ETV Bharat / health

ಐಬಿಎಸ್​​ ಸಮಸ್ಯೆಗೆ ಆಹಾರ ಪದ್ಧತಿ ಮೂಲಕವೇ ಚಿಕಿತ್ಸೆ: ಅಧ್ಯಯನ - Dietary Treatment For IBS - DIETARY TREATMENT FOR IBS

ಇರಿಟೇಬಲ್​ ಬೋವಲ್​​​​ ಸಿಂಡ್ರೋಮ್​ ಸಮಸ್ಯೆಗೆ ಉತ್ತಮ ಆಹಾರ ಪದ್ಧತಿಯ ಮೂಲಕ ಚಿಕಿತ್ಸೆ ನೀಡಬಹುದು ಎಂದು ಅಧ್ಯಯನ ತಿಳಿಸಿದೆ.

dietary treatment is more effective treating irritable bowel syndrome

author img

By ETV Bharat Karnataka Team

Published : Apr 22, 2024, 2:59 PM IST

ನವದೆಹಲಿ: ಹೊಟ್ಟೆ ಉಬ್ಬರದಂತಹ ಉದರ ಸಂಬಂಧಿ ಇರಿಟೇಬಲ್​ ಬೋವಲ್​​​​ ಸಿಂಡ್ರೋಮ್ (ಐಬಿಎಸ್​)​ ಸಮಸ್ಯೆ ಅನೇಕರನ್ನು ಕಾಡುತ್ತದೆ. ಇಂತಹ ಸಮಸ್ಯೆಗೆ ಇತರೆ ಚಿಕಿತ್ಸೆಗಳಿಗಿಂತ ಆಹಾರ ಆಧಾರಿತ ಡಯಾಟರಿ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಈ ಚಿಕಿತ್ಸೆಯು ಶೇ.70ರಷ್ಟು ರೋಗ ಲಕ್ಷಣಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೊಸ ಸಂಶೋಧನೆಗಳು ತಿಳಿಸಿವೆ. ಅಧ್ಯಯನ ವರದಿಯನ್ನು ದಿ ಲ್ಯಾನ್ಸೆಟ್​ ಗ್ಯಾಸ್ಟ್ರೊಎಂಟರ್ನೊಲಾಜಿ ಮತ್ತು ಹೆಪೆಟೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಇದಕ್ಕಾಗಿ ಮೂರು ಚಿಕಿತ್ಸೆ ವಿಧಾನವನ್ನು ಬಳಸಲಾಗಿದೆ. ಈ ಪೈಕಿ ಎರಡು ಡಯಾಟರಿ ಚಿಕಿತ್ಸೆಯಾಗಿದ್ದು, ಮತ್ತೊಂದು ಔಷಧಗಳ ಚಿಕಿತ್ಸೆ ಆಧಾರಿತವಾಗಿದೆ.

ಏನಿದು ಐಬಿಎಸ್?: ಐಬಿಎಸ್​ ಎಂಬುದು ಸಾಮಾನ್ಯವಾಗಿ ಹೊಟ್ಟೆ ನೋವು, ಗ್ಯಾಸ್​ ಅಥವಾ ಹೊಟ್ಟೆ ಉಬ್ಬರ, ಅತಿಸಾರ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಹಲವು ಸಂದರ್ಭಗಳಲ್ಲಿ ಈ ಸಮಸ್ಯೆಗಳು ವಿವಿಧ ಹಂತದ ತೀವ್ರತೆ ಹೊಂದಿರುತ್ತದೆ.

ಸಂಶೋಧಕರ ಮಾತು: "ಐಬಿಎಸ್​ ಚಿಕಿತ್ಸೆಯಲ್ಲಿ ಡಯಟ್​​ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅಧ್ಯಯನದಲ್ಲಿ ಕಂಡಿದ್ದೇವೆ. ಆದಾಗ್ಯೂ, ಅನೇಕ ಪರ್ಯಾಯ ಚಿಕಿತ್ಸೆಗಳೂ ಕೂಡಾ ಪ್ರಯೋಜನಕಾರಿಯಾಗಿದೆ ಎಂಬುದನ್ನು ಗಮನಿಸಬೇಕಾಗಿದೆ" ಎಂದು ಸ್ವೀಡನ್​ನ ಗುಟ್ಟನ್ಬರ್ಗ್​​​ ವಿಶ್ವವಿದ್ಯಾಲಯದ ಡಯಾಟಿಷಿಯನ್​ ಮತ್ತು ಸಂಶೋಧಕರಾದ ಸನ್ನಾ ನಿಬ್ಯಾಕ್​ ತಿಳಿಸಿದ್ದಾರೆ.

