ETV Bharat / health

ಕೈಗೆ ಹಚ್ಚಿದ ಮದರಂಗಿ ಕೆಂಪಾಗಿ ಕಾಣುತ್ತಿಲ್ಲವೇ?: ಈ ಟಿಪ್ಸ್​ ಪಾಲಿಸಿದ್ರೆ, ಚರ್ಮದ ಸಮಸ್ಯೆಯಿಂದಲೂ ಮುಕ್ತಿ! - Tips For Dark Mehendi

author img

By ETV Bharat Karnataka Team

Published : Jul 17, 2024, 6:51 PM IST

Dark Mehndi Tips: ಆಷಾಢ ಮಾಸ ಬಂತು ಎಂದರೆ ಸಾಕು ಮಹಿಳೆಯರ ಕೈಗಳು ಮೆಹಂದಿಯಿಂದ ರಾರಾಜಿಸುತ್ತವೆ. ಆದರೆ, ಕೆಲವೊಮ್ಮೆ ಮದರಂಗಿ ಕೆಂಪಾಗಿ ಕಾಣುವುದಿಲ್ಲ. ಇದರಿಂದಾಗಿ ಕೈಗಳು ಸುಂದರವಾಗಿ ಕಾಣುವುದಿಲ್ಲ ಎಂಬ ಬೇಸರಕ್ಕೆ ಹೆಣ್ಮಕ್ಕಳು ಒಳಗಾಗುತ್ತಾರೆ. ಹೀಗಾಗಿ ಮೆಹಂದಿ ಕೆಂಪಾಗಲು ಕೆಲವು ಸಲಹೆಗಳನ್ನು ಪಾಲಿಸಬೇಕು ಎನ್ನುತ್ತಾರೆ ತಜ್ಞರು.

NATURAL TIPS TO DARK MEHENDI  HOW TO MAKE MEHNDI VERY DARK  TIPS FOR DARKER MEHNDI COLOUR  HOW TO DARKEN MEHNDI
ಮದರಂಗಿ (ETV Bharat)

Tips For Dark Mehendi : ಆಷಾಢ ಮಾಸದಲ್ಲಿ ಅನೇಕ ಯುವತಿಯರು ಮತ್ತು ಮಹಿಳೆಯರು ತಮ್ಮ ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳುತ್ತಾರೆ. ನಾಲ್ಕೈದು ಜನ ಸೇರಿ ಮೆಹಂದಿ ಶೇಖರಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಮೆಹಂದಿಯನ್ನು ಒಂದೊಂದು ರೂಪದಲ್ಲಿ ಕೈಗೆ ಹಚ್ಚಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ವಿವಿಧ ರೀತಿಯ ಡಿಸೈನ್​ ಅನ್ನು ಕೈಗೆ ಹಾಕಿಸಿಕೊಳ್ಳುತ್ತಿದ್ದಾರೆ.

ಇನ್ನು ಮೆಹಂದಿ ಹಚ್ಚಿಕೊಂಡ ಮರುದಿನ ಹೆಣ್ಮಕ್ಕಳು ತಮ್ಮ ಕೈಗೊಳನ್ನು ನೋಡಿಕೊಂಡಾಗ ಮೆಹಂದಿ ಕೆಂಪಾಗಿ ಇರುವುದಿಲ್ಲ. ಇದರಿಂದಾಗಿ ಅವರು ಬೇಸರ ವ್ಯಕ್ತಪಡಿಸುತ್ತಾರೆ. ಕೆಲ ಮಹಿಳೆಯರ ಕೈ ಕೆಂಪಾಗಿರುತ್ತದೆ, ಆದರೆ ಡಿಸೈನ್​ ಚೆನ್ನಾಗಿ ಮೂಡಿ ಬಂದಿರುವುದಿಲ್ಲ. ಆದರೆ ಇನ್ನು ಮುಂದೆ ಹಾಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಮೆಹಂದಿ ರೆಡಿ ಮಾಡಿಕೊಳ್ಳುವಾಗ ಈ ಟಿಪ್ಸ್ ಪಾಲಿಸಿದರೆ ಕೈ ತುಂಬಾ ಕೆಂಪಾಗುತ್ತದೆ ಎಂದು ಹೇಳುತ್ತಾರೆ ತಜ್ಞರು. ಹಾಗಾದರೆ ಆ ಸಲಹೆಗಳು ಯಾವುವು ತಿಳಿಯೋಣ.

