ETV Bharat / health

ಮಕ್ಕಳಿಗೆ ರೋಟೊವೈರಸ್​ ಲಸಿಕೆ ಸುರಕ್ಷಿತ: ಅಧ್ಯಯನ ವರದಿ - Rotavirus Vaccine

ನವಜಾತ ಶಿಶುಗಳು ಮತ್ತು ಸಣ್ಣ ಮಕ್ಕಳನ್ನು ಕಾಡುವ ಅತಿಸಾರ ಸಮಸ್ಯೆ ನಿರ್ವಹಣೆಯಲ್ಲಿ ರೋಟೊವೈರಸ್​​ ಪ್ರಮುಖವಾಗಿದೆ.

author img

By ETV Bharat Karnataka Team

Published : May 3, 2024, 3:56 PM IST

rotavirus vaccine to babies in the neonatal intensive care units is safe
rotavirus vaccine to babies in the neonatal intensive care units is safe (IANS)

ನವದೆಹಲಿ: ನವಜಾತ ಶಿಶುಗಳನ್ನು ಬಾಧಿಸುವ ಅತಿಸಾರ ತೊಂದರೆಗೆ ರೋಟೊವೈರಸ್​​ ಲಸಿಕೆ ನೀಡುವುದು ಸುರಕ್ಷಿತ. ಇದು ಯಾವುದೇ ಇತರೆ ರೋಗಕ್ಕೆ ಕಾರಣವಾಗುವುದಿಲ್ಲ ಎಂದು ತಿಳಿದು ಬಂದಿದೆ. ಈ ಲಸಿಕೆಯು ವೈರಸನ್ನು ದುರ್ಬಲಗೊಳಿಸಿ, ಪ್ರತಿರಕ್ಷಣೆ ಬಲಗೊಳಿಸುತ್ತದೆ.

ಅಮೆರಿಕದ ಫಿಲಡೆಲ್ಫಿಯಾ ಮಕ್ಕಳ ಆಸ್ಪತ್ರೆಯ ಸಂಶೋಧಕರ ಪ್ರಕಾರ, ಅಮೆರಿಕದಲ್ಲಿ ಅಕಾಲಿಕವಾಗಿ ಜನಿಸಿದ ಮಕ್ಕಳನ್ನು ಎನ್​ಐಸಿಯುನಲ್ಲಿ ಇಡಲಾಗುತ್ತದೆ. ಈ ವೇಳೆ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಆದರೆ, ಈ ವೈರಸ್​​ಗಳನ್ನು ತಡೆಯಬಹುದು. ಕೆಲವರು ವೈರಸ್​​ ಪ್ರಸರಣ ಭಯದ ಮೇಲೆ ಲಸಿಕೆ ಸ್ವೀಕರಿಸುತ್ತಾರೆ. ಇದನ್ನು ಅರ್ಥೈಸಿಕೊಳ್ಳುವುದಕ್ಕೆ ಸಂಶೋಧಕರು 2021ರ ಜನವರಿಯಿಂದ 2022ರ ಜನವರಿವರೆಗೆ 774 ರೋಗಿಗಳ 3,448 ವಾರದ ಸ್ಯಾಂಪಲ್​ ಪಡೆದಿದ್ದಾರೆ. ಶೇ.99.3ರಷ್ಟು ಲಸಿಕೆ ಹಾಕದ ರೋಗಿಗಳಿಗೆ ರೋಗದ ಕುರಿತು ಪಾಸಿಟಿವ್​​ ಬಂದಿಲ್ಲ. ರೋಟೊವೈರಸ್ ಲಸಿಕೆ ಹಾಕದ ರೋಗಿಗಳಿಗೆ 14 ದಿನಗಳ ನಂತರ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಸಲಹೆಯಂತೆ ರೋಟೊ ವೈರಸ್​​ ವಿರುದ್ಧ ಎನ್​ಐಸಿಯು ರೋಗಿಗಳಿಗೆ ಲಸಿಕೆ ಹಾಕುವುದು ಹೆಚ್ಚಿನ ಅಪಾಯ ತಪ್ಪಿಸಲು ಪ್ರಯೋಜನಕಾರಿಯಾಗಿದೆ ಎಂದು ಫಿಲಿಡೆಲ್ಫಿಯಾದ ನವಜಾತ ಶಿಶುಗಳ ತಜ್ಞರಾದ ಕಥಲೀನ್​ ಗಿಬ್ಸ್​​ ಹೇಳಿದ್ದಾರೆ.

ಕೆನಡಾದ ಟೊರೊಂಟೊದಲ್ಲಿ ನಡೆಯುತ್ತಿರುವ ಪೀಡಿಯಾಟ್ರಿಕ್ ಅಕಾಡೆಮಿಕ್ ಸೊಸೈಟೀಸ್ 2024 ಸಮಾವೇಶದಲ್ಲಿ ಈ ಅಧ್ಯಯನ ವರದಿಯನ್ನು ಮಂಡಿಸಲಾಗಿದೆ.(ಐಎಎನ್​ಎಸ್​)

ಇದನ್ನೂ ಓದಿ: ಅತಿಸಾರದಿಂದ ಮಕ್ಕಳನ್ನು ರಕ್ಷಿಸಿ: ಇದರ ನಿಯಂತ್ರಣಕ್ಕೆ ಅರಿವು ಅಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.