ETV Bharat / health

ಮಲೇರಿಯಾದ ವಿರುದ್ಧ ಮೊದಲ ಲಸಿಕೆ ಪ್ರಯೋಗ; ಗರ್ಭಿಣಿಯರಿಗೆ ಭರವಸೆಯ ಆಶಾಕಿರಣ - protection for pregnant women - PROTECTION FOR PREGNANT WOMEN

ಮಲೇರಿಯಾದಿಂದ ಪ್ರತಿ ವರ್ಷ ಆಫ್ರಿಕಾದಲ್ಲಿ 50 ಸಾವಿರ ಗರ್ಭಿಣಿಯರು ಸಾವನ್ನಪ್ಪಿದ್ದು, 2 ಲಕ್ಷ ಭ್ರೂಣಗಳು ಇದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಿವೆ.

Trial experiment of malaria vaccine shows promise
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)
author img

By ETV Bharat Karnataka Team

Published : Aug 15, 2024, 1:00 PM IST

ನವದೆಹಲಿ: ಗರ್ಭಾವಸ್ಥೆಯಲ್ಲಿ ತಾಯಂದಿರನ್ನು ಮಲೇರಿಯಾದಿಂದ ರಕ್ಷಿಸುವ ಉದ್ದೇಶದಿಂದ ಅಭಿವೃದ್ಧಿ ಮಾಡಲಾಗಿರುವ ಮಲೇರಿಯಾ ಲಸಿಕೆಯ ಪ್ರಯೋಗದಲ್ಲಿ ಭರವಸೆ ಕಂಡು ಬಂದಿದೆ ಎಂದು ಯುಎಸ್​ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.

ಅನಾಫಿಲಿಸ್​ ಸೊಳ್ಳೆಗಳಿಂದ ಹರಡುವ ಮಲೇರಿಯಾವೂ ಯವಾವುದೇ ವಯಸ್ಸಿನ ಜನರ ಮೇಲೆ ಅನಾರೋಗ್ಯ ಉಂಟು ಮಾಡುತ್ತದೆ. ಅದರಲ್ಲೂ ಗರ್ಭಿಣಿಯರು, ಮಕ್ಕಳು, ಶಿಶುಗಳು ಮತ್ತು ದುರ್ಬಲ ವರ್ಗದ ಜನರ ಮೇಲೆ ಇದು ಮಾರಣಾಂತಿಕ ಪರಿಣಾಮ ಹೊಂದಿದೆ.

ಮಲೇರಿಯಾದಿಂದ ಪ್ರತಿ ವರ್ಷ ಆಫ್ರಿಕಾದಲ್ಲಿ 50 ಸಾವಿರ ಗರ್ಭಿಣಿಯರು ಸಾವನ್ನಪ್ಪಿದ್ದು, 2 ಲಕ್ಷ ಭ್ರೂಣಗಳು ಇದರ ಪರಿಣಾಮಕ್ಕೆ ಒಳಗಾಗುತ್ತಿವೆ.

ಮಲೇರಿಯಾ ಸೋಂಕಿನ ವಿರುದ್ಧ ಪಿಎಫ್​ಎಸ್​ಪಿಜೆಡ್​ ಲಸಿಕೆಯ ಪ್ರಯೋಗದಲ್ಲಿ ಪರಿಣಾಮಕಾರಿಯಾಗಿ ಕಂಡು ಬಂದಿದೆ. ಅಮೆರಿಕ ಮೂಲದ ಬಯೋಟೆಕ್ನಾಲಾಜಿ ಸಂಸ್ಥೆ ಸನರಿಯಾ ಇದನ್ನು ಅಭಿವೃದ್ಧಿ ಪಡಿಸಿದ್ದು, ಇದು ಮೊದಲ ಮಲೇರಿಯಾ ಲಸಿಕೆಯಾಗಿದೆ. ಅಲ್ಲದೇ ಇದೊಂದೇ ಲಸಿಕೆ ಸಾಕಾಗಿದ್ದು, ಯಾವುದೇ ಹೆಚ್ಚುವರಿ ಡೋಸ್​ನ ಅವಶ್ಯಕತೆ ಇಲ್ಲ ಎಂದು ಪ್ರಯೋಗದಲ್ಲಿ ಕಂಡು ಬಂದಿದೆ.

ಈ ಪ್ರಯೋಗಕ್ಕಾಗಿ 18ರಿಂದ 38 ವರ್ಷದ ಆರೋಗ್ಯಯುತ ಮಹಿಳೆಯರನ್ನು ನೋಂದಾಯಿಸಲಾಗಿದೆ. ಇವರೆಲ್ಲಾ ಲಸಿಕೆ ಪಡೆದ ಬಳಿಕ ಗರ್ಭಾಧಾರಣೆಯ ನಿರೀಕ್ಷೆಯಲ್ಲಿದ್ದಾರೆ.

