ETV Bharat / health

ಬೇಸಿಗೆ ವಿಶೇಷ ಮೊಸರು ಚಟ್ನಿ ತಯಾರಿಸುವುದು ಸುಲಭ; ಇದು ಆರೋಗ್ಯಕ್ಕೆ ಬೋನಸ್ ಜೊತೆಗೆ ಟೇಸ್ಟಿ - summer special curd chutneys

Special Curd Chutneys : ಬೇಸಿಗೆ ಕಾಲವೆಂದ್ರೆ ಸಾಕು ಎಲ್ಲರಿಗೂ ಮೊದಲು ನೆನಪಾಗುವುದು ಉಪ್ಪಿನಕಾಯಿ. ಪ್ರತಿ ಮನೆಯಲ್ಲಿಯೂ ಉಪ್ಪಿನಕಾಯಿ ಹಾಕುವುದು ಸಾಮಾನ್ಯ. ಬರೀ ಉಪ್ಪಿನಕಾಯಿ ಮಾತ್ರವಲ್ಲ, ಈ ಬೇಸಿಗೆಯಿಂದ ರಿಲೀಫ್​ಗೋಸ್ಕರ ಮೊಸರಿನ ಜೊತೆ ಅದ್ಭುತವಾದ ಚಟ್ನಿಗಳನ್ನೂ ಸಹ ಮಾಡಬಹುದಾಗಿದೆ. ಅದಕ್ಕಾಗಿಯೇ ನಾವು ಮೊಸರಿನಿಂದ ತಯಾರಿಸಿದ ವಿಶೇಷ ಚಟ್ನಿ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ..

CURD CHUTNEY RECIPES  GOOD HEALTH  CHUTNEY RECIPES IN SUMMER
ಬೇಸಿಗೆ ವಿಶೇಷ ಮೊಸರು ಚಟ್ನಿ ತಯಾರಿಸುವುದು ಸುಲಭ, (ಸಾಂದರ್ಭಿಕ ಚಿತ್ರ (ETV Bharat))
author img

By ETV Bharat Karnataka Team

Published : May 8, 2024, 5:51 PM IST

Summer Special Curd Chutneys : ಬೇಸಿಗೆಯಲ್ಲಿ ಅನೇಕರು ಮಸಾಲೆ ಕರಿಗಳನ್ನು ಕಡಿಮೆ ತಿನ್ನುತ್ತಾರೆ ಮತ್ತು ಹೆಚ್ಚು ಮೊಸರು ಸೇವಿಸುತ್ತಾರೆ. ಮೊಸರಿನಲ್ಲಿ ಪೌಷ್ಟಿಕಾಂಶದ ಮೌಲ್ಯದ ಹೊರತಾಗಿಯೂ, ಕೆಲವರು ಮೊಸರನ್ನು ಮಾತ್ರ ತಿನ್ನಬೇಕಾದರೆ ಹಿಂದೇಟು ಹಾಕುತ್ತಾರೆ. ಅಂತಹವರಿಗೆ ಈ ಮೊಸರು ಚಟ್ನಿ ಸೂಪರ್ ಆಪ್ಷನ್. ಇದನ್ನು ಸೇವಿಸುವುದರಿಂದ ಅವರಿಗೆ ಕೊಂಚ ಬೇಸಿಗೆಯಿಂದ ರಿಲೀಫ್​ ಸಿಗಬಹುದು. ಈಗ ಅವುಗಳನ್ನು ಹೇಗೆ ಮಾಡಬಹುದೆಂಬುದನ್ನು ನೋಡೋಣ..

ಮಾವಿನಕಾಯಿ ಮೊಸರು ಚಟ್ನಿಗೆ ಬೇಕಾಗುವ ಪದಾರ್ಥಗಳು: ಮೊಸರು - ಒಂದೂವರೆ ಕಪ್, ಮಾವು - ಒಂದು, ಮೆಣಸಿನಕಾಯಿ - ಸ್ವಲ್ಪ, ಸಣ್ಣ ಈರುಳ್ಳಿ - 4 (ಸಣ್ಣದಾಗಿ ಕಟ್​ ಮಾಡಿಕೊಳ್ಳಿ), ಅರಿಶಿನ - ಕಾಲು ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಸಾಸಿವೆ - 1/4 ಚಮಚ, ಉದ್ದಿನಬೇಳೆ- 1 ಚಮಚ, ಇಂಗು - ಅರ್ಧ ಚಮಚ, ಕರಿಬೇವಿನ ಎಲೆಗಳು - ಸ್ವಲ್ಪ ಪ್ರಮಾಣ, ಕರಿಮೆಣಸು - 2, ಎಣ್ಣೆ - ಬೇಕಾಗುವಷ್ಟು, ಕೊತ್ತಂಬರಿ - ಸ್ವಲ್ಪ..

ತಯಾರಿಸುವ ವಿಧಾನ: ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ನಂತರ ಸಾಸಿವೆ ಹಾಕಿ.

ನಂತರ ಉದ್ದಿನಬೇಳೆ, ಇಂಗು, ಕರಿಮೆಣಸು, ಕರಿಬೇವು, ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಸ್ವಲ್ಪ ಹುರಿಯಿರಿ.

ಈಗ ಮಾವಿನ ತುಂಡುಗಳು ಮತ್ತು ಅರಿಶಿನ ಸೇರಿಸಿ ಮಿಶ್ರಣಮಾಡಿ. ಬಳಿಕ ಮೂರು ನಿಮಿಷಗಳ ಕಾಲ ಫ್ರೈ ಮಾಡಿ.

ನಂತರ ಅದಕ್ಕೆ ಬೇಕಾದಷ್ಟು ಉಪ್ಪು ಹಾಕಿ ಉರಿಯನ್ನು ಕಡಿಮೆ ಮಾಡಿ.

