ETV Bharat / health

ನೀವು ವಿಷಕಾರಿ ಜ್ವರದಿಂದ ಬಳಲುತ್ತಿದ್ದೀರಾ? ಈ ಔಷಧ ಮನೆಯಲ್ಲೇ ಸಿದ್ಧಪಡಿಸಿ ಕುಡಿದರೆ ಸಾಕು ಬೇಗ ಕಡಿಮೆಯಾಗುತ್ತೆ - Fever Treatment in Ayurveda - FEVER TREATMENT IN AYURVEDA

Fever Treatment in Ayurveda: ನೀವು ವಿಷಕಾರಿ ಜ್ವರದಿಂದ ಬಳಲುತ್ತಿದ್ದೀರಾ? ಆಯುರ್ವೇದ ವಿಧಾನದಲ್ಲಿ ಸಿದ್ಧಪಡಿಸಿದ ಈ ಔಷಧಿಯನ್ನು ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ವೈದ್ಯರು, ತಜ್ಞರು. ಈ ಔಷಧ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ತಯಾರಿಕಾ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

FEVER TREATMENT IN AYURVEDA  FEVER REMEDY IN AYURVEDA  VIRAL FEVER MEDICINE IN AYURVEDA  FEVER CURE IN AYURVEDA
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Aug 28, 2024, 11:07 AM IST

Fever Treatment in Ayurveda: ಮಳೆಗಾಲ ಬಂತೆಂದರೆ ಸಾಕು, ಋತುಮಾನಕ್ಕೆ ತಕ್ಕಂತೆ ಕೆಲವು ರೋಗಗಳು ನಮ್ಮನ್ನು ಕಾಡುತ್ತವೆ. ಡೆಂಗ್ಯೂ, ಮಲೇರಿಯ, ವೈರಲ್​ ಸೇರಿದಂತೆ ವಿವಿಧ ಜ್ವರಗಳಿಗೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ತುತ್ತಾಗುತ್ತಾರೆ. ಇಂತಹ ಜ್ವರಗಳನ್ನು ಕೇವಲ ಇಂಗ್ಲಿಷ್ ಔಷಧಿಗಳಲ್ಲದೇ ಆಯುರ್ವೇದ ಔಷಧದ ವಿಧಾನಗಳಿಂದಲೂ ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.

ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದಲೇ ಸುಲಭವಾಗಿ ಔಷಧವನ್ನು ತಯಾರಿಸಬಹುದು ಎಂದು ಖ್ಯಾತ ಆಯುರ್ವೇದ ತಜ್ಞೆ ಡಾ.ಗಾಯತ್ರಿದೇವಿ ತಿಳಿಸುತ್ತಾರೆ. ಈ ಮನೆಮದ್ದು ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳು ಯಾವವು? ಈ ಔಷಧ ಉತ್ಪಾದಿಸಿವುದು ಹೇಗೆ ತಿಳಿಯೋಣ.

ಬೇಕಾಗುವ ಪದಾರ್ಥಗಳು:

  • 50 ಗ್ರಾಂ ನೆಲ ವೇಮು ಪುಡಿ
  • 50 ಗ್ರಾಂ ಬೇವಿನ ಪುಡಿ
  • 50 ಗ್ರಾಂ ತುಳಸಿ ಪುಡಿ (ಎಲೆಗಳು, ಕಾಂಡಗಳು)
  • 50 ಗ್ರಾಂ ತಿಪ್ಪೆಟಿಗ ಪುಡಿ
  • 50 ಗ್ರಾಂ ಪುನರ್ನವ ಚೂರ್ಣ

ಉತ್ಪಾದನಾ ಪ್ರಕ್ರಿಯೆ:

