ETV Bharat / health

ಯೂರಿಕ್ ಆ್ಯಸಿಡ್​ ಹೆಚ್ಚಾಯ್ತೇ? ಆಯುರ್ವೇದದ ಪ್ರಕಾರ ಈ ಎಲೆಗಳನ್ನು ತಿಂದ್ರೆ ಆಲ್​ ಕ್ಲಿಯರ್​! - Uric Acid Control Tips

author img

By ETV Bharat Karnataka Team

Published : May 3, 2024, 10:23 PM IST

Uric Acid Control Tips In Ayurveda: ದೇಹದಲ್ಲಿ ಅಧಿಕ ಯೂರಿಕ್ ಆ್ಯಸಿಡ್​ನಿಂದ ಉಂಟಾಗುವ ತೊಂದರೆಗಳೇನು? ಇದು ಏಕೆ ಹೆಚ್ಚಾಗುತ್ತದೆ? ಆಯುರ್ವೇದದ ಪ್ರಕಾರ ಪರಿಹಾರವೇನು? ಎಂಬುದನ್ನು ತಿಳಿಯೋಣ.

TIPS IN AYURVEDA  LEAVES TO EAT
ಆಯುರ್ವೇದದ ಪ್ರಕಾರ ಈ ಎಲೆಗಳನ್ನು ತಿಂದ್ರೆ ಆಲ್​ ಕ್ಲಿಯರ್​! (Getty Images)

ಯೂರಿಕ್ ಆ್ಯಸಿಡ್. ಇದು​ ರಕ್ತದಲ್ಲಿನ ಪ್ಯೂರಿನ್‌ಗಳ ವಿಭಜನೆಯಿಂದ ಉತ್ಪತ್ತಿಯಾಗುವ ರಾಸಾಯನಿಕ. ಸರಳವಾಗಿ ಹೇಳುವುದಾದರೆ, ಯೂರಿಕ್ ಆ್ಯಸಿಡ್​ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನ. ಇದು ಸಾಮಾನ್ಯವಾಗಿ ಮೂತ್ರದ ಮೂಲಕ ಹೊರಹೋಗುತ್ತದೆ. ಮೂತ್ರದ ಮೂಲಕ ಹೊರಹಾಕಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ, ದೇಹದಲ್ಲಿ ಸಂಗ್ರಹವಾಗುತ್ತದೆ ಮತ್ತು ಸಮಸ್ಯೆ ಉದ್ಭವವಾಗುತ್ತದೆ. ಇದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ.

ದೇಹದಲ್ಲಿ ಯೂರಿಕ್ ಆ್ಯಸಿಡ್ ಹೆಚ್ಚಾಗುವುದರಿಂದ ಊತ, ನೋವು, ಕೀಲು ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಲ್ಲುಗಳಂತಹ ವಿವಿಧ ಸಮಸ್ಯೆಗಳು ಬಾಧಿಸುತ್ತವೆ. ಯೂರಿಕ್ ಆ್ಯಸಿಡ್​ ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಿಗಳು ಲಭ್ಯವಿದ್ದರೂ, ಆಯುರ್ವೇದ ಔಷಧಿಗಳಿಂದ ನೈಸರ್ಗಿಕವಾಗಿ ಕಡಿಮೆ ಮಾಡಬಹುದು. ಈಗ ಯೂರಿಕ್ ಆ್ಯಸಿಡ್​ ನಿಯಂತ್ರಿಸಲು ಸಹಾಯ ಮಾಡುವ ಕೆಲವು ಎಲೆಗಳ ಬಗ್ಗೆ ತಿಳಿಯೋಣ.

ಆಯುರ್ವೇದದ ಪ್ರಕಾರ, ಸೂಚಿಸಲಾದ ಕೆಲವು ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ತ್ಯಾಜ್ಯ ಉತ್ಪನ್ನವಾದ ಯೂರಿಕ್ ಆ್ಯಸಿಡ್​ ನಿಯಂತ್ರಣದಲ್ಲಿರುತ್ತದೆ. ಈ ಎಲೆಗಳು ಯೂರಿಕ್ ಆ್ಯಸಿಡ್​ ಕಡಿಮೆ ಮಾಡುವುದು ಮಾತ್ರವಲ್ಲದೆ ದೇಹದಲ್ಲಿನ ವಿವಿಧ ಸಮಸ್ಯೆಗಳನ್ನೂ ಸಹ ತೊಲಗಿಸುತ್ತದೆ.

