡಿದ್ದೇವೆ. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನರವೈಜ್ಞಾನಿಕ ಕಾಯಿಲೆಗಳಿಂದ ಪ್ರಭಾವಿತವಾಗದ ವ್ಯಕ್ತಿಗಳ ಸಂಖ್ಯೆ ತಡೆಗಟ್ಟುವಿಕೆ ಶಕ್ತಿಯುತ ಮತ್ತು ಸಾಮಾನ್ಯವಾಗಿ ಕಡಿಮೆ ಅಂದಾಜು ಮಾಡಲಾದ ಸಾಧನವಾಗಿದೆ ಇವು ಎಂದು ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ ಅಧ್ಯಕ್ಷ ಪ್ರೊಫೆಸರ್ ವೋಲ್ಫ್‌ಗ್ಯಾಂಗ್ ಗ್ರಿಸೊಲ್ಡ್ ತಿಳಿಸಿದ್ದಾರೆ.
ಮೆದುಳಿನ ಕಾಯಿಲೆಗಳಿರುವ ಜನರಿಗೆ ಹೆಚ್ಚಿನ ಸಮಾನ ಪ್ರವೇಶವ ಒದಗಿಸುವುದು ಮತ್ತು ಇತರರೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡಲು ಪ್ರಪಂಚದಾದ್ಯಂತ ಜಾಗೃತಿಯನ್ನು ಮೂಡಿಸುವುದಾಗಿದೆ.
ಲ್ಯಾನ್ಸೆಟ್ ಅಧ್ಯಯನ ಪ್ರಕಾರ, ಮೆದುಳಿನ ಅಸ್ವಸ್ಥತೆಗಳ ಪ್ರಾಥಮಿಕ ತಡೆಗಟ್ಟುವಿಕೆ ಅಪಾಯದ ಮೌಲ್ಯಮಾಪನ, ಸಕ್ರಿಯ ಅಪಾಯಕಾರಿ ಅಂಶಗಳ ನಿರ್ವಹಣೆ ಮತ್ತು ಪ್ರೋಡ್ರೊಮಲ್ ಚಿಹ್ನೆಗಳು ಮತ್ತು ರೋಗಲಕ್ಷಣಗಳಿಗೆ ರೇಖಾಂಶದ ಮೇಲ್ವಿಚಾರಣೆ ಮತ್ತು ಕಣ್ಗಾವಲು ಒಳಗೊಂಡಿರುತ್ತದೆ. ದ್ವಿತೀಯ ಹಂತದ ತಡೆಗಟ್ಟುವಿಕೆಯಲ್ಲಿ ಆರಂಭಿಕ ಮತ್ತು ತ್ವರಿತ ರೋಗನಿರ್ಣಯ, ಅಪಾಯಕಾರಿ ಅಂಶ ಕಡಿತ, ಸಕ್ರಿಯ ಚಿಕಿತ್ಸೆಯ ಮಧ್ಯಸ್ಥಿಕೆ ಮತ್ತು ಜೀವನಶೈಲಿಯ ಅಂಶಗಳು ಮತ್ತು ನಡವಳಿಕೆಯ ಆರೋಗ್ಯದ ಆಯ್ಕೆಯನ್ನು ಒಳಗೊಂಡಿರುತ್ತದೆ.
ಭಾರತದಲ್ಲಿ ನರಸಂಬಂಧಿ ಸಮಸ್ಯೆ ಸ್ಥಿತಿಗತಿ: ದಿ ಲ್ಯಾನ್ಸೆಟ್‌ನ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಸಾಂಕ್ರಾಮಿಕೇತರ ಒಟ್ಟು ಅಂಗವೈಕಲ್ಯ ಹೊಂದಾಣಿಕೆಯ ಜೀವಿತ ವರ್ಷ 1990ರಲ್ಲಿ ಶೇ 4ರಿಂದ 2019 ರಲ್ಲಿ 8.2 ಪ್ರತಿಶತಕ್ಕೆ ದ್ವಿಗುಣಗೊಂಡಿದೆ. ಗಾಯ ಸಂಬಂಧಿತ ನರಸಂಬಂಧಿ ಅಸ್ವಸ್ಥತೆಗಳು ಶೇ 0.2ರಿಂದ ಶೇ 0.6 ಹೆಚ್ಚಿವೆ.
