Low Sodium And Kidney Function: ಮೂತ್ರಪಿಂಡ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಕಿಡ್ನಿಗಳು ಆಹಾರದ ಜೀರ್ಣಕ್ರಿಯೆಯ ಸಮಯದಲ್ಲಿ ಉಂಟಾಗುವ ಕಲ್ಮಶಗಳನ್ನು ಮತ್ತು ದೇಹದಲ್ಲಿ ನಡೆಯುವ ಯಾವುದೇ ಚಯಾಪಚಯ ಕ್ರಿಯೆಯಲ್ಲಿ ರೂಪುಗೊಳ್ಳುವ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಮೂಲಕ ದೇಹವನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹಲವು ಕಾರಣಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಳಾದ ಕಿಡ್ನಿಗಳು ಮತ್ತೆ ಆರೋಗ್ಯಕರವಾಗಿ ಇರುವಂತೆ ಮಾಡುವುದು ಹೇಗೆ ಎಂಬುದನ್ನು ಅಮೆರಿಕದ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿದೆ.
ಉಪ್ಪು ಬಳಸುವುದನ್ನು ಕಡಿಮೆ ಮಾಡಿ: ಹೆಚ್ಚಿನ ಜನರಲ್ಲಿ ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳು ಬೇಗನೆ ಹೋಗುವುದಿಲ್ಲ. ಇದು ಮೂತ್ರಪಿಂಡದ ಸಂಪೂರ್ಣ ಹಾನಿಗೆ ಕಾರಣವಾಗಬಹುದು. ಕಿಡ್ನಿ ವಿಫಲವಾದರೆ ಡಯಾಲಿಸಿಸ್ ಮತ್ತು ಕಿಡ್ನಿ ಕಸಿ ಮಾಡದೇ ಬೇರೆ ದಾರಿಯಿಲ್ಲ. ಆದರೆ, ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕೆಕ್ ಸ್ಕೂಲ್ ಆಫ್ ಮೆಡಿಸಿನ್‌ನ ಡಾ.ಜಾನೋಸ್ ಪೆಟ್ಟಿ-ಪೀಟರ್ಡಿ ಅವರ ತಂಡವು ಹಾನಿಗೊಳಗಾದ ಮೂತ್ರಪಿಂಡಗಳ ಆರೋಗ್ಯ ಕಾಪಾಡುವುದು ಹೇಗೆ ಎನ್ನುವ ಕುರಿತು ಅಧ್ಯಯನ ನಡೆಸಿದೆ. ಅವರು ನಡೆಸಿದ ಅಧ್ಯಯನದಲ್ಲಿ ಹಲವು ಪ್ರಮುಖ ವಿಷಯಗಳನ್ನು ಬಹಿರಂಗವಾಗಿವೆ.
ಇಲಿಗಳ ಮೇಲೆ ಸಂಶೋಧನೆ ಮಾಡಲಾಗಿದ್ದು, ಇಲಿಗಳಿಗೆ ಕೆಲವು ದಿನಗಳವರೆಗೂ ಕಡಿಮೆ ಉಪ್ಪು ಬಳಕೆ ಮಾಡಿದ ಆಹಾರವನ್ನು ನೀಡಲಾಯಿತು. ಅಷ್ಟೇ ಅಲ್ಲ ದೇಹದಲ್ಲಿನ ದ್ರವದ ಪ್ರಮಾಣ ಕಡಿಮೆ ಕೂಡಾ ಮಾಡಲಾಗಿತ್ತು. ಈ ಮೂಲಕ ಇಲಿಗಳ ಕೆಲವು ಮೂತ್ರಪಿಂಡದ ಜೀವಕೋಶಗಳು ಮೊದಲಿನಂತೆ ಅಥವಾ ಪುನರುಜ್ಜೀವನಗೊಂಡವು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಮೂತ್ರಪಿಂಡದ ಮ್ಯಾಕುಲಾ ಡೆನ್ಸಾದಲ್ಲಿನ ಜೀವಕೋಶಗಳು ಇದಕ್ಕೆ ಸಹಾಯ ಮಾಡುತ್ತವೆ ಎಂಬ ಅಂಶವೂ ಪತ್ತೆಯಾಯ್ತು. ಈ ಜೀವಕೋಶಗಳು ಉಪ್ಪು ಪತ್ತೆ, ರಕ್ತ ಶೋಧನೆ ಮತ್ತು ಹಾರ್ಮೋನ್ ಬಿಡುಗಡೆಯಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಕಡಿಮೆ ಉಪ್ಪು ಸೇವನೆಯಿಂದ ಹಾನಿಗೊಳಗಾದ ಮೂತ್ರಪಿಂಡದ ಜೀವಕೋಶಗಳ ಮೊದಲಿನಂತೆ ಆಗಿ ಪ್ರಮುಖ ಪಾತ್ರವಹಿಸುತ್ತವೆ.