  • ಮೊದಲು ಒಲೆ ಹೊತ್ತಿಸಿ ಕಡಾಯಿಯನ್ನು ಇಡಿ. ಅದರಲ್ಲಿ ಒಂದು ಲೋಟ ನೀರು ಹಾಕಿ ಕುದಿಯಲು ಬಿಡಿ.
  • ನೀರು ಬಿಸಿಮಾಡುವ ಮುನ್ನ ಔಷಧ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ ಮಿಶ್ರಣ ಮಾಡಬೇಕು.
  • ನಂತರ ಕುದಿಯುವ ನೀರಿಗೆ ಮೊದಲು ಮಿಶ್ರಣ ಮಾಡಿಟ್ಟ ಔಷಧ ಪದಾರ್ಥಗಳನ್ನು ಒಂದು ಚಮಚದಷ್ಟು ಸೇರಿಸಿ.
  • ಅದರ ನಂತರ, ಮಧ್ಯಮ ಉರಿಯಲ್ಲಿ ಉಳಿದ ಔಷಧ ಪದಾರ್ಥಗಳನ್ನು ನಿಧಾನವಾಗಿ ಮಿಶ್ರಣ ಮಾಡಿ ಮತ್ತು ಎರಡು ನಿಮಿಷಗಳ ನಂತರ ಒಲೆಯನ್ನು ಆಪ್​ ಮಾಡಿ
  • ಆ ನಂತರ ಜರಡಿಯಿಂದ ಸೋಸಿ ಪಕ್ಕಕ್ಕಿಟ್ಟರೆ ಔಷಧ ರೆಡಿಯಾಗುತ್ತದೆ.
  • ಜ್ವರದಿಂದ ಬಳಲುತ್ತಿರುವವರು ಯಾವಾಗಲೂ ಈ ಔಷಧವನ್ನು ಬೆಚ್ಚಗಿನ ನೀರಿನಿಂದ ಸೇವಿಸಬೇಕು. 40ರಿಂದ 50 ಮಿಲಿ ದಿನಕ್ಕೆ 3 ಬಾರಿ ತೆಗೆದುಕೊಳ್ಳಬೇಕು.
  • ಜ್ವರದ ಆರಂಭಿಕ ಹಂತದಲ್ಲೇ ಬೆಳಗ್ಗೆ ಮತ್ತು ರಾತ್ರಿ 30 ಮಿಲಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.
  • ಇಂಗ್ಲಿಷ್ ಔಷಧ ಬಳಸುವವರು ಈ ಆಯುರ್ವೇದದ ಮದ್ದನ್ನು ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು, ನಂತರ ಮಾತ್ರ ಸೇವಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.

ನೆಲ ವೇಮು ಪುಡಿ: ಅದರಲ್ಲೂ ಮಳೆಗಾಲದಲ್ಲಿ ಬರುವ ವಿಷಕಾರಿ ಜ್ವರಗಳಿಗೆ ನೆಲ ವೇಮು ಪುಡಿಯು ಜ್ವರ ಕಡಿಮೆ ಮಾಡಲು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ಬೇವಿನ ಪುಡಿ: ಬೇವಿನ ಮರದ ಎಲೆಗಳು ಕಹಿಯಾಗಿದ್ದರೂ ಜ್ವರ ಕಡಿಮೆ ಮಾಡಲು ಉಪಯುಕ್ತವಾಗಿದೆ.

ತುಳಸಿ: ಆಯುರ್ವೇದದಲ್ಲಿ ತುಳಸಿ ಗಿಡವನ್ನು ಅನೇಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವೈರಲ್ ಸೋಂಕು ಮತ್ತು ವಿವಿಧ ರೀತಿಯ ಜ್ವರವನ್ನು ಕಡಿಮೆ ಮಾಡಲು ತುಳಸಿ ತುಂಬಾ ಸಹಾಯಕವಾಗಿದೆ ಎಂದು ವೈದ್ಯರು ವಿವರಿಸುತ್ತಾರೆ.

ತಿಪ್ಪೆಟಿಗ ಪುಡಿ (thippatheega): ಇತ್ತೀಚಿನ ದಿನಗಳಲ್ಲಿ ತಿಪ್ಪೆಟಿಗ ಪುಡಿ ಬಳಕೆ ಸಾಕಷ್ಟು ಹೆಚ್ಚಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ವೈರಲ್ ಸೋಂಕು ಮತ್ತು ಜ್ವರವನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.

ಪುನರ್ನವ ಚೂರ್ಣ: ಪುನರ್ನವ ಚೂರ್ಣ ಸೋಂಕುಗಳಿಗೆ ಸಂಬಂಧಿಸಿದ ಕಲ್ಮಶಗಳನ್ನು ಹೊರಹಾಕುವ ಗುಣವಿದೆ ಎಂದು ವೈದ್ಯರು ಹೇಳುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.