ಮೆಹಂದಿ ಕೆಂಪಾಗಿ ಕಾಣಲು ಸಲಹೆಗಳು:

  • ಮನೆಯಲ್ಲಿ ಮೆಹಂದಿ ತಯಾರಿಸುವಾಗ ಸ್ವಲ್ಪ ಸಕ್ಕರೆ ಮತ್ತು ಎರಡು ಲವಂಗವನ್ನು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡಿರುವ ಮೆಹಂದಿಗೆ ನಾಲ್ಕರಿಂದ ಐದು ಹನಿ ನೀಲಗಿರಿ ಎಣ್ಣೆ ಸೇರಿಸಿ ಪಕ್ಕಕ್ಕೆ ಇಡಿ. ಅರ್ಧ ಗಂಟೆಯ ನಂತರ ಮೆಹಂದಿ ಕೆಂಪಾಗಿ ಮೂಡಿ ಬರುತ್ತದೆ.
  • ಕುದಿಸಿದ ಬೆಲ್ಲದ ನೀರನ್ನು ಕಾಲಕಾಲಕ್ಕೆ ಒಣಗಿದ ಮೆಹಂದಿ ಮೇಲೆ ಸುರಿಯಬೇಕು. ಹೀಗೆ ಮಾಡಿದರೆ ಕೈಗೆ ಹಚ್ಚಿದ ಮೆಹಂದಿ ಕೆಂಪಾಗಿ ಕಾಣುತ್ತದೆ.
  • ಮೆಹಂದಿ ಹಚ್ಚಿಕೊಳ್ಳುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಅದರ ನಂತರ, ಒಣ ಬಟ್ಟೆಯಿಂದ ಕೈಗಳನ್ನು ಒರೆಸಿಕೊಳ್ಳಬೇಕು.
  • ಕೈಗೆ ಹಚ್ಚಿದ ಮೆಹಂದಿಯನ್ನು 12 ಗಂಟೆಗಳ ನಂತರ ತಣ್ಣೀರಿನಿಂದ ತೊಳೆದರೆ ಅದು ಕೆಂಪಾಗುತ್ತದೆ. ಬೇಗನೆ ತೊಳೆಯುವುದರಿಂದ ಅದು ಸರಿಯಾಗಿ ಮತ್ತು ಕೆಂಪಾಗಿ ಮೂಡಿ ಬರುವುದಿಲ್ಲ ಎಂಬುದನ್ನು ನೆನಪಿಡಿ.
  • ಆದರೆ, ಕೆಲವರು ಕೈಗೆ ಹಚ್ಚಿದ ಮೆಹಂದಿ ಒಣಗಿದ ಸಾಬೂನಿನಿಂದ ಕೈ ತೊಳೆಯುತ್ತಾರೆ. ಆ ರೀತಿ ಮಾಡಬಾರದು. ಒಣಗಿದ ಮೆಹಂದಿಯನ್ನು ತೆಗೆಯಲು ಒಂದು ಕೈಯಿಂದ ಮತ್ತೊಂದು ಕೈಗೆ ಉಜ್ಜಿಕೊಳ್ಳಿ. ನಂತರ ಸ್ವಚ್ಛವಾಗಿ ತೊಳೆಯಿರಿ.
  • ಕೈಗಳ ಮೇಲೆ ಒಣಗಿದ ಮೆಹಂದಿ ತೆಗೆಯಲು ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣವನ್ನು ಹತ್ತಿ ಉಂಡೆಯಿಂದ ಕೈಗಳಿಗೆ ಹಚ್ಚಿ. ಹೀಗೆ ಮಾಡಿದರೆ ಕೈ ಕೆಂಪಗಾಗುತ್ತದೆ.
  • ಮೆಹಂದಿ ಸಂಪೂರ್ಣವಾಗಿ ತೆಗೆದ ನಂತರ ಲವಂಗದ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಕೈಗೆ ಹಚ್ಚಿದರೆ ಅದು ಕೆಂಪಾಗುವುದರ ಜೊತೆ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ.

