ನವದೆಹಲಿ: ಭಾರತದಲ್ಲಿ ಐದು ವರ್ಷದೊಳಗಿನ ಪ್ರತಿ 10 ಮಕ್ಕಳಲ್ಲಿ ಆರು ಮಕ್ಕಳು ಸೂಕ್ಷ್ಮ ಪೋಷಕಾಂಶ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೇ 10ರಲ್ಲಿ 4 ಮಕ್ಕಳು ರಕ್ತಹೀನತೆ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸಂಶೋಧನೆ ನಡೆಸಿದೆ.
ಸಮಗ್ರ ರಾಷ್ಟ್ರೀಯ ಪೋಷಣೆ ಸಮೀಕ್ಷೆ (ಸಿಎನ್ಎಸ್ಎಸ್) 2018ರ ಅಧ್ಯಯನ ಆಧರಿಸಿದ ಈ ಸಂಶೋಧನೆ ನಡೆಸಲಾಗಿದೆ. ಭಾರತದಲ್ಲಿ 12 ರಿಂದ 59 ತಿಂಗಳ ಮಕ್ಕಳಲ್ಲಿ ರಕ್ತ ಹೀನತೆ, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ವಿಟಮಿನ್ ಬಿ12, ಫೋಲಿಕ್ ಆಸಿಡ್ ಕೊರತೆಯನ್ನು ಅಂದಾಜಿಸುವ ಗುರಿಯನ್ನು ಹೊಂದಲಾಗಿದೆ.
11,237 ಮಕ್ಕಳ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ ಶೇ 40.5ರಷ್ಟು ಮಕ್ಕಳು ರಕ್ತಹೀನತೆ, 30.0 ರಷ್ಟು ರಕ್ತ ಹೀನತೆ ಕೊತೆಗೆ ಸೂಕ್ಷ್ಮ ಪೌಷ್ಠಿಕಾಂಶ ಕೊರತೆ ಮತ್ತು 60.9ರಷ್ಟು ಸೂಕ್ಷ್ಮ ಪೋಷಕಾಂಶದ ಕೊರತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.
ಕಡಿಮೆ ಶೈಕ್ಷಣಿಕ ಮಟ್ಟ ಹೊಂದಿರುವ ತಾಯಂದಿರು ಗರ್ಭಾವಸ್ಥೆಯಲ್ಲಿ 100ಕ್ಕಿಂತ ಕಬ್ಬಿಣ ಫೋಲಿಕ್ ಆಮ್ಲದ ಮಾತ್ರೆಗಳನ್ನು ಸೇವಿಸಿದ್ದಾರೆ. ಇವರಲ್ಲಿನ ಕಬ್ಬಿಣದ ಮತ್ತು ಸತುವಿನ ಕೊರತೆಯು ಮಕ್ಕಳಲ್ಲಿ ರಕ್ತಹೀನತೆಗೆ ಸಂಬಂಧಿಸಿದೆ. ಈ ಅಧ್ಯಯನವನ್ನು ಪಿಎಲ್ಒಎಸ್ ಗ್ಲೋಬಲ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟಿಸಲಾಗಿದೆ.
ಪರಿಶಿಷ್ಟ ಪಂಗಡ ಮತ್ತು ಅಸುರಕ್ಷಿತ ಮಲ ವಿಲೇವಾರಿ ಅಭ್ಯಾಸ ಹೊಂದಿರುವ ಮಕ್ಕಳು ಹೆಚ್ಚಿನ ರಕ್ತ ಹೀನತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಹೊಂದಿರುವುದು ಕಂಡು ಬಂದಿದೆ. 12-59 ತಿಂಗಳ ಮೂರನೇ ಒಂದು ಭಾಗದ ಮಕ್ಕಳು ಸೂಕ್ಷ್ಮ ಪೋಷಕಾಂಶ ಮತ್ತು ರಕ್ತ ಹೀನತೆ ಹೊಂದಿದ್ದಾರೆ/ ಅರ್ಧದಷ್ಟು ಮಕ್ಕಳು ಕೇವಲ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಹೊಂದಿರುವುದು ಕಂಡು ಬಂದಿದೆ ಎಂದು ದೆಹಲಿ ಏಮ್ಸ್ನ ಸಂಶೋಧಕರಾದ ಕಪಿಲ್ ಯಾದವ್ ತಿಳಿಸಿದ್ದಾರೆ.
ಸೂಕ್ಷ್ಮ ಪೋಷಕಾಂಶಗಳ ಕೊರತೆಯು ಪ್ರಸವಪೂರ್ವ ಐಎಫ್ಎ ಸೇವನೆ, ಸುರಕ್ಷಿತ ನೈರ್ಮಲ್ಯ ಅಭ್ಯಾಸಗಳುನ್ನು ಹೊಂದಿದೆ. ರಾಷ್ಟ್ರೀಯ ಕುಟುಂಬ ಸಮೀಕ್ಷೆ 5ರ ಪ್ರಕಾರ, ಮಕ್ಕಳಲ್ಲಿನ ರಕ್ತ ಹೀನತೆಯು ಭಾರತದ ಮೇಲೆ ಹೊರೆಯನ್ನು ಹೆಚ್ಚಿಸಿದ್ದು, ಶೇ 67.1ರಷ್ಟು ಮಕ್ಕಳು ಇದರಿಂದ ಬಳಲುತ್ತಿದ್ದಾರೆ.
ರಕ್ತಹೀನತೆಯನ್ನು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ದೇಶದಲ್ಲಿ ಇದರ ಹರಡುವಿಕೆ ಶೇ 40ಕ್ಕಿಂತ ಹೆಚ್ಚಿದೆ. ಭಾರತದಲ್ಲಿ 12 ರಿಂದ 59 ತಿಂಗಳ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣವೂ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಸೂಕ್ಷ್ಮ ಪೋಷಕಾಂಶ ಕೊರತೆ ಮತ್ತು ರಕ್ತ ಹೀನತೆ ಪ್ರಮುಖ ಸಾರ್ವಜನಿಕ ಕಾಳಜಿ ವಿಷಯವಾಗಿದೆ.
ಐದು ವರ್ಷದೊಳಗಿನ ಮಕ್ಕಳಿಗೆ ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಪೂರೈಕೆ ಮಾಡುವುದು. ಹಾಗೇ ರಕ್ತಹೀನತೆಯ ಮುಕ್ತ ಭಾರತ ನಿರ್ಮಾಣ ಮಾಡುವುದು ಸರ್ಕಾರದ ಗುರಿಯಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ಬಡತನವಿರುವ 6 ಜನರ ಪೈಕಿ ಐವರು ಬುಡಕಟ್ಟು ಇಲ್ಲವೇ ಕೆಳಸ್ತರದವರೇ ಆಗಿದ್ದಾರೆ: ವರದಿ