ಹೈದರಾಬಾದ್: ನೀರು ಕುಡಿಯುವುದು ಎಷ್ಟು ಮುಖ್ಯ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ತಜ್ಞರು ಹೇಳುವ ಪ್ರಕಾರ, ವ್ಯಕ್ತಿ ಮೂರು ವಾರ ಆಹಾರವಿಲ್ಲದೇ ಬದುಕಬಹುದು. ಆದರೆ, ಮೂರು ದಿನ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಜೀವ ಉಳಿಸಲು ನೀರು ಪ್ರಮುಖವಾಗಿದೆ. ಆದರೆ, ನೀರನ್ನು ತಪ್ಪಾದ ರೀತಿಯಲ್ಲಿ ಸೇವನೆ ಮಾಡುವುದು ಕೂಡ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು.
ವೈದ್ಯರ ಪ್ರಕಾರ, ನಿಂತು ನೀರು ಕುಡಿಯುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಂತಾಗ ದೇಹ ಮತ್ತು ಕೋಶಗಳು ಒತ್ತಡದಲ್ಲಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀರು ಸೇವನೆ ಮಾಡುವುದರಿಂದ ನೀರು ದೇಹಕ್ಕೆ ವೇಗವಾಗಿ ಹರಿಯುತ್ತದೆ. ಇದು ಸಮತೋಲಿತ ದ್ರವದ ಮೇಲೆ ಅಡ್ಡಿಯುಂಟು ಮಾಡುತ್ತದೆ.
ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ: ಇದರ ಹೊರತಾಗಿ ನಿಂತು ನೀರು ಕುಡಿಯುವುದರಿಂದ ಇದು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಕಾರಣ ಗುರುತ್ವಾಕರ್ಷಣೆ. ನಿಂತು ನೀರು ಕುಡಿಯುವಾಗ ಅದು ನೇರವಾಗಿ ಆಹಾರದ ಕೊಳವೆಯಿಂದ ಹೆಚ್ಚಿನ ವೇಗ ಮತ್ತು ಬಲದಿಂದ ಹೊಟ್ಟೆಯ ಕೆಳಭಾಗಕ್ಕೆ ತಲುಪುತ್ತದೆ. ವೈದ್ಯರ ಪ್ರಕಾರ, ನಿಂತು ನೀರು ಕುಡಿಯುವುದು ನರಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ದ್ರವದ ಸಮತೋಲನಕ್ಕೆ ಅಡ್ಡಿಯಾಗುತ್ತದೆ.
ಅಸ್ಥಿಸಂಧಿವಾತಕ್ಕೆ ಕಾರಣ: ನಿಂತು ನೀರು ಕುಡಿಯುವುದರಿಂದ ಕೀಲಿನಲ್ಲಿ ದ್ರವ ಸಂಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಇದು ಅಸ್ಥಿಸಂಧಿವಾತಕ್ಕೆ ಕಾರಣವಾಗುತ್ತದೆ. ವೈದ್ಯರ ಪ್ರಕಾರ, ನಿಂತು ನೀರು ಕುಡಿಯುವುದು ಕೀಲಿನ ಮೇಲೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.
ಹೃದಯ ಸಮಸ್ಯೆಗೆ ಕಾರಣ: ಇದರ ಹೊರತಾಗಿ, ನಿಂತು ನೀರು ಕುಡಿಯುವುದರಿಂದ ನೀರಿನ ಪೋಷಕಾಂಶ ಮತ್ತು ವಿಟಮಿನ್ಗಳು ಯಕೃತ್(Lever) ಮತ್ತು ಜೀರ್ಣ ವ್ಯವಸ್ಥೆಗೆ ತಲುಪುವುದಿಲ್ಲ. ಕಾರಣ ನೀರು ವೇಗವಾಗಿ ಹೊಟ್ಟೆಯ ಕೆಳಭಾಗ ತಲುಪುತ್ತದೆ. ಇದು ಶ್ವಾಸಕೋಶ ಮತ್ತು ಹೃದಯದ ಮೇಲೆ ಕೂಡ ಪರಿಣಾಮ ಬೀರಲಿದೆ. ನಿಂತು ನೀರು ಕುಡಿಯುವುದರಿಂದ ಆಮ್ಲಜನಕ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಮೂತ್ರಪಿಂಡದ ಮೇಲೆ ಪರಿಣಾಮ: ಕುಳಿತು ನೀರು ಕುಡಿಯುವುದರಿಂದ ಮೂತ್ರಪಿಂಡ ಉತ್ತಮವಾಗಿ ಕೆಲಸ ಮಾಡುತ್ತದೆ. ನಿಂತು ನೀರು ಕುಡಿದರೆ ದ್ರವವು ಅಧಿಕ ಒತ್ತಡದಿಂದ ಶೋಧನೆಗೆ ಒಳಗಾಗುತ್ತದೆ. ಜೊತೆಗೆ ನೀರಿನಲ್ಲಿ ಇರುವ ಕಲ್ಮಶಗಳು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತವೆ. ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ಸಂಬಂಧಿ ಹಲವು ರೋಗಗಳ ಭೀತಿ ಎದುರಾಗಲಿದೆ.
ಗಮನದಲ್ಲಿಡಿ: ಇಲ್ಲಿ ಒದಗಿಸಲಾದ ಎಲ್ಲ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳ ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ - ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯರ, ಅಥವಾ ಇದಕ್ಕೆ ಸಂಬಂಧಪಟ್ಟ ಪರಿಣಿತರ ಸಲಹೆ ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಬೀ ಅಲರ್ಟ್: ಆರೋಗ್ಯಯುತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕು?.. ಹೆಚ್ಚು - ಕಡಿಮೆ ಆದ್ರೆ ಸಮಸ್ಯೆ ಏನು?