ETV Bharat / health

ಈ ರೋಗ ಲಕ್ಷಣಗಳು ನಿಮಗಿದೆಯೇ? ನಿತ್ಯ ಸರಿಯಾಗಿ ಆಹಾರ ಸೇವಿಸುತ್ತಿಲ್ಲವೇ: ಈ ಬಗ್ಗೆ ತಜ್ಞರ ಹೇಳುವುದೇನು? - WARNING SIGNS OF NOT EATING ENOUGH

Warning Signs of Not Eating Enough: ದೇಹದ ಆರೋಗ್ಯಕ್ಕೆ ಸರಿಯಾದ ಪೋಷಣೆ ಅತ್ಯಗತ್ಯವಾಗಿದೆ. ನೀವು ಸರಿಯಾಗಿ ಆಹಾರ ಸೇವಿಸದಿದ್ದರೆ ಈ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

SIGNS OF NOT EATING ENOUGH  HEALTH CARE TIPS  SYMPTOMS OF POOR EATING  SIDE EFFECTS OF NOT EATING ENOUGH
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : 15 hours ago

Warning Signs of Not Eating Enough: ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬೇಕಾದರೆ ನಿತ್ಯ ಸರಿಯಾದ ಪೋಷಣೆ ಅತ್ಯಗತ್ಯವಾಗಿದೆ. ಉತ್ತಮ ಆಹಾರ ಸೇವಿಸಿದಾಗ ಮಾತ್ರ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ ಹಾಗೂ ನಾವು ಆರೋಗ್ಯವಾಗಿರುತ್ತೇವೆ. ಅತಿಯಾಗಿ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆ. ಆದರೆ, ಅತಿಯಾಗಿ ತಿನ್ನುವುದು ಮಾತ್ರವಲ್ಲ, ಕಡಿಮೆ ತಿನ್ನುವುದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ನಿತ್ಯ ಸಾಕಷ್ಟು ಆಹಾರ ಸೇವಿಸದಿರುವುದು ದೈಹಿಕ, ಮಾನಸಿಕವಾಗಿ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡುತ್ತಾರೆ ಆರೋಗ್ಯ ತಜ್ಞರು. ಈ ವಿಷಯವು ಹಲವು ಅಧ್ಯಯನಗಳಿಂದ ಬಹಿರಂಗವಾಗಿದೆ. ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗಾದರೆ, ಕಡಿಮೆ ಆಹಾರ ಸೇವನೆ ಮಾಡುತ್ತಿದ್ದರೆ ನಿಮಗೆ ಎದುರಾಗುವ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಶಕ್ತಿಯ ಮಟ್ಟ ಕಡಿಮೆ: ನೀವು ನಿತ್ಯ ಸಾಕಷ್ಟು ಆಹಾರ ಸೇವಿಸದಿದ್ದರೆ, ದೇಹದಲ್ಲಿನ ಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಪರಿಣಾಮವಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲೂ ನಮ್ಮ ದೇಹದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗುವುದರಿಂದ ವ್ಯಾಯಾಮ, ದಿನನಿತ್ಯದ ಕೆಲಸಗಳು ಹಾಗೂ ಇತರ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ. ಏನೇ ಮಾಡಿದರೂ ಆಯಾಸವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಕಡಿಮೆ ತೂಕ: ನೀವು ದಿನವೂ ಸಾಕಷ್ಟು ಕ್ಯಾಲೊರಿಗಳನ್ನು ಸೇವಿಸದಿದ್ದರೆ, ತೂಕ ಕಡಿಮೆಯಾಗುತ್ತದೆ. ನಿಮ್ಮ ಬಾಡಿ ಮಾಸ್ ಇಂಡೆಕ್ಸ್ ಚೆಕ್​ ಮಾಡಿಕೊಳ್ಳಿ ಹಾಗೂ ಅದಕ್ಕೆ ಅನುಗುಣವಾಗಿ ತಿನ್ನುವುದು ಬಹಳ ಮುಖ್ಯ. ಸಾಕಷ್ಟು ತಿನ್ನದಿರುವುದು ಕಡಿಮೆ ತೂಕಕ್ಕೆ ಕಾರಣವಾಗುತ್ತದೆ.