ಹಾನಿಗೊಳಗಾದ ಮೂತ್ರಪಿಂಡಗಳ ವಿಕಸನ: ಈ ಅಧ್ಯಯನದಲ್ಲಿ, ಹಾನಿಗೊಳಗಾದ ಮೂತ್ರಪಿಂಡಗಳು ಹೇಗೆ ವಿಕಸನಗೊಂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಪ್ರಯತ್ನಿಸಿದರು. ಮೀನುಗಳಲ್ಲಿನ ಮೂತ್ರಪಿಂಡದ ರಚನೆಗಳು ಕ್ರಮೇಣ ಹೆಚ್ಚು ಉಪ್ಪು ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ. ಜೀವಿಗಳು ಉಪ್ಪುಸಹಿತ ಸಾಗರದಿಂದ ಶುಷ್ಕ ವಾತಾವರಣಕ್ಕೆ ಬಂದಾಗ ಈ ಪ್ರಕ್ರಿಯೆಯು ಅಗತ್ಯವಾಗಿತ್ತು. ಸಸ್ತನಿಗಳು ಮತ್ತು ಪಕ್ಷಿಗಳ ಮೂತ್ರಪಿಂಡಗಳ ಮ್ಯಾಕುಲಾ ಡೆನ್ಸಾ ಈ ಭಾಗದಿಂದ ರೂಪುಗೊಳ್ಳುತ್ತವೆ. ನಂತರ, ಜೀವಿಗಳ ಉಳಿವಿಗೆ ಈ ಅಂಶ ನೆರವಾಯಿತು.
ಈ ಸಂಶೋಧನೆಯಲ್ಲಿ, ಇಲಿಗಳಿಗೆ ಎರಡು ವಾರಗಳ ಕಾಲ ಕಡಿಮೆ-ಉಪ್ಪಿನ ಆಹಾರವನ್ನು ನೀಡಲಾಯಿತು. ಜೊತೆಗೆ ಎಸಿಇ ಪ್ರತಿರೋಧಕ ಮಾದರಿಯ ಔಷಧವನ್ನೂ ನೀಡಲಾಯಿತು. ಅದು ಉಪ್ಪು ಮತ್ತು ದ್ರವದ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಹೀಗಾಗಿ ಮ್ಯಾಕುಲಾ ಡೆನ್ಸಾ ಕೋಶಗಳ ಮೊದಲಿನಂತಾಗಲು ಪ್ರಾರಂಭವಾದವು ಎಂದು ಕಂಡು ಬಂದಿದೆ. ಈ ಭಾಗದಿಂದ ಬರುವ ಸಂಕೇತಗಳನ್ನು ನಿರ್ಬಂಧಿಸುವ ಔಷಧದಿಂದ ಪುನರುಜ್ಜೀವನವಾಗುವ ಪ್ರಕ್ರಿಯೆಯನ್ನು ನಿರ್ಬಂಧಿಸಬಹುದು. ಮೂತ್ರಪಿಂಡದ ಕೋಶಗಳ ದುರಸ್ತಿಯಲ್ಲಿ ಮ್ಯಾಕುಲಾ ಡೆನ್ಸಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದುಬಂದಿದೆ. ಸಂಶೋಧಕರು ಈ ಕೋಶಗಳನ್ನು ವಿಶ್ಲೇಷಿಸಿದಾಗ, ಅವುಗಳ ಜೀನ್‌ಗಳು ಮತ್ತು ರಚನೆಗಳು ನರ ಕೋಶಗಳಂತೆಯೇ ಇರುವುದನ್ನು ಕಂಡು ಆಶ್ಚರ್ಯವಾಯಿತು. ಏಕೆಂದರೆ ಚರ್ಮದಂತಹ ಇತರ ಭಾಗಗಳ ಪುನರುತ್ಪಾದನೆಯಲ್ಲಿ ನರ ಕೋಶಗಳು ಪ್ರಮುಖ ಪಾತ್ರವಹಿಸುತ್ತವೆ.
ಸಿಸಿಎನ್1 ನಂತಹ ಕೆಲವು ಜೀನ್‌ಗಳ ಸಂಕೇತಗಳು ಇಲಿಗಳಲ್ಲಿ ಕಡಿಮೆ ಉಪ್ಪಿನ ಆಹಾರವನ್ನು ನೀಡುತ್ತವೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಸಿಸಿಎನ್1 ಜೀನ್ ಕಾರ್ಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಭಾರಿ ಮಹತ್ವ ಪಡೆದುಕೊಂಡಿದೆ. ಈ ಅಧ್ಯಯನವು ಉಪ್ಪನ್ನು ಕಡಿಮೆ ಮಾಡುವುದರಿಂದ ಈ ಜೀನ್‌ನ ಕಾರ್ಯವನ್ನು ಸುಧಾರಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಓದುಗರ ಗಮನಕ್ಕೆ: ಈ ಲೇಖನದಲ್ಲಿ ನಿಮಗೆ ಒದಗಿಸಲಾದ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.