1. ತುಳಸಿ: ಭಾರತೀಯರು ಪವಿತ್ರ ಸಸ್ಯವೆಂದು ಪರಿಗಣಿಸುವ ತುಳಸಿಯು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿ. ಇದು ಯೂರಿಕ್​ ಆ್ಯಸಿಡ್​ ಕಡಿಮೆ ಮಾಡುವ ಆ್ಯಂಟಿ ಇನ್​ಫ್ಲಮಟರಿ, ಆ್ಯಂಟಿ ಆಕ್ಸಿಡೆಂಟ್​ ಲಕ್ಷಣಗಳನ್ನು ಹೊಂದಿರುತ್ತವೆ. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ದೇಹದಲ್ಲಿ ಯೂರಿಕ್ ಆ್ಯಸಿಡ್​ ಸಂಗ್ರಹವಾಗುವುದನ್ನು ಇದು ತಡೆಯುತ್ತದೆ.

2. ಬೇವಿನ ಎಲೆಗಳು: ದೇಹದಿಂದ ಯೂರಿಕ್​ ಆ್ಯಸಿಡ್​ ಹೊರಹಾಕಲು ಬೇವು ಉತ್ತಮ ಔಷಧ. ರಕ್ತ ಶುದ್ಧೀಕರಣದಲ್ಲೂ ಉತ್ತಮ ಪಾತ್ರವಹಿಸುತ್ತವೆ. ಬೇವಿನಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಸಮೃದ್ಧವಾಗಿದೆ. ಇದು ಯೂರಿಕ್ ಆ್ಯಸಿಡ್​ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಇತರ ವಿಷಕಾರಿ ವಸ್ತುಗಳನ್ನು ಹೊರಹಾಕುವ ಶಕ್ತಿ ಹೊಂದಿದೆ.

3. ಕೊತ್ತಂಬರಿ ಸೊಪ್ಪು: ಆಯುರ್ವೇದದಲ್ಲಿ ಕೊತ್ತಂಬರಿ ಸೊಪ್ಪಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕೊತ್ತಂಬರಿ ದೇಹದಲ್ಲಿನ ಉರಿ ಮತ್ತು ಊತ ಕಡಿಮೆ ಮಾಡಲು ಸಹಾಯ ಮಾಡುವ ಶಕ್ತಿ ಹೊಂದಿದೆ. ದೈನಂದಿನ ಆಹಾರದಲ್ಲಿ ಇದನ್ನು ಸೇವಿಸುವುದರಿಂದ ಯೂರಿಕ್ ಆ್ಯಸಿಡ್ ಸೇರಿದಂತೆ ಹಾನಿಕಾರಕ ವಿಷ ಹೊರಹಾಕಲು ಸಹಾಯ ಮಾಡುತ್ತದೆ.

4. ತ್ರಿಫಲ: ತ್ರಿಫಲವು ಹೆಸರೇ ಸೂಚಿಸುವಂತೆ ಇದು ಮೂರು ಹಣ್ಣುಗಳ ಸಂಯೋಜನೆ. ಅವರೆ ಬೆಲ್ಲಿರಿಕಾ, ಅಮಲಾ ಮತ್ತು ಹರಿತಾ. ಆಯುರ್ವೇದದ ಪ್ರಕಾರ, ಯೂರಿಕ್ ಆ್ಯಸಿಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಕರುಳಿನಲ್ಲಿನ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯಕ.

5. ಗಿಲೋಯ್: ಗಿಲೋಯ್ ಆಯುರ್ವೇದದಲ್ಲಿ ಪ್ರಸಿದ್ಧವಾದ ಗಿಡಮೂಲಿಕೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ರಕ್ತದಲ್ಲಿನ ಯೂರಿಕ್ ಆ್ಯಸಿಡ್​ ಮಟ್ಟವನ್ನು ನಿಯಂತ್ರಿಸುವ ಮೂಲಕ ಕೀಲು ನೋವು, ಊತ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡುವಲ್ಲಿ ಗಿಲೋಯ್ ಪ್ರಮುಖ ಪಾತ್ರ ವಹಿಸುತ್ತದೆ.

ಗಮನಿಸಿ: ಇಲ್ಲಿ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ, ವೈದ್ಯಕೀಯ ಸೂಚನೆ ಮತ್ತು ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ದಿಢೀರ್​​ ಹೃದಯಾಘಾತದಿಂದ ದೇಶದಲ್ಲಿ ಒಂದೇ ದಿನ ನಾಲ್ವರು ಸಾವು; ವೈದ್ಯರ ಎಚ್ಚರಿಕೆ ಗಮನಿಸಿ - Sudden Heart Attack Cases

ETV Bharat Logo

Copyright © 2024 Ushodaya Enterprises Pvt. Ltd., All Rights Reserved.