ETV Bharat / health

ಆಲ್ಕೋಹಾಲ್​ ಅತಿಯಾದ ಸೇವನೆಯಿಂದ ವಾಂತಿ ಆಗಲು ಕಾರಣ ಏನು?: ಅಚ್ಚರಿಯ ಸತ್ಯ ಬಿಚ್ಚಿಟ್ಟ ಅಧ್ಯಯನ! - Vomit After Drinking Alcohol

author img

By ETV Bharat Karnataka Team

Published : Jun 20, 2024, 11:16 AM IST

ಸಾಮಾನ್ಯವಾಗಿ ಆಲ್ಕೋಹಾಲ್​ ಸೇವನೆಯಿಂದಾಗಿ ಎರಡು ರೀತಿಯ ಪರಿಣಾಮ ಎದುರಿಸುವುದನ್ನು ಕಾಣಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಈ ರೀತಿ ಯಾಕೆ ಆಗುತ್ತದೆ. ಇದರ ಹಿಂದಿನ ಕಾರಣ ಏನು ಎಂಬ ಕುರಿತ ಮಾಹಿತಿ ಇಲ್ಲಿದೆ.

some people vomit after Drinking Alcohol what is the reason
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಹೈದರಾಬಾದ್​: ಆಲ್ಕೋಹಾಲ್​ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬ ಕುರಿತು ಎಷ್ಟೇ ಜಾಹೀರಾತು ನೀಡಿದರೂ ಕುಡಿಯುವವರ ಸಂಖ್ಯೆ ಮಾತ್ರ ಕಡಿಮೆ ಆಗುವ ಬದಲು ಏರಿಕೆಯಾಗುತ್ತಲೇ ಇದೆ. ಇದು ಅವರ ಅನಾರೋಗ್ಯಕ್ಕೂ ಕೂಡ ಕಾರಣವಾಗುತ್ತದೆ. ಆದಾಗ್ಯೂ, ಕೆಲವು ಜನರು ಕುಡಿತದ ಆರಂಭದಲ್ಲಿ ವಾಂತಿಯ ಸಮಸ್ಯೆಗೆ ಒಳಗಾಗುತ್ತಾರೆ.

ಸಾಮಾನ್ಯವಾಗಿ ಆಲ್ಕೋಹಾಲ್​ ಸೇವನೆಯಿಂದಾಗಿ ಎರಡು ರೀತಿಯ ಪರಿಣಾಮಗಳನ್ನು ಕಾಣಬಹುದು ಎಂದು ತಜ್ಞರು ತಿಳಿಸುತ್ತಾರೆ. ಅದರಲ್ಲಿ ಒಂದು ಕುಡಿದ ವ್ಯಕ್ತಿ ಅನುಭವಿಸುವ ಮಾನಸಿಕ ನೆಮ್ಮದಿ ಒಂದೆಡೆಯಾದರೆ, ದೇಹದಲ್ಲಿ ಆಗುವ ಬದಲಾವಣೆಗಳು ಇನ್ನೊಂದು ರೀತಿ ಇರುತ್ತದೆ ಎನ್ನುತ್ತಾರೆ. ಕುಡಿತದ ಸಮಯ ಮತ್ತು ಬಳಿಕ ಅಮಲು ಮತ್ತು ನೆಮ್ಮದಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಅವರು ಹಿಂಜರಿಕೆ ಇಲ್ಲದೇ ವರ್ತನೆ ತೋರುತ್ತಾರೆ. ಅವರ ಸಂತೋಷಕ್ಕೆ ಒಂದು ರೀತಿ ಸ್ವಾತಂತ್ರ್ಯ ಲಭ್ಯವಾಗುತ್ತದೆ. ಚೆನ್ನಾಗಿದೆ ಎಂದು ಅತಿಯಾಗಿ ಕುಡಿದರೆ, ಅದು ಮಾತು ತೊದಲುವಿಕೆ, ಕಣ್ಣು ಮಂಜು ಮತ್ತು ಕಿವಿ ಕೇಳುವಿಕೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಂತಿ ಕೂಡ ಸಂಭವಿಸುತ್ತದೆ. ಆಲ್ಕೋಹಾಲ್​ ಸೇವಿಸಿದ ಬಳಿಕ ವಾಂತಿ ಆಗಲು ಹಲವು ಕಾರಣವಿದೆ. ಅದರಲ್ಲಿ ಒಂದು ಹೀಗಿದೆ.