ಇದೇ ವೇಳೆ ಸಂವಹನ ನರವೈಜ್ಞಾನಿಕ ಅಸ್ವಸ್ಥತೆಗಳು ಶೇ 4.1ರಿಂದ 1.1ಕ್ಕೆ ಕಡಿಮೆಯಾಗಿದೆ. ಭಾರತದಲ್ಲಿ ನರ ಸಂಬಂಧಿ ಸಮಸ್ಯೆ ಡಿಎಎಲ್ವೈಎಸ್ನಲ್ಲಿನ ಹೆಚ್ಚಿನ ಸಮಸ್ಯೆಗಳು ಪಾರ್ಶ್ವವಾಯು ಶೇ 37.9, ತಲೆನೋವು ಸಮಸ್ಯೆ ಶೇ 17.5, ಅಪಸ್ಮಾರ ಶೇ 11.3, ಸೆರೆಬ್ರಲ್ ಪಾಲ್ಸಿ ಶೇ5.7 ಮತ್ತು ಎನ್ಸೆಫಾಲಿಟಿಸ್ ಶೇ5.3ರಷ್ಟು ಕೊಡುಗೆ ಹೊಂದಿದೆ.
ನರ ಸಂಬಂಧಿ ಸಮಸ್ಯೆ ವಿರುದ್ಧ ಡಬ್ಲ್ಯೂಹೆಚ್ಒ ಹೆಜ್ಜೆ: ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಎಪಿಲೆಪ್ಸಿ ಮತ್ತು ಇತರ ನರವೈಜ್ಞಾನಿಕ ಅಸ್ವಸ್ಥತೆಗಳ (ಐಜಿಎಪಿ) ಮೇಲೆ ಇಂಟರ್ಸೆಕ್ಟೋರಲ್ ಜಾಗತಿಕ ಕ್ರಿಯಾಯೋಜನೆಯ ಹೊಸ ಅನುಷ್ಠಾನದ ಸಾಧನವನ್ನು ಪ್ರಕಟಿಸಿದೆ. ಇದು 2031ರ ಗುರಿ ಹಾಗೂ ನರವೈಜ್ಞಾನಿಕ ಅಸ್ವಸ್ಥತೆಗಳಿರುವ ಜನರಿಗೆ ಸೇವೆಗಳನ್ನು ಸುಧಾರಿಸಲು ದೇಶಗಳಿಗೆ ನಿರ್ದಿಷ್ಟ ಕ್ರಮಗಳು ಮತ್ತು ಸಂಪನ್ಮೂಲಗಳನ್ನು ವಿವರಿಸುತ್ತದೆ.
ವಿಶ್ವದಾದ್ಯಂತ ಅನಾರೋಗ್ಯ ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣ ಈ ನರ ಸಂಬಂಧಿ ಸಮಸ್ಯೆಯಾಗಿದೆ. ಈ ಸಮಸ್ಯೆಗಳಿಗೆ ಉತ್ತಮ ಸೇವೆ ಅಗತ್ಯ ಪ್ರಮಾಣದಲ್ಲಿಲ್ಲ. ಅದರಲ್ಲೂ ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಇದರ ಸೌಲಭ್ಯ ಕಡಿಮೆ ಇದೆ. ವಿಶ್ವದಾದ್ಯಂತ, ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು ಸಂಬಂಧಿತ ಸಮಸ್ಯೆ ಹೊಂದಿರುವ ಜನರು ಚಿಕಿತ್ಸೆ ಮತ್ತು ಪುನರ್ವಸತಿ ಪ್ರವೇಶದ ತೊಂದರೆಯನ್ನು ಹೊಂದಿದ್ದು, ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಸಮಸ್ಯೆ ಎದುರಿಸುತ್ತಿದ್ದಾರೆ.