ಮೆಹಂದಿ ಹಚ್ಚುವುದರಿಂದ ಆಗುವ ಪ್ರಯೋಜನಗಳು : ಕೈಗಳು ಚೆನ್ನಾಗಿ ಕಾಣುವಂತೆ ಮಾಡುವುದರ ಜೊತೆಗೆ ಮೆಹಂದಿ ಹಚ್ಚುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳೂ ಇವೆ ಎಂದು ತಜ್ಞರು ಹೇಳುತ್ತಾರೆ.

  • ಚರ್ಮದಲ್ಲಿನ ಕೆಲವು ಅಲರ್ಜಿಗಳು ಮತ್ತು ಸೋಂಕುಗಳನ್ನು ಕಡಿಮೆ ಮಾಡಲು ಮೆಹಂದಿ ಉಪಯುಕ್ತವಾಗಿದೆ ಎಂಬುದು ತಜ್ಞರ ಮಾತು.
  • ಮೆಹಂದಿ ಕೈಗೆ ಹಚ್ಚುವುದರಿಂದ ದೇಹದಲ್ಲಿನ ಅಧಿಕ ಉಷ್ಣತೆ ಕಡಿಮೆಯಾಗುತ್ತದೆ. 2017 ರಲ್ಲಿ 'ಜರ್ನಲ್ ಆಫ್ ಡರ್ಮಟಾಲಜಿ' ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೆಹಂದಿ ದೇಹದಲ್ಲಿನ ಅತಿಯಾದ ಶಾಖವನ್ನು ಕಡಿಮೆ ಮಾಡಲು, ಕೈಗಳನ್ನು ತಂಪಾಗಿಸಲು ಮತ್ತು ಚರ್ಮದ ಅಲರ್ಜಿಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಕಂಡು ಬಂದಿದೆ. ಚೀನಾದ ಶಾಂಘೈ ಡರ್ಮಟಾಲಜಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಯಾಂಗ್ ಜಿನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
  • ಯಾವುದೇ ಗಾಯಗಳು ಸಂಭವಿಸಿದಾಗ, ಚಿಕನ್​ ಪಾಕ್ಸ್​ ಸೋಂಕಿಗೆ ಒಳಗಾದಾಗ ದೇಹದ ಮೇಲೆ ಕಲೆಗಳು ಉಂಟಾಗುತ್ತವೆ. ಆದರೆ ಇವುಗಳನ್ನು ಹೋಗಲಾಡಿಸಲು ಮೆಹಂದಿ ಉತ್ತಮ ಔಷಧಿಯಾಗಿದೆ.
  • ದೇಹದಲ್ಲಿ ಶಾಖದ ರಚನೆಯನ್ನು ಕಡಿಮೆ ಮಾಡಲು ಮೆಹಂದಿ ಸಹಾಯ ಮಾಡುತ್ತದೆ.
  • ತಲೆನೋವು, ಹೊಟ್ಟೆನೋವು, ಸುಟ್ಟಗಾಯಗಳಂತಹ ಸಮಸ್ಯೆಗಳಿದ್ದರೆ ಆ ಜಾಗಕ್ಕೆ ಮೆಹಂದಿ ಪೇಸ್ಟ್ ಹಚ್ಚಿದರೆ ನೋವು ಕ್ರಮೇಣ ಕಡಿಮೆಯಾಗಿ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಓದಿ: ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ...? - Benefits of Oiling Hair At Night

ETV Bharat Logo

Copyright © 2024 Ushodaya Enterprises Pvt. Ltd., All Rights Reserved.