ಮಲೇರಿಯಾದ ಪರಾವಲಂಬಿಗಳನ್ನು ತೆಗೆದು ಹಾಕಲು ಚಿಕಿತ್ಸೆ ನೀಡಿದ ಮಹಿಳೆಯರನ್ನು ಗಮನಿಸಲಾಗಿದೆ. ಒಂದು ತಿಂಗಳಲ್ಲಿ ಮೂರು ಸಲೈನ್​ ಪ್ಲಸೆಬೊ ಅಥವಾ ತನಿಖೆ ಹಂತದ ಲಸಿಕೆಯನ್ನು ನೀಡಲಾಗಿದೆ. ಪಿಎಫ್​ಎಸ್​ಪಿಜೆಡ್​ ಲಸಿಕೆಯ ಎರಡು ಡೋಸ್​ ಅನ್ನು ಮಹಿಳೆಯರಿಗೆ ನೀಡಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಕ್ಲಿನಿಕಲ್​ ಮಲೇರಿಯಾ ಮತ್ತು ಪರವಾಲಂಬಿ ಸೋಂಕಿನಿಂದ ಸೋಂಕಿನ ರಕ್ಷಣೆಯನ್ನು ಹೊಂದಿದೆ ಅದು ಬೂಸ್ಟರ್ ಡೋಸ್​ ಇಲ್ಲ​ದೆಯೇ ಎಂದು ಸಂಶೋಧಕರು ತಿಳಿಸಿದ್ದಾರೆ. ಎನ್​ಐಹೆಚ್​​ನ ನ್ಯಾಷನಲ್​ ಇನ್ಸುಟಿಟ್ಯೂಟ್​ ಆಫ್​ ಅಲರ್ಜಿ ಮತ್ತು ಮಾಲಿಯ ಇನ್ಫೆಕ್ಷನ್​ ಡಿಸೀಸ್​ ಮತ್ತು ಯುನಿವರ್ಸಿಟಿ ಆಫ್​ ಸೈನ್ಸ್​, ಟೆಕ್ನಿಕ್ಸ್​ ಮತ್ತು ಟೆಕ್ನಾಲಾಜಿ ಬಮಕೊ ಜಂಟಿಯಾಗಿ ಈ ಪ್ರಯೋಗ ನಡೆಸಿವೆ.

ಈ ಪ್ರಯೋಗವನ್ನು ದಿ ಲ್ಯಾನ್ಸೆಟ್​ ಇನ್ಫೆಕ್ಷನ್​ ಡೀಸಿಸ್​ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಮೂರು ಡೋಸ್​ ಲಸಿಕೆಯನ್ನು 24 ವಾರಗಳಲ್ಲಿ 55 ಗರ್ಭಿಣಿಯರಿಗೆ ನೀಡಿದೆ. ಈ ಮಹಿಳೆಯರಲ್ಲಿ ಗರ್ಭಾವಸ್ಥೆ ಅಥವಾ ಅದಕ್ಕಿಂತ ಮುಂಚೆ ಸೋಂಕು ಹೊಂದಿರುವವರಲ್ಲಿ ಶೇ 65ರಷ್ಟು ಸಾಮರ್ಥ್ಯದಾಯಕವಾಗಿದೆ. ಅಧಿಕ ಡೋಸ್​ ಪಡೆದವರಲ್ಲಿ ಇದು ಶೇ 86ರಷ್ಟು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಪಿಎಫ್​ಎಸ್​ಪಿಜೆಡ್​​ ಲಸಿಕೆಯು ಮಲೇರಿಯಾ ಸಂಬಂಧಿತ ಆರಂಭಿಕ ಗರ್ಭಾವಸ್ಥೆಯ ಪರಿಣಮವನ್ನು ಶೇ 65 ರಿಂದ 86ರಷ್ಟು ತಪ್ಪಿಸುತ್ತದೆ.

ಇದಕ್ಕೆ ಮತ್ತಷ್ಟು ಕ್ಲಿನಿಕಲ್​ ಪ್ರಯೋಗ ನಡೆಸಿದ ಬಳಿಕ ದೃಢವಾಗಿದೆ. ಈ ಅಧ್ಯಯನವೂ ಗರ್ಭಾವಸ್ಥೆ ಸಂದರ್ಭದಲ್ಲಿ ಮಲೇರಿಯಾ ತಡೆಗಟ್ಟುವಿಕೆಗೆ ಸುಧಾರಿತ ಮಾರ್ಗವನ್ನು ತೆರೆಯುತ್ತದೆ ಎಂದಿದ್ದಾರೆ ಸಂಶೋಧಕರು. (ಐಎಎನ್​ಎಸ್​)

ಇದನ್ನೂ ಓದಿ: ಡೆಂಗ್ಯೂ ವಿರುದ್ಧ ಕ್ಯೂಡೆಂಗಾ ಲಸಿಕೆ ಶೇ 50ರಷ್ಟು ಪರಿಣಾಮಕಾರಿ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.