ಆಲ್ಕೋಹಾಲ್ ಸೇವಿಸಿದ ಬಳಿಕ ಜೀರ್ಣಾಂಗ ವ್ಯವಸ್ಥೆಯಲ್ಲಿನ ಕಿಣ್ವಗಳು ಅದನ್ನು ಅಸಿಟಾಲ್ಡಿಹೈಡ್ ಆಗಿ ಪರಿವರ್ತಿಸಲು ಕೆಲಸ ಮಾಡುತ್ತವೆ. ಅಸಿಟಾಲ್ಡಿಹೈಡ್ ಒಂದು ವಿಷಕಾರಿ ವಸ್ತುವಾಗಿದೆ. ಇದು ಯಕೃತ್ತಿನಿಂದ ಒಡೆಯುತ್ತದೆ. ಆದರೂ, ಯಕೃತ್ತು ಈ ಅಸಿಟಾಲ್ಡಿಹೈಡ್ ಅನ್ನು ಸ್ವಲ್ಪ ಮಟ್ಟಿಗೆ ಮಾತ್ರ ಹೀರಿಕೊಳ್ಳುತ್ತದೆ. ಅತಿಯಾದ ಕುಡಿತವನ್ನು ಯಕೃತ ಅನ್ನು ಪ್ರಕ್ರಿಯೆಗೊಳಿಸಲು ವಿಫಲವಾಗುತ್ತದೆ. ಇದರಿಂದ ದೇಹದಲ್ಲಿ ಅಸಿಟಾಲ್ಡಿಹೈಡ್ ಶೇಖರಣೆಯಾಗಿ, ಲಿವರ್ ಮೇಲೆ ಒತ್ತಡ ಹೆಚ್ಚುತ್ತದೆ. ಇದು ದೇಹದ ಅಂಗಾಂಗದ ಮೇಲೆ ಪರಿಣಾಮ ಬೀರುತ್ತದೆ. ಈ ವೇಳೆ ಯಕೃತ್​ ಜಾಗೃತವಾಗುತ್ತದೆ. ಆಗ ವಿಷಕಾರಿ ಅಂಶವನ್ನು ವಾಂತಿ ಮೂಲಕ ಹೊರ ಹಾಕುತ್ತದೆ. ಇದೇ ಕಾರಣದಿಂದ ತಜ್ಞರು ಅತಿಯಾದ ಮದ್ಯ ಸೇವನೆ ವಾಂತಿಗೆ ಕಾರಣವಾಗುತ್ತದೆ ಎನ್ನುತ್ತಾರೆ. ಈ ರೀತಿ ಆದಾಗ ಅತಿ ಹೆಚ್ಚು ನೀರು ಸೇವಿಸಬೇಕು. ಈ ಸಂದರ್ಭದಲ್ಲಿ ದೇಹ ನೀರನ್ನು ಹೆಚ್ಚು ಕಳೆದುಕೊಳ್ಳುತ್ತದೆ. ವಾಂತಿ ಬಳಿಕೆ ದೇಹ ನಿರ್ಜಲೀಕರಣದಿಂದ ಬಳಲುತ್ತದೆ.

2020ರಲ್ಲಿ ಅಮೆರಿಕನ್​ ಜರ್ನಲ್​ ಆಫ್​ ಗ್ಯಾಸ್ಟ್ರೊಎಟರ್ನೊಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಅತಿಯಾದ ಆಲ್ಕೋಹಾಲ್ ಕುಡಿಯುವುದರಿಂದ ದೇಹದಲ್ಲಿ ಅಸೆಟಾಲ್ಡಿಹೈಡ್ ಎಂಬ ವಿಷಕಾರಿ ವಸ್ತು ಸಂಗ್ರಹವಾಗುತ್ತದೆ. ಇದು ವಾಂತಿ, ವಾಕರಿಕೆ, ತಲೆತಿರುಗುವಿಕೆ ಮುಂತಾದ ಅಹಿತಕರ ಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಶೋಧನೆಯಲ್ಲಿ ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಬ್ರಿಯಾನ್ ಹೊ ಭಾಗಿಯಾಗಿದ್ದಾರೆ. ಅತಿಯಾಗಿ ಆಲ್ಕೋಹಾಲ್ ಸೇವಿಸಿದಾಗ, ದೇಹದಲ್ಲಿ ಸಂಗ್ರಹವಾದ ಅಸಿಟಾಲ್ಡಿಹೈಡ್ ವಾಂತಿ ರೂಪದಲ್ಲಿ ಹೊರ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಹೊರತಾಗಿ ತಜ್ಞರು ಹೇಳುವಂತೆ, ಬೇಗವಾಗಿ ಆಲ್ಜೋಹಾಲ್​ ಸೇವನೆ ಅಥವಾ ಔಷಧಗಳೊಂದಿಗೆ ಇದರ ಸೇವನೆ ಕೂಡ ವಾಂತಿಗೆ ಕಾರಣವಾಗುತ್ತದೆ. ಹಾಗೇ ಆಲ್ಕೋಹಾಲ್ ಜೀರ್ಣಾಂಗವ್ಯೂಹದ ಒಳಪದರ ಮೇಲೆ ಪರಿಣಾಮ ಬೀರುವುದರಿಂದ ಕೂಡ ವಾಂತಿಯೂ ಆಗುತ್ತದೆ ಎನ್ನಲಾಗಿದೆ. ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಸಾಮಾನ್ಯ. ಕಾರಣಗಳು ಏನೇ ಇರಲಿ, ಹೆಚ್ಚು ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ವೈದ್ಯರು ತಿಳಿಸುತ್ತಾರೆ.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ 33 ಮಂದಿ ದುರ್ಮರಣ : 20 ಜನರ ಸ್ಥಿತಿ ಚಿಂತಾಜನಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.