ಈಗ ಮೊಸರು ಮತ್ತು ಸ್ವಲ್ಪ ನೀರು ಸೇರಿಸಿ ಸ್ಟೌವ್ ಆಫ್ ಮಾಡಿ. ಕೊನೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ. ಅಷ್ಟೇ.. ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಮೊಸರು ರೆಡಿ!

ಸೋರೆಕಾಯಿ ಮೊಸರು ಚಟ್ನಿಗೆ ಬೇಕಾಗುವ ಪದಾರ್ಥಗಳು: ತುಂಡಾಗಿ ಕತ್ತರಿಸಿರುವ ಸೋರೆಕಾಯಿ - 1 ಕಪ್, ಮೊಸರು - ಎರಡು ಕಪ್, ಈರುಳ್ಳಿ - ಒಂದು, ಮೆಣಸಿನಕಾಯಿ - ಎರಡು, ಕರಿಬೇವಿನ ಎಲೆಗಳು - ಸ್ವಲ್ಪ ಪ್ರಮಾಣ, ಕರಿಮೆಣಸು - ಎರಡು, ಉಪ್ಪು - ರುಚಿಗೆ ತಕ್ಕಷ್ಟು, ಅರಿಶಿನ - ಕಾಲು ಚಮಚ, ಮಸಾಲೆ - 1 ಚಮಚ, ಜೀರಿಗೆ - 1 ಚಮಚ, ಎಣ್ಣೆ - ಬೇಕಾಗುವಷ್ಟು, ಸಾಸಿವೆ - ಚಮಚ, ಕೊತ್ತಂಬರಿ - ಸ್ವಲ್ಪ,

ತಯಾರಿಸುವ ವಿಧಾನ: ಸೋರೆಕಾಯಿ ತುಂಡುಗಳನ್ನು ಕುಕ್ಕರ್‌ನಲ್ಲಿ ಹಾಕಿ ಒಂದು ಸೀಟಿ ಆಗುವವರೆಗೆ ಬೇಯಿಸಿ ಪಕ್ಕಕ್ಕೆ ಇಡಿ.

ಈಗ ಇನ್ನೊಂದು ಪಾತ್ರೆಯಲ್ಲಿ ಗಟ್ಟಿಯಾದ ಮೊಸರನ್ನು ತೆಗೆದುಕೊಳ್ಳಿ. ಅದಕ್ಕೆ ಬೇಕಾದಷ್ಟು ಉಪ್ಪು, ಅರಿಶಿನ, ಬೇಯಿಸಿದ ಸೋರೆಕಾಯಿ ತುಂಡುಗಳು, ಶುಂಠಿ ಪೇಸ್ಟ್, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ.

ಅದರ ನಂತರ ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಅದು ಬಿಸಿಯಾದಾಗ ಸಾಸಿವೆ, ಜೀರಿಗೆ, ಕರಿಮೆಣಸು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ. ನಂತರ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ.

ಎರಡು ನಿಮಿಷಗಳ ನಂತರ ಸ್ಟೌವ್ ಆಫ್ ಮಾಡಿ. ಪಕ್ಕಕ್ಕೆ ಇಟ್ಟಿದ್ದ ಸೋರೆಕಾಯಿ ಮಿಶ್ರಣಕ್ಕೆ ಫ್ರೈ ಮಾಡಿದ್ದ ಪದಾರ್ಥವನ್ನು ಸೇರಿಸಿ. ನಂತರ ಮೊಸರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಅಷ್ಟೇ.. ಟೇಸ್ಟಿ ಸೋರೆಕಾಯಿ ಮೊಸರು ಚಟ್ನಿ ರೆಡಿ!

ಸೌತೆಕಾಯಿ ಮೊಸರು ಚಟ್ನಿಗೆ ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ, ಈರುಳ್ಳಿ, ಮೊಸರು, ಹಸಿಮೆಣಸಿನಕಾಯಿ, ಜೀರಿಗೆ, ಶುಂಠಿ ಪೇಸ್ಟ್, ಪುದಿನಾ ಪೇಸ್ಟ್, ಕ್ಯಾರೆಟ್ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು..

ತಯಾರಿಸುವ ವಿಧಾನ:

ಮೊದಲು ಸೌತೆಕಾಯಿ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ತೆಳುವಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.

ಅದರ ನಂತರ, ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು ಮಂದ ಆಗುವವರೆಗೂ ಚೆನ್ನಾಗಿ ಕಡಿಯಬೇಕು..

ನಂತರ ಮೊಸರಿಗೆ ಸೌತೆಕಾಯಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಅದರ ನಂತರ ಶುಂಠಿ, ಕ್ಯಾರೆಟ್, ಪುದಿನಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಅದೇ ರೀತಿ ಜೀರಿಗೆ ಹಾಕಿ ಚೆನ್ನಾಗಿ ಕಲಸಿ. ಅಷ್ಟೇ.. ರುಚಿಕರವಾದ ಸೌತೆಕಾಯಿ ಮೊಸರು ಚಟ್ನಿ ರೆಡಿ

ಓದಿ: ಇದು ನಿಮಗೆ ಗೊತ್ತಾ?, ಬೆಲ್ಲದಲ್ಲಿವೆ ನಾನಾ ವಿಧ: ನಿತ್ಯ ಬೆಲ್ಲ ತಿನ್ನಲು ಹೇಳುವುದೇಕೆ?, ಉತ್ತಮ ಆರೋಗ್ಯಕ್ಕಿದು ಅತ್ಯಗತ್ಯ - Jaggery Health Benefits

ETV Bharat Logo

Copyright © 2024 Ushodaya Enterprises Pvt. Ltd., All Rights Reserved.