ETV Bharat / health

ಎಚ್ಚರ, ಎಚ್ಚರ: ಇಂತಹ ಆಹಾರಗಳ ಸೇವನೆಯಿಂದ ಜೀವಕ್ಕೆ ಕುತ್ತು! - Ultra Processed Food

Ultra Processed Food Effects: ಆಹಾರ ಮನುಷ್ಯನನ್ನು ಬದುಕಿಸುತ್ತದೆ ನಿಜ. ಆದರೆ ನಾವು ಎಂತಹ ಆಹಾರವನ್ನು ಸೇವಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಹಾಗಾದರೆ, ನಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಪದಾರ್ಥಗಳು ಉತ್ತಮವಲ್ಲ? ಇದು ಆರೋಗ್ಯಕ್ಕೆ ಯಾಕೆ ಹಾನಿಕಾರಕ? ತಜ್ಞರು ಏನು ಹೇಳುತ್ತಾರೆ? ನೋಡೋಣ.

ULTRA PROCESSED FOODS AVOID  EART ATTACKS STROKES AND ANGINA  PROCESSED FOODS AND HEALTH
ಎಚ್ಚರ, ಎಚ್ಚರ: ಇಂತಹ ಆಹಾರಗಳ ಸೇವನೆಯಿಂದ ಇದೆ ನಿಮ್ಮ ಜೀವಕ್ಕೆ ಕುತ್ತು
author img

By ETV Bharat Karnataka Team

Published : Apr 1, 2024, 6:33 PM IST

ಉತ್ತಮ ಆರೋಗ್ಯಕ್ಕೆ ಪ್ರತಿದಿನ ಸಮತೋಲಿತ ಆಹಾರ ಸೇವಿಸಬೇಕು. ಹಾಗಾದಾಗ ಮಾತ್ರ ಯಾವುದೇ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಬಾಧಿಸುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಇತ್ತೀಚೆಗೆ ಅನೇಕರು ಬಾಯಿ ರುಚಿ ಹೆಸರಿನಲ್ಲಿ ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ತಿನ್ನುತ್ತಿದ್ದಾರೆ. ಇದರಿಂದ ದೀರ್ಘಾವಧಿಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಬ್ರೆಡ್: ನಮ್ಮಲ್ಲಿ ಹೆಚ್ಚಿನವರು ಬ್ರೆಡ್ ತಿನ್ನಲು ಇಷ್ಟಪಡುತ್ತಾರೆ. ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಲ್ಲಿ ಒಂದಾದ ಬ್ರೆಡ್ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುವುದಿಲ್ಲ. ಅವುಗಳನ್ನು ತಯಾರಿಸಲು ಸಂಸ್ಕರಿಸಿದ ಹಿಟ್ಟು, ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್, ಸಕ್ಕರೆ ಮತ್ತು ಹೈಡ್ರೋಜನೀಕರಿಸಿದ ಕೊಬ್ಬುಗಳನ್ನು ಬಳಸಲಾಗುತ್ತದೆ. ಬಣ್ಣ ಮತ್ತು ರುಚಿ ಹೆಚ್ಚಿಸಲು ಕೃತಕ ಬಣ್ಣಗಳು ಮತ್ತು ಎಮಲ್ಸಿಫೈಯರ್​ಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಇವುಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮತ್ತು ಅನೇಕ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ.

ಚಾಕೊಲೇಟ್, ಬಿಸ್ಕತ್ತುಗಳು: ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡಾ ಚಾಕೊಲೇಟ್ ಮತ್ತು ಬಿಸ್ಕತ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಇವುಗಳನ್ನು ತಯಾರಿಸಲು ಸಂಸ್ಕರಿಸಿದ ಹಿಟ್ಟು, ಸಕ್ಕರೆ, ಕೋಕೋ ಪೌಡರ್ ಮತ್ತು ಉಪ್ಪಿನಂತಹ ವಿವಿಧ ಪದಾರ್ಥಗಳನ್ನು ಬಳಸಲಾಗುತ್ತದೆ. ಪ್ರತಿನಿತ್ಯ ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ತಜ್ಞರು ಹೇಳುವಂತೆ ಚಾಕೊಲೇಟ್ ಮತ್ತು ಬಿಸ್ಕೆತ್​ ತಿನ್ನುವುದರಿಂದ ಹಲ್ಲು ಹುಳುಕಾಗುವ ಅಪಾಯವೂ ಹೆಚ್ಚು.

