ಹೈದರಾಬಾದ್: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ತಿಳಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸದಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಹೀಗಾಗಿ ಭಾರತ ಆ ದೇಶಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
Great new for Indians and Indian Cricket fans.
— Kushal Jaiswal (@kushaljaiswal1) November 9, 2024
India will not travel to Pakistan for Champions Trophy.
Ideally no teams should travel there but okay that’s a start.#championstrophy2025 pic.twitter.com/RLQ9tNQJtn
ಭದ್ರತೆ, ರಾಜಕೀಯ ಬಿಕ್ಕಟ್ಟಿನಿಂದ ಭಾರತ ಹಿಂದೇಟು: ಪಂದ್ಯಾವಳಿಯು ಫೆಬ್ರವರಿ 19 ಮತ್ತು ಮಾರ್ಚ್ 9 ರ ನಡುವೆ ಪಾಕಿಸ್ತಾನದಲ್ಲಿ ನಡೆಯಲಿ. ಭಾರತ ಸೇರಿದಂತೆ ವಿಶ್ವದ ಎಂಟು ದೇಶಗಳ ತಂಡಗಳು ಪ್ರವಾಸ ಕೈಗೊಳ್ಳಬೇಕಿದೆ. ಆದರೆ, ಭದ್ರತಾ ಸಮಸ್ಯೆ, ರಾಜಕೀಯ ಬಿಕ್ಕಟ್ಟಿನ ಕಾರಣ ಭಾರತ ತಂಡವು ಅಲ್ಲಿಗೆ ತೆರಳಲು ನಿರಾಕರಿಸಿದೆ. ಹೀಗಾಗಿ ಪಾಕ್ಗೆ ಮತ್ತೊಂದು ಪ್ರತಿಷ್ಠಿತ ಟೂರ್ನಿ ಆತಿಥ್ಯ ಕೈತಪ್ಪುವ ಅಥವಾ ಹೈಬ್ರಿಡ್ ಪಂದ್ಯ ಆಡಿಸುವುದೊಂದೇ ದಾರಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಡಿಸಲು ನಿರಾಕರಿಸಿದ್ದಾರೆ. ಆದರೆ, ಭಾರತ ತಂಡ ಪ್ರವಾಸ ಕೈಗೊಳ್ಳಲು ಸುತಾರಾಂ ಒಪ್ಪದೇ ಹೋದಲ್ಲಿ ಇದಕ್ಕೆ ಒಪ್ಪದೆ ಬೇರೆ ಗತಿಯಿಲ್ಲ ಎಂದು ವರದಿಯಾಗಿದೆ.
ಟೂರ್ನಿ ಎತ್ತಂಗಡಿ ಸಾಧ್ಯತೆ: ಇನ್ನು, ಪಾಕಿಸ್ತಾನದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದೆ ಇದ್ದಲ್ಲಿ, ಯುಎಇ, ಶ್ರೀಲಂಕಾದಲ್ಲಿ ನಡೆಸುವ ಬಗ್ಗೆ ಐಸಿಸಿ ಚಿಂತನೆ ನಡೆಸಲಿದೆ. ಭಾರತ ತಂಡದ ಪಂದ್ಯಗಳನ್ನು ಮಾತ್ರ ಹೈಬ್ರಿಡ್ ಮಾದರಿಯಲ್ಲಿ ಈ ದೇಶಗಳಲ್ಲಿ ಆಡಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸಲಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪಂದ್ಯಾವಳಿಯ ವೇಳಾಪಟ್ಟಿ ಇನ್ನೂ ಬಹಿರಂಗಪಡಿಸಬೇಕಾಗಿಲ್ಲ. ತಂಡಗಳ ಸ್ಪಷ್ಟ ನಿರ್ಧಾರಗಳು ಹೊರಬೀಳದ ಕಾರಣ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 2012-13ರಲ್ಲಿ ನಡೆದ ದ್ವಿಪಕ್ಷೀಯ ಸರಣಿಯು ಕೊನೆಯಾಗಿದೆ. ಅಂದಿನಿಂದ ಉಭಯ ತಂಡಗಳ ನಡುವೆ ಕ್ರಿಕೆಟ್ ಸರಣಿಗಳು ನಡೆದಿಲ್ಲ. ಐಸಿಸಿ ನಡೆಸುವ ಟೂರ್ನಿಗಳಲ್ಲಿ ಮಾತ್ರ ಎದುರಾಗಿವೆ.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: 25 ವರ್ಷದ ಆಟಗಾರನಿಗೆ ಸಿಕ್ತು ಚಾನ್ಸ್