ETV Bharat / health

ಹೆಪಟೈಟಿಸ್​ನ ಕಾರಣ, ಲಕ್ಷಣಗಳೇನು? ತಡೆಗಟ್ಟುವುದು ಹೇಗೆ ? - World Hepatitis Day 2024

author img

By ETV Bharat Health Team

Published : Aug 28, 2024, 1:59 PM IST

How to prevent hepatitis?: ಹೆಪಟೈಟಿಸ್ ಕಾಯಿಲೆಯಿಂದ ಯಕೃತ್ತು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ಹೆಪಟೈಟಿಸ್​ನಿಂದ ಪ್ರತಿವರ್ಷ ಸುಮಾರು 1.3 ಮಿಲಿಯನ್ ಜನರು ಮೃತಪಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನ ಆಚರಿಸಲಾಗುತ್ತದೆ. ಹಾಗಾದರೆ, ಹೆಪಟೈಟಿಸ್ ಎಂದರೇನು? ಈ ರೋಗದ ಲಕ್ಷಣಗಳು, ಕಾರಣಗಳೇನು? ಮತ್ತು ತಡೆಗಟ್ಟುವುದು ಹೇಗೆ ಎಂಬುದರ ಕುರಿತು ತಿಳಿಯೋಣ.

WORLD HEPATITIS DAY 2024  HEPATITIS CAUSES  HEPATITIS TREATMENT
ಸಾಂದರ್ಭಿಕ ಚಿತ್ರ (CANVA)

How to prevent hepatitis?: ವಿಶ್ವ ಹೆಪಟೈಟಿಸ್ ದಿನವನ್ನು ಪ್ರತಿವರ್ಷ ಜುಲೈ 28 ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಸಾಂಕ್ರಾಮಿಕ ರೋಗವಾಗಿರುವ ಹೆಪಟೈಟಿಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ದಿನ ಆಚರಿಸಲಾಗುತ್ತದೆ. ಹೆಪಟೈಟಿಸ್‌ ಸೋಂಕಿನಿಂದ ಯಕೃತ್ತಿಗೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ಇದರಿಂದ ಪ್ರತಿವರ್ಷ ಸುಮಾರು 1.3 ಮಿಲಿಯನ್ ಜನರು ಅಸುನೀಗುತ್ತಿದ್ದಾರೆ.

ಹೆಪಟೈಟಿಸ್ ಕಾಯಿಲೆ ದೇಹದ ಅಗತ್ಯ ಅಂಗವಾದ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದು ಯಕೃತ್ತಿನ ಜೀವಕೋಶಗಳಿಗೆ ಹೆಪಟೈಟಿಸ್ ವೈರಸ್‌ ಹಾನಿ ಉಂಟು ಮಾಡುತ್ತದೆ. ಯಕೃತ್ತು ದೇಹದಲ್ಲಿ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಉದಾಹರಣೆಗೆ ದೇಹದಲ್ಲಿರುವ ವಿಷವನ್ನು ತೆಗೆದುಹಾಕುವುದು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದು ಮತ್ತು ಶಕ್ತಿಯನ್ನು ಉತ್ಪಾದಿಸುವುದು. ಆದರೆ, ಹೆಪಟೈಟಿಸ್ ಕಾರಣದಿಂದ ಯಕೃತ್ತು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಹಲವಾರು ಸಮಸ್ಯೆಗಳಿಗೆ ಕಾಡುತ್ತವೆ.

ಹೆಪಟೈಟಿಸ್ ಕಾಯಿಲೆಯಲ್ಲಿರುವ ವಿಧಗಳು: ಹೆಪಟೈಟಿಸ್​ನಲ್ಲಿ 5 ವಿಧಗಳು ಕಂಡು ಬರುತ್ತದೆ. ಹೆಪಟೈಟಿಸ್​ ಎ, ಬಿ, ಸಿ, ಡಿ ಮತ್ತು ಇ A ಮತ್ತು E ಕಾಯಿಲೆಗಳು ಇವೆ. ಇದರಲ್ಲಿ ಹೆಪಟೈಟಿಸ್ ಎ, ಇ A ಮತ್ತು E ಸಾಮಾನ್ಯವಾಗಿ ದೀರ್ಘಕಾಲದವರೆಗೆ ದೇಹದ ಮೇಲೆ ಪರಿಣಾಮ ಬೀರುವುದಿಲ್ಲ. ಇವುಗಳಿಗೆ ಸೂಕ್ತ ಚಿಕಿತ್ಸೆ ಪಡೆದರೆ, ಸ್ವಲ್ಪ ಸಮಯದ ನಂತರ ಗುಣವಾಗುತ್ತವೆ. ಆದರೆ, ಹೆಪಟೈಟಿಸ್ ಬಿ, ಸಿ ಮತ್ತು ಡಿ ವಿಧಗಳು ಹೆಚ್ಚು ಕಾಲ ಉಳಿಯಬಹುದು ಮತ್ತು ಯಕೃತ್ತಿನ ಕಾಯಿಲೆ ಅಥವಾ ಕ್ಯಾನ್ಸರ್​ಗೆ ಕಾರಣವಾಗಬಹುದು