ಕೂದಲು ಉದುರುವಿಕೆ: ನೀವು ಅತಿಯಾದ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದೀರಾ? ಸಾಕಷ್ಟು ಆಹಾರ ತೆಗೆದುಕೊಳ್ಳುವುದೂ ಒಂದು ಕಾರಣವಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕ್ಯಾಲೊರಿಗಳು, ಪ್ರೋಟೀನ್​ಗಳು, ಬಯೋಟಿನ್, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳ ಸಾಕಷ್ಟು ಸೇವನೆಯು ಕೂದಲು ನಷ್ಟಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಮಾನಸಿಕ ಆರೋಗ್ಯದ ಸಮಸ್ಯೆಗಳು: ಪೌಷ್ಟಿಕಾಂಶದ ವಿಷಯದಲ್ಲಿ, ನಾವು ಏನು ತಿನ್ನುತ್ತೇವೆ ಮತ್ತು ಎಷ್ಟು ತಿನ್ನುತ್ತೇವೆ ಎಂಬುದು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸರಿಯಾದ ಪೋಷಣೆಯ ಕೊರತೆಯು ಕಿರಿಕಿರಿ ಮತ್ತು ಒತ್ತಡದಂತಹ ವಿವಿಧ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೇ, 2020ರಲ್ಲಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸದಸ್ಯರ ತಂಡವು ನಡೆಸಿದ ಅಧ್ಯಯನವು ಇದೇ ವಿಷಯ ಸ್ಪಷ್ಟಪಡಿಸಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಮಲಬದ್ಧತೆ: ಕಡಿಮೆ ಆಹಾರ ಸೇವನೆ ಹಾಗೂ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಮಲ ರಚನೆಗೆ ಕಡಿಮೆ ತ್ಯಾಜ್ಯ ಉತ್ಪಾದನೆಯೊಂದಿಗೆ ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರದ ನಿಧಾನ ಚಲನೆಗೆ ಇದು ಕಾರಣವಾಗಿದೆ. 2022ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸದಸ್ಯರ ಗುಂಪು ಸಹ ಅಧ್ಯಯನವೊಂದರಲ್ಲಿ ಇದೇ ವಿಷಯ ತಿಳಿಸಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಚರ್ಮದ ಸಮಸ್ಯೆಗಳು: ಅಸಮರ್ಪಕ ಆಹಾರದ ಸೇವಿಸುವುದರಿಂದ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಚರ್ಮವು ತೆಳ್ಳಗೆ ಮತ್ತು ಸುಕ್ಕುಗಟ್ಟಲು ಕಾರಣವಾಗುತ್ತದೆ. ಇದು ಚರ್ಮದ ಅಡಿ ಗಾಯಗಳು ಹಾಗೂ ರಕ್ತನಾಳಗಳಿಗೆ ಹಾನಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಇದರೊಂದಿಗೆ ಸರಿಯಾದ ಪೋಷಣೆಯ ಕೊರತೆಯಿಂದ ಪದೇ ಪದೇ ಅನಾರೋಗ್ಯ, ಮಕ್ಕಳಲ್ಲಿ ಕಳಪೆ ಬೆಳವಣಿಗೆ, ಹಸಿವು ಬದಲಾವಣೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ ಆರೋಗ್ಯ ತಜ್ಞರು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಇದನ್ನೂ ಓದಿ: ನಮ್ಮ ದೇಹಕ್ಕೆ ವಿಟಮಿನ್ ಬಿ12 ಏಕೆ ಮುಖ್ಯ? ಈ ವಿಟಮಿನ್ ಪ್ರಯೋಜನಗಳೇನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.