ನರ ಸಂಬಂಧಿ ಸಮಸ್ಯೆಗಳು ಭಾರತದಲ್ಲಿ ಬಹುದೊಡ್ಡ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ಪಾರ್ಶ್ವವಾಯು, ಪಾರ್ಕಿನ್ಸನ್ ಸಮಸ್ಯೆ, ಅಲ್ಝೈಮರ್ಯಂತಹ ಸಮಸ್ಯೆಗಳಿಗೆ ಲಕ್ಷಾಂತರ ಮಂದಿ ಬಳಲುತ್ತಿದ್ದಾರೆ ಎಂದು ಐಎಫ್ಇಎಂ ಕ್ಲಿನಿಕಲ್ ಪ್ರಾಕ್ಟಿಸ್ ಸಮಿತಿಯ ಮುಖ್ಯಸ್ಥ ಡಾ ತಮೊರಿಶ್ ಕೊಲೆ ತಿಳಿಸಿದ್ದಾರೆ.
ಪ್ರತಿವರ್ಷ ಪಾರ್ಶ್ವವಾಯುಗೆ ಸರಿಸುಮಾರು 1.8 ಮಿಲಿಯನ್ ಜನರು ಒಳಗಾಗುತ್ತಿದ್ದಾರೆ. ಇದು ಸಾವು ಮತ್ತು ಅಂಗವೈಕಲ್ಯತೆಗೆ ಪ್ರಮುಖ ಕಾರಣವಾಗಿದೆ. ಇದರ ನಂತರದಲ್ಲಿ ಅಪಸ್ಮರ ಸಮಸ್ಯೆಯಿದ್ದು, ಇದು ಡೆಮನ್ಶಿಯಾ ಪ್ರಕರಣದ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ. ಇದರ ಆರ್ಥಿಕ ಪರಿಣಾಮವು ಗಣನೀಯವಾಗಿದೆ. ವರ್ಧಿತ ಆರೋಗ್ಯ ಮೂಲಸೌಕರ್ಯ, ಹೆಚ್ಚಿನ ಸಾರ್ವಜನಿಕ ಮತ್ತು ವೃತ್ತಿಪರ ಶಿಕ್ಷಣದ ಅಗತ್ಯವನ್ನು ಒತ್ತಿಹೇಳುತ್ತದೆ. ಹಾಗೇ ನಿರ್ವಹಣೆ ಮತ್ತು ಚಿಕಿತ್ಸೆಯನ್ನು ಸುಧಾರಿಸಲು ಸಂಶೋಧನೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ತಿಳಿಸುತ್ತದೆ ಎಂದಿದ್ದಾರೆ.
ಅಪಸ್ಮಾರವೂ ಭಾರತದಲ್ಲಿ ಹೆಚ್ಚಿದ್ದು, 10 ಮಿಲಿಯನ್ ಜನರು ಜಗತ್ತಿನೆಲ್ಲೆಡೆ ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ. ಪಾರ್ಕಿನ್ಸನ್ ಸಮಸ್ಯೆಯೂ ಗಮನಾರ್ಹವಾಗಿದೆ. ಇದು ಕೂಡ ಭಾರತದಲ್ಲಿ 3 ಲಕ್ಷ ಮಂದಿ ಮೇಲೆ ಪರಿಣಾಮ ಬೀರಿದೆ. ಬೇರೆ ದೇಶಗಳಲ್ಲಿ ಇದರ ಪ್ರಮಾಣ ಕಡಿಮೆ ಇದೆ. ಇನ್ನು ಅಲ್ಝೈಮರ್ ಮತ್ತು ಡೆಮನ್ಸಿಯ ಕೂಡ ವಯಸ್ಸಾದ ಜನಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಇದು ದೇಶದ ನರ ಸಂಬಂಧಿ ಅಸ್ವಸ್ಥತೆ ಮೇಲೆ ಹೊರೆ ಹೆಚ್ಚಿಸುತ್ತದೆ.
ಇದನ್ನೂ ಓದಿ: ಮೂರ್ಛೆ ರೋಗ ಜಾಗೃತಿ ದಿನ: ಅಪಸ್ಮಾರ ಅಪಾಯಕಾರಿಯಲ್ಲ, ಮುನ್ನೆಚ್ಚರಿಕೆ ಇರಲಿ