ಸಂಶೋಧನೆ ನಡೆದಿದ್ದು ಹೇಗೆ?: ಅಧ್ಯಯನದಲ್ಲಿ ಭಾಗಿಯಾದ ಮೊದಲ ಗುಂಪಿಗೆ ಸಾಂಪ್ರದಾಯಿಕ ಐಬಿಎಸ್​ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಈ ಸಂದರ್ಭದಲ್ಲಿ ಅವರು ಎಫ್​ಒಡಿಎಂಎಪಿ ಎಂದು ಕರೆಯಲಾಗುವ ಕಡಿಮೆ ಹುದುಗುವ ಕಾರ್ಬೋಹೈಡ್ರೇಟ್​​ಗಳ ಸಂಯೋಜನೆಯನ್ನು ತಿನ್ನುವ ಅಭ್ಯಾಸವನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಎಫ್​​ಒಡಿಎಂಎಪಿಯಲ್ಲಿ ದ್ವಿದಳ ಧಾನ್ಯ, ಈರುಳ್ಳಿ, ಲ್ಯಾಕ್ಟೊಸ್​ ಮತ್ತು ಬೇಳೆಕಾಳು ಉತ್ಪನ್ನಗಳನ್ನು ಹುದುಗಿಸಿ ನೀಡಲಾಗಿದೆ.

ಎರಡನೇ ಗುಂಪಿನವರಿಗೆ ಕಡಿಮೆ ಕಾರ್ಬೋಹೈಡ್ರೇಟ್​​ ಮತ್ತು ಹೆಚ್ಚಿನ ಪ್ರೋಟಿನ್​ ಮತ್ತು ಕೊಬ್ಬಯ ಹೊಂದಿರುವ ಆಹಾರ ನೀಡಲಾಗಿದೆ. ಮೂರನೇ ಗುಂಪಿನವರು ತಮ್ಮ ಅತ್ಯಂತ ತೊಂದರೆದಾಯಕ ಐಬಿಎಸ್​​​ ರೋಗಲಕ್ಷಣಗಳ ಆಧಾರದ ಮೇಲೆ ಔಷಧಿಗಳನ್ನು ಪಡೆದರು. ಸಾಂಪ್ರದಾಯಿಕ ಐಬಿಎಸ್​ ಆಹಾರದ ಸಲಹೆ ಮತ್ತು ಕಡಿಮೆ ಎಫ್​ಒಡಿಎಪಿ ಅಂಶಗಳು ಶೇ.76ರಷ್ಟು ಐಪಿಎಸ್​​​ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೋಟೀನ್ ಮತ್ತು ಕೊಬ್ಬಿನ ಆಹಾರವನ್ನು ಪಡೆಯುವ ಗುಂಪಿನಲ್ಲಿ ಈ ಪ್ರಮಾಣವು ಶೇ.71 ಮತ್ತು ಶೇ.58ರಷ್ಟು ಔಷಧ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ.

ಅಧ್ಯಯನದ ಪ್ರಕಾರ, ಎಲ್ಲಾ ಗುಂಪಿನಲ್ಲಿ ಈ ಚಿಕಿತ್ಸೆಯು ಉತ್ತಮ ಗುಣಮಟ್ಟದ ಜೀವನ, ಕಡಿಮೆ ದೈಹಿಕ ಸಮಸ್ಯೆ ಮತ್ತು ಆತಂಕ ಮತ್ತು ಖಿನ್ನತೆಯ ಕಡಿಮೆ ಚಿಹ್ನೆಗಳು ವರದಿ ಮಾಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ಇರಿಟೇಬಲ್ ಬೋವೆಲ್ ಸಿಂಡ್ರೋಮ್​ಗೆ ಏನು ಕಾರಣ?: ರೋಗಲಕ್ಷಣ ನಿಯಂತ್ರಿಸಲು ಆಹಾರ ಪದ್ಧತಿ ಹೀಗಿರಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.