  • ಹೆಪಟೈಟಿಸ್ ಎ: ಸಾಮಾನ್ಯವಾಗಿ ಕಲುಷಿತ ಆಹಾರ ಅಥವಾ ನೀರಿನಿಂದ ಹರಡುತ್ತದೆ.
  • ಹೆಪಟೈಟಿಸ್ ಬಿ: ಇದು ಸೋಂಕಿತ ವ್ಯಕ್ತಿಯ ರಕ್ತ, ಲಾಲಾರಸ ಅಥವಾ ಇತರ ದೇಹದ ದ್ರವಗಳ ಸಂಪರ್ಕದಿಂದ ಹರಡುತ್ತದೆ.
  • ಹೆಪಟೈಟಿಸ್ ಸಿ: ಸಾಮಾನ್ಯವಾಗಿ ಸೋಂಕಿತ ರಕ್ತದ ಸಂಪರ್ಕದಿಂದ ಹರಡುತ್ತದೆ.
  • ಹೆಪಟೈಟಿಸ್ ಡಿ: ಈ ರೋಗವು ಹೆಪಟೈಟಿಸ್ ಬಿ ಕಾಯಿಲೆಯಿಂದ ಉಂಟಾಗುತ್ತದೆ.
  • ಹೆಪಟೈಟಿಸ್ ಇ: ಈ ರೋಗವು ಕಲುಷಿತ ಆಹಾರ ಅಥವಾ ನೀರಿನ ಮೂಲಕವೂ ಹರಡುತ್ತದೆ.

ಹೆಪಟೈಟಿಸ್​ನ ಲಕ್ಷಣಗಳು:

  • ಆಯಾಸ
  • ಹಳದಿ ಕಣ್ಣುಗಳು ಮತ್ತು ಚರ್ಮ (ಕಾಮಾಲೆ)
  • ಹೊಟ್ಟೆ ನೋವು
  • ಜ್ವರ
  • ವಾಂತಿ ಅಥವಾ ವಾಕರಿಕೆ
  • ಹಸಿವು ಕಡಿಮೆಯಾಗುವುದು
  • ಕಪ್ಪು ಮೂತ್ರ
  • ತಿಳಿ ಬಣ್ಣದ ಮಲ
  • ಕೀಲುಗಳಲ್ಲಿ ನೋವು

ಹೆಪಟೈಟಿಸ್​ಗೆ ಕಾರಣಗಳೇನು?:

ವೈರಸ್​ಗಳು: ವಿವಿಧ ರೀತಿಯ ಹೆಪಟೈಟಿಸ್ ವೈರಸ್ ಯಕೃತ್ತಿನಲ್ಲಿ ಸೋಂಕು ಉಂಟು ಮಾಡುತ್ತದೆ.

ಕಲುಷಿತ ಆಹಾರ ಅಥವಾ ನೀರು: ಹೆಪಟೈಟಿಸ್ ಎ ಮತ್ತು ಇ ಕಲುಷಿತ ಆಹಾರ ಅಥವಾ ನೀರಿನ ಮೂಲಕವೂ ಹರಡಬಹುದು.

ಸೋಂಕಿತ ರಕ್ತ: ಹೆಪಟೈಟಿಸ್ ಬಿ ಮತ್ತು ಸಿ ಸಾಮಾನ್ಯವಾಗಿ ಸೋಂಕಿತ ರಕ್ತದ ಸಂಪರ್ಕದಿಂದ ಹರಡುತ್ತದೆ.

ಕಲುಷಿತ ಚುಚ್ಚುಮದ್ದು: ಕಲುಷಿತ ಚುಚ್ಚುಮದ್ದಿನೊಂದಿಗೆ ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುವ ಜನರು ಹೆಪಟೈಟಿಸ್ ಬಿ ಮತ್ತು ಸಿ ಹರಡುವ ಅಪಾಯವನ್ನು ಹೊಂದಿರುತ್ತಾರೆ.

ಅಸುರಕ್ಷಿತ ಲೈಂಗಿಕತೆ: ಹೆಪಟೈಟಿಸ್ ಬಿ ಮತ್ತು ಸಿ ಅಸುರಕ್ಷಿತ ಲೈಂಗಿಕತೆಯ ಮೂಲಕವೂ ಹರಡಬಹುದು.

ಹೆಪಟೈಟಿಸ್ ತಡೆಗಟ್ಟುವುದು ಹೇಗೆ?:

  • ಹೆಪಟೈಟಿಸ್ ಬಿ ಮತ್ತು ಸಿಗೆ ಆ್ಯಂಟಿವೈರಲ್ ಔಷಧಗಳು ಲಭ್ಯ ಇವೆ.
  • ತೀವ್ರತರವಾದ ಪ್ರಕರಣಗಳಲ್ಲಿ, ಯಕೃತ್ತಿನ ಕಸಿ ಅಗತ್ಯವಾಗಬಹುದು.
  • ಯಕೃತ್ತು ಗುಣವಾಗಲು ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ.
  • ಆರೋಗ್ಯಕರ ಆಹಾರವು ಯಕೃತ್ತನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
  • ಆಲ್ಕೋಹಾಲ್ ಯಕೃತ್ತನ್ನು ಹಾನಿಗೊಳಿಸುತ್ತದೆ. ಆಲ್ಕೋಹಾಲ್ ಅನ್ನು ತ್ಯಜಿಸುವುದು ಬಹಳ ಮುಖ್ಯ.
  • ಹೆಪಟೈಟಿಸ್ ಎ ಮತ್ತು ಬಿ ಲಸಿಕೆಗಳು ಲಭ್ಯವಿದೆ.
  • ಕಾಂಡೋಮ್‌ಗಳನ್ನು ಬಳಸುವುದರಿಂದ ಅಸುರಕ್ಷಿತ ಲೈಂಗಿಕತೆಯಿಂದ ಉಂಟಾಗುವ ಸೋಂಕನ್ನು ತಡೆಯಬಹುದು.
  • ಯಾವಾಗಲೂ ನೈರ್ಮಲ್ಯವನ್ನು ಕಾಯ್ದುಕೊಳ್ಳಿ ಮತ್ತು ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.