ಫ್ರೆಂಚ್ ಫ್ರೈಸ್: ಫ್ರೆಂಚ್ ಫ್ರೈಗಳು ಅನೇಕರ ನೆಚ್ಚಿನ ತ್ವರಿತ ಆಹಾರ ಪದಾರ್ಥಗಳಲ್ಲಿ ಒಂದು. ಆದ್ರೆ ಇದರಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಉಪ್ಪು ಅಧಿಕ. ಹೆಚ್ಚು ಫ್ರೆಂಚ್ ಫ್ರೈಗಳನ್ನು ತಿನ್ನುವುದು ಹೃದ್ರೋಗ, ಪಾರ್ಶ್ವವಾಯು, ಟೈಪ್ 2 ಮಧುಮೇಹ ಮತ್ತು ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಐಸ್ ಕ್ರೀಮ್: ಐಸ್ ಕ್ರೀಮ್ ತಯಾರಿಕೆಯಲ್ಲಿ ಸಕ್ಕರೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ಬಳಸಲಾಗುತ್ತದೆ. ಆದರೆ, ಇವುಗಳನ್ನು ದಿನನಿತ್ಯ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಮಧುಮೇಹ ಇರುವವರು ಅವುಗಳನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಕೆಲವು ಅಧ್ಯಯನಗಳ ಪ್ರಕಾರ, ಐಸ್ ಕ್ರೀಮ್ ಹೆಚ್ಚು ಸೇವಿಸಿದವರಿಗೆ ಹೃದ್ರೋಗ, ಪಾರ್ಶ್ವವಾಯು ಮತ್ತು ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಇನ್​ಸ್ಟಂಟ್​ ನೂಡಲ್ಸ್: ನೂಡಲ್ಸ್ ಪ್ಯಾಕೆಟ್ ತೆರೆಯಿರಿ ಮತ್ತು ಸ್ವಲ್ಪ ಬಿಸಿ ನೀರನ್ನು ಸುರಿಯಿರಿ. ಕ್ಷಣಗಳಲ್ಲಿ ಎಲ್ಲಿ ಬೇಕಾದರೂ ನೀವು ನೂಡಲ್ಸ್ ತಿನ್ನಬಹುದು. ಹೀಗಾಗಿ ಸೂಪರ್ ಮಾರ್ಕೆಟ್, ಅಂಗಡಿಗಳಲ್ಲಿ ಸಿಗುವ ಈ ನೂಡಲ್ಸ್ ಪ್ಯಾಕೆಟ್​ಗಳನ್ನು ಜನರು ಖರೀದಿಸುತ್ತಿದ್ದಾರೆ. ಆದ್ರೆ ಅವುಗಳನ್ನು ತಯಾರಿಸಲು ಹಿಟ್ಟು, ಉಪ್ಪು ಮತ್ತು ರುಚಿ ತಯಾರಕರಂತಹ ವಿವಿಧ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ನೂಡಲ್ಸ್ ಅನ್ನು ಅತಿಯಾಗಿ ತಿನ್ನುವುದರಿಂದ ಹೃದ್ರೋಗ, ಪಾರ್ಶ್ವವಾಯು, ಟೈಪ್ 2 ಮಧುಮೇಹ ಮತ್ತು ಅಧಿಕ ತೂಕದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಸಂಶೋಧನೆಯ ವಿವರಗಳು: 2018 ರಲ್ಲಿ 'ಬ್ರಿಟಿಷ್ ಮೆಡಿಕಲ್ ಜರ್ನಲ್' (ಬಿಎಂಜೆ)ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಾರಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ತ್ವರಿತ ನೂಡಲ್ಸ್ ತಿನ್ನುವವರಿಗೆ ಹೃದಯಾಘಾತದ ಅಪಾಯ ಹೆಚ್ಚು. ಚೀನಾದ ಬೀಜಿಂಗ್‌ನಲ್ಲಿರುವ 'ಚೀನಾ-ಜಪಾನ್ ಫ್ರೆಂಡ್‌ಶಿಪ್ ಹಾಸ್ಪಿಟಲ್'ನಲ್ಲಿ ಹೃದ್ರೋಗದ ಮುಖ್ಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ವಾಂಗ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಸಾಕಷ್ಟು ತ್ವರಿತ ನೂಡಲ್ಸ್ ತಿನ್ನುವವರಿಗೆ ಹೃದಯಾಘಾತದ ಅಪಾಯವು ಶೇಕಡಾ 28ರಷ್ಟು ಹೆಚ್ಚು ಎಂಬುದನ್ನು ಅವರು ಗಮನಿಸಿದ್ದಾರೆ.

ಇದನ್ನೂ ಓದಿ: ಎಚ್ಚರಿಕೆ: ಈರುಳ್ಳಿ ಹೆಚ್ಚು ಸೇವಿಸಿದರೆ ಏನಾಗುತ್ತೆ ಗೊತ್ತಾ? - SIDE EFFECTS OF ONION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.